ಪುತ್ತೂರು; ಜಲಾಲಿಯ ಯಂಗ್ಮೆನ್ಸ್ ಕಮಿಟಿ ಕೆಐಸಿ ಕುಂಬ್ರ ವಾರ್ಷಿಕ ಮಹಾಸಭೆಯು ಕೆಐಸಿ ವ್ಯವಸ್ಥಾಪಕ ಅನೀಸ್ ಕೌಸರಿ ಇವರ ಅಧ್ಯಕ್ಷತೆಯಲ್ಲಿ ಮಸೀದಿ ಸಭಾಂಗಣದಲ್ಲಿ ನಡೆಯಿತು.
2022-23 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. 2021 ನೇ ಸಾಲಿನ ಲೆಕ್ಕ ಪತ್ರವನ್ನು ಕಾರ್ಯದರ್ಶಿ ವಾಚಿಸಿದರು. ಕೆಐಸಿ ಮೆನೇಜರ್ ಸತ್ತಾರ್ ಕೌಸರಿ ಲೆಕ್ಕ ಪತ್ರವನ್ನು ಪರಿಶೀಲಿಸಿ ಅಂಗಿಕರಿಸಿದರು. ನಂತರ ಮುಂದಿನ ಅವಧಿಗೆ ಅಧ್ಯಕ್ಷರಾಗಿ ಫಾರೂಕ್ ಮಗಿರೆ, ಉಪಾಧ್ಯಕ್ಷರಾಗಿ ಆಸೀಫ್ ಕಡ್ತಿಮಾರ್, ಶೇರೀಫ್ ಘಟ್ಟಮನೆ, ಪ್ರದಾನ ಕಾರ್ಯದರ್ಶಿಯಾಗಿ ಅಶ್ರಫ್ಸಾ ರೆಪುಣಿ, ಜೊತೆ ಕಾರ್ಯದರ್ಶಿಯಾಗಿ ಲತೀಫ್ ಒಖಿ, ಸಾದಿಕ್ ಮಗಿರೆ ಕೋಶಾಧಿಕಾರಿಯಾಗಿ ಅಬ್ದುಲ್ಲಾ ಬೊಳ್ಳಾಡಿ ಸಂಘಟನೆ ಕಾರ್ಯದರ್ಶಿಯಾಗಿ ಸಲಾಂ ಕುಂಬ್ರ, ವರ್ಕಿಂಗ್ ಕಾರ್ಯದರ್ಶಿಯಾಗಿ ರಫೀಕ್ ಸಾರೆಪುಣಿ, ಲೆಕ್ಕ ಪರಿಶೋಧಕರಾಗಿ ಬಶೀರ್ ಘಟ್ಟಮನೆ, ಕಾರ್ಯಕಾರಿ ಸದಸ್ಯರಾಗಿ ಅಶ್ರಫ್ ಸನ್ ಶೇನ್, ಅಶ್ರಫ್ ಘಟ್ಟಮನೆ, ಊಂ ಇಕ್ಬಾಲ್ ಸಾರೆಪುಣಿ, ಬಶೀರ್ ಸಾರೆಪುಣಿ ಹನೀಫ್ ಕೊಟ್ರಾಸ್ ಇವರನ್ನು ನೇಮಿಸಲಾಯಿತು. ಕಾರ್ಯದರ್ಶಿ ಸ್ವಾಗತಿಸಿ ವಂದಿಸಿದರು.