ಶ್ರೀ ಧ. ಮಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ ವತಿಯಿಂದ 60 ಕಡೆಗಳಲ್ಲಿ ಯೋಗ ಪ್ರಾತ್ಯಕ್ಷಿಕೆ

0

ಆಲಂಕಾರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ಡಾ l ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಜೂನ್ 21ರಂದು ಆಚರಿಸಲ್ಪಡುವ 8ನೇ ವಿಶ್ವ ಯೋಗ ದಿನಾಚರಣೆಯ ‘ನಮ್ಮ ತಾಲೂಕು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಾಲೂಕು’ ಎಂಬ ಧ್ಯೇಯದೊಂದಿಗೆ ಬೆಳ್ತಂಗಡಿ  ತಾಲೂಕಿನ ಜನತೆಯನ್ನು ಒಳಗೊಂಡು 60 ಉಪಕೇಂದ್ರಗಳನ್ನು ಆಯ್ಕೆ ಮಾಡಿ ಯೋಗ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಶಿಬಿರ ನಡೆಯಿತು ಎಂದು ಶ್ರೀ ಧ. ಮ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಪ್ರಶಾಂತ್ ಶೆಟ್ಟಿ ತಿಳಿಸಿದರು.

ಡಾ. ಹೆಗ್ಗಡೆ ಮಾರ್ಗದರ್ಶನದಲ್ಲಿ ಕಳೆದ 7 ವರ್ಷಗಳಿಂದ ವಿಶ್ವ ಯೋಗ ದಿನಾಚರಣೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಚರಿಸಿಕೊಂಡು ಬಂದಿದ್ದೇವೆ. ಈ ವರ್ಷ ಬೆಳ್ತಂಗಡಿ ತಾಲೂಕಿನ 12 ಪ್ರಮುಖ ಕೇಂದ್ರಗಳಾದ ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು, ನೆಲ್ಯಾಡಿ, ಕಕ್ಕಿಂಜೆ, ಕೊಕ್ಕಡ, ಸೌತಡ್ಕ, ದಿಡುಪೆ, ಮಡಂತ್ಯಾರು, ಇದಂಬೆಟ್ಟು, ಗುರುವಾಯಕೆರೆಗಳಲ್ಲಿ ವಿಶ್ವ ಯೋಗ ದಿನವನ್ನು ಅದ್ಧೂರಿಯಾಗಿ ಆಚರಿಸಲು ಉದ್ದೇಶಿಸಲಾಗಿದೆ ಎಂದರು. ಜೂನ್ 21 ರಂದು ನಡೆದ ವಿಶ್ವ ಯೋಗ ದಿನಾಚರಣೆಗೆ 15 ಪ್ರಮುಖ ಕೇಂದ್ರಗಳ ಎಲ್ಲ 60 ಉಪಕೇಂದ್ರಗಳ ಶಿಬಿರಾರ್ಥಿಗಳ ಸಹಿತ 2000 ಕ್ಕೂ ಮಿಕ್ಕಿದ ಮಂದಿ ಪಾಲ್ಗೊಂಡಿದ್ದರು .

ಎಸ್ ಡಿ ಎಮ್ ಸೊಸೈಟಿ ಕಾರ್ಯದರ್ಶಿ ಡಿ ಎಂ ಹರ್ಷೆಂದ್ರ ಕುಮಾರ್ ಮಾರ್ಗದರ್ಶನ ನೀಡುತ್ತಿದ್ದರೆ ಬೆಳ್ತಂಗಡಿ ತಾಲ್ಲೂಕು ಕಛೇರಿ  ಸಿಬ್ಬಂದಿ   ಸೇರಿದಂತೆ ವಿವಿಧೆಡೆ ಪಾತ್ಯಕ್ಷಿಕೆ ಆರಂಭಿಸಲಾಗಿದೆ ಎಂದರು. ಶ್ರೀ ರಾಮಕುಂಜೇಶ್ವರ ಶಾಲಾ ಕಾಲೇಜುಗಳಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನದಂದು ಸೇಸಪ್ಪ ರೈ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ.ಬಾಲಕೃಷ್ಣ ಶೆಟ್ಟಿ, ಡಾ.ಗೀತಾ ಬಿ ಶೆಟ್ಟಿ,  ತರಬೇತುದಾರರಾದ ಡಾ.ಕಾಡಗೌಡ ಪಾಟೀಲ್, ವೀರನಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here