ಮಂಜಲ್ಪಡ್ಪು: ಬೈಕ್, ರಿಕ್ಷಾ ಡಿಕ್ಕಿ

0

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಂಜಲ್ಪಡ್ಪು ಸಮೀಪ ಬೈಕ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ಘಟನೆ ಜೂ. 24ರ ಬೆಳಿಗ್ಗೆ ನಡೆದಿದ್ದು, ಆಟೋ ರಿಕ್ಷಾದಲ್ಲಿದ್ದ ಮಹಿಳೆಗೆ ತೀವ್ರ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಪುತ್ತೂರು ಕಡೆಯಿಂದ ಹೋಗುತ್ತಿದ್ದ ಬೈಕ್ ಮತ್ತು ವಿರುದ್ಧ ಧಿಕ್ಕಿನಿಂದ ಬರುತ್ತಿದ್ದ ಆಟೋ ರಿಕ್ಷಾ ನಡುವೆ ಮಂಜಲ್ಪಡ್ಪು ಸಮೀಪ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಮತ್ತು ಆಟೋ ರಿಕ್ಷಾದಲ್ಲಿದ್ದ ಮಹಿಳೆಯೊಬ್ಬರಿಗೆ ತೀವ್ರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳಿಬ್ಬರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here