ಕಾಂಗ್ರೆಸ್‌ನ ಒಲೈಕೆಯ ರಾಜಕಾರಣದ ವಿರುದ್ಧ ಜನಸಂಘದ ಕೆಲಸ ಕಾರ್ಯ – ಡಾ| ಶ್ಯಾಮಪ್ರಸಾದ್ ಮುಖರ್ಜಿ ಬಲಿದಾನ ದಿವಸ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು

0

ದೇಶದ ಧಿಕ್ಕನ್ನು ಬದಲಾಯಿಸುವ ವಿಚಾರಧಾರೆ ನೀಡಿದವರು – ಗೋಪಾಲಕೃಷ್ಣ ಹೇರಳೆ

ಪುತ್ತೂರು: ಬಹುಸಂಖ್ಯಾತರನ್ನು ಮತ್ತು ಅಲ್ಪಸಂಖ್ಯಾತರನ್ನು ವಿಭಜಿಸುವ ಕೆಲಸವನ್ನು ಸ್ವಾತಂತ್ರ್ಯಪೂರ್ವದಲ್ಲೇ ಕಾಂಗ್ರೆಸ್ ಮಾಡುತ್ತಾ ಬಂದಿತ್ತು. ಇಂತಹ ಒಲೈಕೆಯ ರಾಜಕಾರಣ ಇರಬಾರದು ಎಂದು ಭಾರತೀಯ ಜನಸಂಘ ಅವತ್ತೆ ಕೆಲಸ ಕಾರ್ಯ ಮಡಿ ಇವತ್ತು ಮುಂದುವರಿಸಿಕೊಂಡು ಬಂದಿದೆ. ಇದಕ್ಕೆಲ್ಲ ಕಾರಣ ಡಾ| ಶ್ಯಾಮಪ್ರಸಾದ್ ಮುಖರ್ಜಿಯವರು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು ಬಿಜೆಪಿ ಕಚೇರಿಯಲ್ಲಿ ಡಾ| ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 72 ವರ್ಷದ ಹಿಂದೆ ಕಾಂಗ್ರೆಸ್‌ನ ಆಳ್ವಿಕೆಯಲ್ಲಿ ಅಖಂಡ ಭಾರತ ತ್ರಿಖಂಡ ಆದಾಗ ದೇಶದ ಬಗ್ಗೆ ಚಿಂತನೆ ಮಾಡಬೇಕೆಂಬ ಪಕ್ಷ ಬೇಕೆಂದು ಹೇಳಿ ಯೋಚನೆ ಮಾಡಿದವರಲ್ಲಿ ಶ್ಯಾಮಪ್ರಸಾದ್ ಮುಖರ್ಜಿಯವರು ಒಬ್ಬರು ಅವರ ಚರಿತ್ರೆಯನ್ನು ಓದಿದಾಗ ಸಣ್ಣ ವಯಸ್ಸಿನಲ್ಲೇ ಅನೇಕ ಸಾಧನೆ ಮಾಡಿರುವುದು ತಿಳಿದು ಬರುತ್ತದೆ. ನೆಹರು ಅಡಳಿತದಲ್ಲಿ ಕೈಗಾರಿಕ ಸಚಿವರಾಗಿ, ಬಿಜೆಪಿ ಜನಸಂಘದ ಸ್ಥಾಪಕಾಧ್ಯಕ್ಷರಾಗಿ ಈ ದೇಶ ಹೇಗಿರಬೇಕೆಂದು ಪಂಚ ನಿಷ್ಠೆಯ ಆಧಾರದಲ್ಲಿ ಸಂಘಟನೆ ಇರಬೇಕೆಂದು ತೋರಿಸಿಕೊಟ್ಟ ಅವರ ಆಡಳಿತ, ಸಂಘಟನೆ, ದೇಶಪ್ರೇಮ ಎಲ್ಲವು ನಮ್ಮ ಕಾರ್ಯಕರ್ತರಿಗೆ ಪ್ರೇರಣೆ, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವೆಲ್ಲ ಮುನ್ನಡೆಯಬೇಕೆಂದು ಹೇಳಿದರು.

ದೇಶದ ಧಿಕ್ಕನ್ನು ಬದಲಾಯಿಸುವ ವಿಚಾರಧಾರೆ ನೀಡಿದವರು:

ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಅವರು ಡಾ| ಶ್ಯಾಮಪ್ರಸಾದ್ ಮುಖರ್ಜಿ ಅವರ ವಿಚಾರಧಾರೆಯ ಕುರಿತು ಮಾತನಾಡಿದರು. ಕೇವಲ 14 ವರ್ಷ ರಾಜಕೀಯ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ ಡಾ| ಶ್ಯಾಮಪ್ರಸಾದ್ ಮುಖರ್ಜಿಯವರು ದೇಶದ ದಿಕ್ಕನ್ನೇ ಬದಲಾಯಿಸುವಂತಹ ವಿಚಾರಧಾರೆಯನ್ನು ಕೊಟ್ಟರು. ಈ ವಿಚಾರಧಾರೆಯ ಆಧಾರದಲ್ಲಿ ನಮ್ಮ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದರು. ಜನಸಂಘದ ಸ್ಥಾಪಕ ಅಧ್ಯಕ್ಷರಾಗಿ ಜವಾಬ್ದಾರಿ ತೆಗೆದು ಕೊಂಡ ಬಳಿಕ ಪ್ರಥಮ ಚುನಾವಣೆಯಲ್ಲಿ ಮೂರು ಸಿಟ್ ಬಂದಿತ್ತು. ಆಗ ನೆಹರುರವರು ಜನ ಸಂಘವನ್ನು ನಾನು ಮುಗಿಸುತ್ತೇನೆ ಎಂದು ಹೇಳಿಕೆ ನೀಡಿದಾಗ ಅದಕ್ಕೆ ಉತ್ತರವಾಗಿ ಜನಸಂಘದ ನಿರ್ಮೂಲಣಾ ಮನಸ್ಥಿತಿಯಿರುವ ಎಲ್ಲಾ ವ್ಯಕ್ತಿಗಳನ್ನು ದೇಶದಿಂದ ನಿರ್ಮೂಲನೆ ಮಾಡುತ್ತೇವೆ ಎಂದು ಸವಾಲು ಹಾಕಿ ರಾಷ್ಟ್ರಕಾಯ ಹೇಗೆ ಮಾಡಬೇಕೆಂದು ತೋರಿಸಿಕೊಟ್ಟರು ಎಂದರು. ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಡಾ| ಶ್ಯಾಮಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಲಾಯಿತು. ಮುಂಡೂರು ಗ್ರಾ.ಪಂ ಸದಸ್ಯ ಅಶೋಕ್ ಸರ್ವೆ ಪ್ರಾರ್ಥಿಸಿದರು. ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಕಾರ್ಯಕ್ರಮ ನಿರ್ವಹಿಸಿದರು.

ನಗರಸಭೆ ಉಪಾಧ್ಯಕ್ಷ ವಿದ್ಯಾ ಆರ್ ಗೌರಿ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಶಾಂತಿವನ, ನಗರಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ಮಂಡಲದ ಉಪಾಧ್ಯಕ್ಷೆ ಜ್ಯೋತಿ ಆರ್ ನಾಯಕ್, ನಗರಸಭಾ ಸದಸ್ಯರಾದ ದೀಕ್ಷಾ ಪೈ, ಪದ್ಮನಾಭ ನಾಯ್ಕ್, ಶಿವರಾಮ ಸಪಲ್ಯ, ನವೀನ್ ಪೆರಿಯತ್ತೋಡಿ, ಶಶುಕಲಾ ಸಿ ಎಸ್, ಮನೋಹರ್ ಕಲ್ಲಾರೆ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ರಾಮದಾಸ್ ಹಾರಾಡಿ, ಮಾಜಿ ಪುರಸಭೆ ಅಧ್ಯಕ್ಷ ಯು ಲೋಕೇಶ್ ಹೆಗ್ಡೆ, ನಗರಸಭೆ ಮಾಜಿ ಸದಸ್ಯೆ ಸ್ವರ್ಣಲತಾ ಹೆಗ್ಡೆ, ಸತೀಶ್ ನಾಕ್ ಪರ್ಲಡ್ಕ, ಬಿಜೆಪಿ ಮಹಿಳಾ ಮೋರ್ಚದ ಉಷಾ ನಾರಾಯಣ್, ರೈತ ಮೋರ್ಚಾದ ಅಧ್ಯಕ್ಷ ಸುರೇಶ್ ಕಣ್ಣರಾಯ, ಯುವ ಮೋರ್ಚಾ ಸುನಿಲ್ ದಡ್ಡು, ಕೃಷಿಕ ಸಮಾಜದ ಅಧ್ಯಕ್ಷರಾಗಿರುವ ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರದ ಸಂಚಾಲಕ ವಿಜಯ ಕುಮಾರ್ ಕೋರಂಗ, ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್, ಪಾಣಾಜೆ ಮಹಾಶಕ್ತಿ ಕೇಂದ್ರ ಸಂಚಾಲಕ ಜಯರಾಮ ಪೂಜಾರಿ, ಉಪ್ಪಿನಂಗಡಿ ಮಹಾಶಕ್ತಿಕೇಂದ್ರದ ಸಂಚಾಲಕ ಮುಕುಂದ ಬಜತ್ತೂರು, ಕೆಡಿಪಿ ನಾಮನಿರ್ದೇಶಿತ ಸದಸ್ಯ ಲೋಹಿತ್ ಅಮ್ಚಿನಡ್ಕ, ಪಂಚಾಯತ್ ಸದಸ್ಯ ಮಹೇಶ್ ಕೇರಿ, ಗೋವರ್ಧನ್, ವಿಶ್ವನಾಥ ಕುಲಾಲ್, ಅಶೋಕ್ ಹಾರಾಡಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here