ಜೂ. 26 : ಪುತ್ತೂರಿನಲ್ಲಿ ಗ್ರಾಫಿಕ್ ಡಿಸೈನಿಂಗ್ ಕಾರ್ಯಾಗಾರ

0

ಪುತ್ತೂರು : ಗ್ರಾಫಿಕ್ ಡಿಸೈನಿಂಗ್ ಕ್ಷೇತ್ರದಲ್ಲಿ ಹೊಸತನದ ಅಲೆಯೆಬ್ಬಿಸಿದ ಪುತ್ತೂರಿನ ಆರ್ವಿ ಇಂಟರ್‌ಗ್ರಾಫಿಕ್ಸ್ ಆಶ್ರಯದಲ್ಲಿ ಫೋಟೋಶಾಪ್, ಕೋರಲ್ ಡ್ರಾ ಬೇಸಿಕ್ ಕೋರ್ಸು ಮಾಡಿದ ವಿದ್ಯಾರ್ಥಿಗಳಿಗೆಂದೇ ಅನುಭವೀ ಗ್ರಾಫಿಕ್ ಡಿಸೈನರ್‌ಗಳಿಂದ ಆಯೋಜಿಸಲಾದ ಒಂದು ದಿನದ ಗ್ರಾಫಿಕ್ ಡಿಸೈನ್ ಕಾರ್ಯಾಗಾರವು ಜೂ. 26ರಂದು ಬ್ಲಡ್‌ಬ್ಯಾಂಕ್ ಬಳಿಯ ರೋಟರಿ ಟ್ರಸ್ಟ್ ಹಾಲ್‌ನಲ್ಲಿ ನಡೆಯಲಿದೆ.

ಇಲ್ಲಿ ಬೇಸಿಕ್ ಫೋಟೋಶಾಪ್ ಹಾಗೂ ಕೋರಲ್ ಡ್ರಾ ಕೋರ್ಸು ಮಾಡಿದ ಅಭ್ಯರ್ಥಿಗಳಿಗೆ ಡಿಸೈನ್ ಹೇಗೆ ಮಾಡುವುದು, ಅದರ ವಿವರಣೆ ಹಾಗೂ ಪ್ರಿಂಟಿಂಗ್‌ಗೆ ಪೂರಕವಾದ ಮಾಹಿತಿಗಳನ್ನು ಸ್ಯಾಂಪಲ್ ಸಹಿತ ತಿಳಿಸುವುದರಿಂದ ಅಭ್ಯರ್ಥಿಗಳಿಗೆ ಮುಂದಿನ ದಿನಗಳಲ್ಲಿ ಗ್ರಾಫಿಕ್ ಡಿಸೈನಿಂಗ್ ಕ್ಷೇತ್ರಕ್ಕೆ ಕಾಲಿಡುವ ಸಂದರ್ಭದಲ್ಲಿ ಈ ಮಾಹಿತಿ ಪೂರಕವಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ವಿವರಗಳಿಗಾಗಿ 7760814824 ಅನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here