ಕಡಬ: ಇಲೆಕ್ಟ್ರಾನಿಕ್ಸ್ ಅಂಗಡಿಗೆ ನುಗ್ಗಿದ ಕಳ್ಳರು- ಹಣ ,ಸಾಮಾಗ್ರಿ ಕಳವು

0

ಸಿ.ಸಿ.ಕ್ಯಾಮಾರ ದ್ವಂಸ, ಡಿ.ವಿ.ಆರ್. ಹೊತ್ತೊಯ್ದ ಖತರ್ನಾಕ್ ಕಳ್ಳರು


ಕಡಬ: ಕಡಬದಲ್ಲಿ ಕಳ್ಳರು ತಮ್ಮ ಕೈಚಳಕವನ್ನು ಮೆರೆದಿದ್ದು, ಎರಡು ಪ್ರಮುಖ ಅಂಗಡಿಯ ಮೇಲ್ಛಾವಣಿಯ ಮೂಲಕ ಒಳ ನುಗ್ಗಿರುವ ಕಳ್ಳರು ಸಾವಿರಾರು ರೂ. ಮೌಲ್ಯದ ವಸ್ತುಗಳನ್ನು ದೋಚಿರುವ ಘಟನೆ ಜೂ.23ರಂದು ರಾತ್ರಿ ಸಂಭವಿಸಿದೆ.

ಇಲ್ಲಿನ ಮುಖ್ಯ ರಸ್ತೆಯ ಸಂಗೀತಾ ಇಲೆಕ್ಟ್ರಾನಿಕ್ಸ್ ಹಾಗೂ ಸ್ಟಾರ್ ಟ್ರೇಡರ್ಸ್ ನ ಹಿಂಭಾಗದ ಮೇಲ್ಛಾವಣಿಯ ಮೂಲಕ ಒಳ ನುಗ್ಗಿರುವ ಕಳ್ಳರು ನಗದು ಇಲೆಕ್ಟ್ರಾನಿಕ್ ವಸ್ತುಗಳ ಜೊತೆ ಪರಾರಿಯಾಗಿದ್ದಾರೆ. ಸಿ.ಸಿ ಕ್ಯಾಮರಾವನ್ನು ಧ್ವಂಸಗೊಳಿಸಿ ಡಿ.ವಿ.ಆರ್. ನ್ನು ಹೊತ್ತೊಯ್ದಿದ್ದಾರೆ‌. ಈ ಬಗ್ಗೆ ಅಂಗಡಿಯ ಮಾಲಕರು ಕಡಬ ಠಾಣೆಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here