ನಾಣಿಲ ಶಾಲೆಗೆ ಪ್ರಿಂಟರ್ ಕೊಡುಗೆ

0

ಕಾಣಿಯೂರು: ವಕೀಲರಾದ ವಿಜಿತ್ ಮಾಚಿಲರವರ ಮಗಳಾದ ಯದ್ವಿ ಇವರ ಪ್ರಥಮ ವರ್ಷದ ಹುಟ್ಟುಹಬ್ಬದ ನೆನಪಿಗಾಗಿ ನಾಣಿಲ ಸ ಹಿ ಪ್ರಾ ಶಾಲೆಗೆ ಪ್ರಿಂಟರನ್ನು ಕೊಡುಗೆಯಾಗಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ವಿಜಿತ್ ರವರ ಪತ್ನಿ ಪ್ರಮೀಳಾ ವಿಜಿತ್, ತಂದೆ ಪೆರ್ಗಡೆ ಗೌಡ ಮಾಚಿಲ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತ ದಲಾರಿ, ಉಪಾಧ್ಯಕ್ಷೆ ಕುಸುಮಾವತಿ ಹಾಗೂ ಸದಸ್ಯರು ಶಿಕ್ಷಕ ವೃಂದ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಪದ್ಮಯ್ಯ ಗೌಡ ಸ್ವಾಗತಿಸಿ, ಸಹ ಶಿಕ್ಷಕಿ ಲೀನಾ ಲಸ್ರಾದೊ ವಂದಿಸಿದರು.

LEAVE A REPLY

Please enter your comment!
Please enter your name here