ರಾಮಕುಂಜ ಕಿಂಡರ್ ಗಾರ್ಟನ್‌ನಲ್ಲಿ ರೆಡ್ ಡೇ ಆಚರಣೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್‌ನಲ್ಲಿ ಜೂ.22ರಂದು ರೆಡ್ ಡೇ ಆಚರಿಸಲಾಯಿತು.


ಕಿಂಡರ್ ಗಾರ್ಟನ್‌ನ ಪುಟಾಣಿ ಮಕ್ಕಳಿಗೆ ಕೆಂಪು ಬಣ್ಣವನ್ನು ಪರಿಚಯಿಸಲು ಹಾಗೂ ಮಕ್ಕಳ ಮುಗ್ದ ಮನದಲ್ಲಿ ಬಣ್ಣಗಳ ತಿಳುವಿಕೆ ಮನದಟ್ಟಾಗಲು ಅತಿ ಸರಳವಾಗಿ ವಿವಿಧ ಕೆಂಪು ಬಣ್ಣಗಳಿಂದ ತಯಾರಿಸಿದ ಕ್ರಾಫ್ಟ್‌ಗಳು, ಬಲೂನುಗಳು, ಹಲವು ರೀತಿಯ ಆಟಿಕೆಗಳು ಹಾಗೂ ವಿವಿಧ ರೀತಿಯ ಕೆಂಪು ಬಣ್ಣದ ವಸ್ತುಗಳನ್ನು ಒಂದೇ ಕಡೆ ಜೋಡಿಸಿ, ಅಲಂಕರಿಸಿ, ಮಕ್ಕಳಿಗೆ ಕೆಂಪು ಬಣ್ಣದ ಬಟ್ಟೆ ಧರಿಸಿ ಕೆಂಪು ಬಣ್ಣದ ಗುರುತಿಸುವಿಕೆ ಗ್ರಹಿಸುವ ನಿಟ್ಟಿನಲ್ಲಿ ರೆಡ್ ಡೇ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಆಡಳಿತಾಧಿಕಾರಿ ಆನಂದ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಲೋಹಿತಾ ಎ., ಶಿಕ್ಷಕಿಯರು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here