ಭಕ್ತಕೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

  • 4,79,623.71 ನಿವ್ವಳ ಲಾಭ; ಸದಸ್ಯರಿಗೆ 16% ಡಿವಿಡೆಂಡ್-ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ

ಪುತ್ತೂರು: ಭಕ್ತಕೋಡಿ ಹಾಲು ಉತ್ಪಾದಕರ ಸಹಕಾರ ಸಂಘವು 2021-21ನೇ ಸಾಲಿನಲ್ಲಿ ರೂ.4,00,21,700.83 ವ್ಯವಹಾರ ಮಾಡಿದ್ದು ರೂ.88,65,195.79ಗಳ 2,98,510.32 ಲೀಟರ್ ಹಾಲನ್ನು ಖರೀದಿಸಿ 2,72,916 ರೂ.ಗಳ 6,498 ಲೀಟರ್ ಹಾಲನ್ನು ಸ್ಥಳೀಯವಾಗಿ ಸಂಘದಿAದ ಮಾರಾಟ ಮಾಡಲಾಗಿದೆ. ಹಾಗೂ 9389560.24 ರೂ.ಗಳ 3,01,328 ಕೆ.ಜಿ ಹಾಲನ್ನು ದ.ಕ ಹಾಲು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. ಅದೇ ರೀತಿ 15,46,000 ರೂ.ಗಳ 78 ಟನ್ ನಂದಿನಿ ಪಶು ಆಹಾರ ಹಾಗೂ ರೂ.40,600.00 ರೂ.ಗಳ ಲವಣ ಮಿಶ್ರಣ ಆಹಾರ ಹಾಲು ಉತ್ಪಾದಕರಿಗೆ ಸಮರ್ಕಕವಾಗಿ ವಿತರಣೆ ಮಾಡಿದೆ.

ವರದಿ ಸಾಲಿನಲ್ಲಿ ಸಂಘವು 4,79,623.71 ನಿವ್ವಲ ಲಾಭ ಗಳಿಸಿದ್ದು ಸದಸ್ಯರಿಗೆ 16% ಡಿವಿಡೆಂಡ್ ಹಾಗೂ ಪ್ರತೀ ಲೀಟರಿಗೆ ರೂ.77 ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಹೇಳಿದರು.

ಜೂ.23ರಂದು ಭಕ್ತಕೋಡಿಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಸಂಘವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಸದಸ್ಯರು ಉತ್ತಮ ಸಹಕಾರ ನೀಡುತ್ತಿದ್ದಾರೆ, ಮುಂದಕ್ಕೂ ನಿಮ್ಮೆಲ್ಲರ ಸಹಕಾರದಿಂದ ಸಂಘವನ್ನು ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಾಗುವುದು ಎಂದು ಅವರು ಹೇಳಿದರು.

ಸಂಘದ ಕಾರ್ಯದರ್ಶಿ ಪ್ರಪುಲ್ಲನಾಥ ರೈ ವರದಿ ವಾಚಿಸಿದರು.ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ವಿಶ್ವನಾಥ ರೈ ಬಿ, ನಿರ್ದೇಶಕರಾದ ಎಸ್.ಡಿ ವಸಂತ, ಅದ್ರಾಮ ಕೆ, ಗುಣಪಾಲ ಗೌಡ, ಬೆಳಿಯಪ್ಪ ಗೌಡ ಕೆ.ಎಂ, ಯಶೋಧರ ರೈ, ಪುಷ್ಪಾವತಿ ಕೆ, ಕವಿತಾ ಕೆ, ಕೊರಗಪ್ಪ ಬಿ, ಐತ್ತಪ್ಪ ನಾಯ್ಕ, ಶಶಿಧರ ಎಸ್.ಡಿ, ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ವಿಶ್ವನಾಥ ರೈ ಬಿ ಸ್ವಾಗತಿಸಿದರು. ನಿರ್ದೇಶಕ ಶಶಿಧರ ಎಸ್.ಡಿ ವಂದಿಸಿದರು. ಸಂಘದ ಹಾಲು ಪರೀಕ್ಷಕ ಐತ್ತಪ್ಪ ಪಿ ಸಹಕರಿಸಿದರು. ಸಭೆಯಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here