ಕಡಬ ಸರಕಾರಿ ಪ್ರೌಢ ಶಾಲಾ ಇಬ್ಬರು ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಥಳಿತ -ಆರೋಪ ; ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

0

ಕಡಬ: ಇಲ್ಲಿನ ಸರಕಾರಿ ಪ್ರೌಢ ಶಾಲೆಯ ಶಿಕ್ಷಕರೋರ್ವರು ಥಳಿಸಿದ್ದಾರೆ ಎಂದು ಆರೋಪಿಸಿ 8ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಕಡಬ ಸಮುದಾಯ ಆಸ್ಪತ್ರೆ ಗೆ ದಾಖಲಾದ ಘಟನೆ ಜೂ.24 ರಂದು ನಡೆದಿದೆ.

ಎಂಟನೆ ತರಗತಿಯ ಸುದೀಶ್ ಮತ್ತು ದಿಗಂತ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ, ಇವರಿಗೆ ಈ ಶಾಲೆಯ ಶಿಕ್ಷಕ ಖಾದರ್ ಎಂಬವರು ಕೆನ್ನೆಗೆ ಥಳಿಸಿದ್ದು ವಿದ್ಯಾರ್ಥಿಗಳ ಕೆನ್ನೆ ಊದಿಕೊಂಡಿದ್ದು, ಅಸ್ವಸ್ಥರಾಗಿದ್ದಾರೆ. ಇದೀಗ ಶಿಕ್ಷಕರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಆಗ್ರಹಿಸಿದ್ದಾರೆ.

ಸೂಕ್ತ ಕ್ರಮ- ವೇದಾವತಿ, ಉಪ ಪ್ರಾಂಶುಪಾಲೆ

ಈ ಬಗ್ಗೆ ಉಪ ಪ್ರಾಂಶುಪಾಲೆ ವೇದಾವತಿಯವರು ಪ್ರತಿಕ್ರಿಯೆ ನೀಡಿ, ನಾನು ವಿದ್ಯಾರ್ಥಿಗಳನ್ನು ಭೇಟಿಯಾಗಿ ವಿಚಾರಿಸಿದ್ದೇನೆ, ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ, ಶಿಕ್ಷಕರು ಥಳಿಸಿರುವ ಬಗ್ಗೆ ವಿಚಾರಿಸುತ್ತೇನೆ ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here