ಕೊಯ್ಲು, ಬೋರ್ಡೋ ದ್ರಾವಣ ಸಿಂಪಡಿಕೆಗೆ ಹೈಟೆಕ್ ದೋಟಿ

0

ಇನ್ನು ಅಡಿಕೆ ಮರವನ್ನೇರಬೇಕಾಗಿಲ್ಲ, ಮಳೆಗಾಲದಲ್ಲಿಯೂ ಬೆಳೆಗಾರ ನಿರಾಳ

ಅಡಿಕೆ ಮರವನ್ನೇರದೆ ಫಸಲು ಕೊಯ್ಲು ಮಾಡುವ ಅಥವಾ ಔಷಧ ಸಿಂಪಡಿಸುವ ಆವಿಷ್ಕಾರಗಳಿರಲಿಲ್ಲ. ಅದಕ್ಕೆ ಇತರರನ್ನು ಅವಲಂಬಿಸಲೇಬೇಕಾದ ಪರಿಸ್ಥಿತಿಯಿತ್ತು. ಆದರೆ ಅಡಿಕೆ ಮರವನ್ನೇರದೆ ಅಡಿಕೆ ಕೊಯ್ಲು ಮಾಡುವುದಕ್ಕೆ, ಬೋರ್ಡೋ ದ್ರಾವಣ ಸಿಂಪಡಿಸುವಿಕೆಗೆ ಹೈಟೆಕ್ ದೋಟಿ ಬಂದಿದೆ. ಜೊತೆಗೆ ಸಬ್ಸಿಡಿಯೂ ಲಭ್ಯವಿದೆ.

ಈ ಹೈಟೆಕ್ ದೋಟಿ ಬಾಗುವುದಿಲ್ಲ, ಬಳುಕು ವುದಿಲ್ಲ. ಹೆಚ್ಚು ಭಾರವಿಲ್ಲ. ಸಾಮಾನ್ಯವಾಗಿ ಕೂಲಿ ಕಾರ್ಮಿಕರು ಬಿದಿರಿನ ದೋಟಿ ಬಳಸುತ್ತಾರೆ. 40 ಅಡಿ ಉದ್ದದ ಬಿದಿರಿನ ದೋಟಿ 20 ಕೆ.ಜಿ.ಗೂ ಹೆಚ್ಚು ತೂಕ ಇರುತ್ತದೆ. ಆದರೆ 60 ಅಡಿ ಉದ್ದದ ಈ ದೋಟಿಯ ಭಾರ 4 ಕೆ.ಜಿ., 80 ಅಡಿಗೇರಿದರೆ 6 ಕೆ.ಜಿ. 8ರಿಂದ 80 ಅಡಿ ವರೆಗಿನ ಅಡಿಕೆ ಮರಕ್ಕೆ ದೋಟಿ ತಲುಪುತ್ತದೆ. ಆದುದರಿಂದ ಮನೆಯವರೇ ಈ ದೋಟಿ ಹಿಡಿದುಕೊಂಡು ತೋಟಕ್ಕೆ ಹೋಗಿ ಅಡಿಕೆ ಕೊಯ್ಲು ಮಾಡಬಹುದು. ಕುತ್ತಿಗೆ ನೋವು, ಬೆನ್ನು ನೋವು, ಭುಜನೋವು ಬರದಂತೆ ಈ ದೋಟಿಯನ್ನು ವಿನ್ಯಾಸಗೊಳಿಸಲಾಗಿದೆ.

ಈ ದೋಟಿಯ ತುದಿಗೆ ಕತ್ತಿ ಅಳವಡಿಸಿದರೆ ಅಡಿಕೆ ಕೊಯ್ಲಿಗೆ ಬಳಸಲಾಗುತ್ತದೆ. ತುದಿಯಿಂದ ಕತ್ತಿ ತೆಗೆದು, ಔಷಧ ಸಿಂಪಡಿಸುವ ಉಪಕರಣ ಪೈಪ್ ಮತ್ತು ನಾಝಿಲ್ ಅಳವಡಿಸಿದರೆ ಬೋರ್ಡೋ ದ್ರಾವಣ ಮಿಶ್ರಣ ಸಿಂಪಡಿಸಲಾಗುತ್ತದೆ. ಇದರಲ್ಲೇ ಅಡಿಕೆ, ತೆಂಗು ಕೊಯ್ಲು ಮಾಡಬಹುದು. ನಿಂತಲ್ಲೇ 360 ಡಿಗ್ರಿ ಸುತ್ತು ತಿರುಗಿಕೊಂಡು 30ಕ್ಕೂ ಹೆಚ್ಚು ಮರಗಳಿಂದ ಅಡಿಕೆ ಕೊಯ್ಲು ಮಾಡಬಹುದು, ಔಷಧ ಸಿಂಪಡಿಸಬಹುದು. ಔಷಧ ಸಿಂಪಡಿಸಲು ಅವಶ್ಯವಿರುವ ಪಂಪ್ ಹಾಗೂ ಪೈಪ್ ಅನ್ನು ಈ ದೋಟಿಗೆ ಸೇರಿಸಿಕೊಳ್ಳಬೇಕು.

ಇದನ್ನು ಬಾಲಸುಬ್ರಹ್ಮಣ್ಯ ಎಂಬುವವರು ತಯಾರಿಸಿ, ಬೆಳೆಗಾರರಿಗೆ ನೀಡುತ್ತಾರೆ. ಮಾರುಕಟ್ಟೆಗೆ ಈ ದೋಟಿ ಬಂದಿಲ್ಲ. ಅವಶ್ಯವಾಗಿ ಬೇಕೆಂದಾದಲ್ಲಿ ಅವರು ತಯಾರಿಸಿ, ನೀಡುತ್ತಾರೆ. ಸುಮಾರು 30 ಅಡಿಯ ದೋಟಿಗೆ 30 ಸಾವಿರ ರೂ. ಬೇಕಾಗುತ್ತದೆ. 80 ಅಡಿಯ ದೋಟಿಗೆ 80 ಸಾವಿರ ರೂ. ಬೇಕಾಗುತ್ತದೆ. ಇದು ಒಂದೆರಡು ವರ್ಷಗಳಲ್ಲೇ ಲಾಭ ನೀಡಲಾರಂಭಿಸುತ್ತದೆ.

ವಿಶೇಷತೆಗಳು

  • ಲಾಕ್ ಕಟ್, ಕರೆಂಟ್ ಶಾಕ್, ಆಗದಿರುವಂತಹ ತಂತ್ರಜ್ಞಾನದಿಂದ ಕೂಡಿದೆ. ಜೊತೆಗೆ ಜಗತ್ತಿನಲ್ಲಿ ಅತೀ ಕಡಿಮೆ ಬಳಕುವ ದೋಟಿ ಕಂಪೆನಿಯಾಗಿದೆ.
  • ಅಡಿಕೆ ಮರ ಏರಬೇಕಾಗಿಲ್ಲ. ಕೆಳಗೆ ನಿಂತು ಅಡಿಕೆ ಕೊಯ್ಲು ಮಾಡಬಹುದು, ಔಷಧ ಸಿಂಪಡಿಕೆ ಸಾಧ್ಯ.
  • ತೂಕ ಕಡಿಮೆ. 60 ಅಡಿ ಎತ್ತರದ ವರೆಗೆ 4 ಕೆ.ಜಿ., 80 ಅಡಿ ಎತ್ತರಕ್ಕೆ 6 ಕೆ.ಜಿ. ತೂಗುತ್ತದೆ.
  • ತೂಕ ಕಡಿಮೆ ಇರುವುದರಿಂದ ಸುಲಭವಾಗಿ ಸಾಗಾಟ ಸಾಧ್ಯ.
  • ದೋಟಿಯನ್ನು ಅವಶ್ಯವಿರುವಷ್ಟೇ ಎತ್ತರಕ್ಕೇರಿಸಿ, ಲಾಕ್ ಮಾಡಲು ಸಾಧ್ಯವಾಗುತ್ತದೆ.

ಲಾಭಾಂಶಗಳು

  • ಮನೆಯವರೇ ಈ ಕೆಲಸ ಮಾಡಬಹುದು.
  • ಕಾರ್ಮಿಕರಿಗೆ ದಿನಕ್ಕೆ ನೀಡುವ 1,೦೦೦ಕ್ಕೂ ಹೆಚ್ಚು ವೇತನದ ಉಳಿತಾಯ.
  • ಈ ಸಲಕರಣೆ ಬಳಕೆಯಲ್ಲಿ ಯಾವುದೇ ಅಪಾಯಕಾರಿ ಸನ್ನಿವೇಶ ಉದ್ಭವಿಸುವುದಿಲ್ಲ.
  • ಹಗುರವಾಗಿರುವುದರಿಂದ 8ರಿಂದ 12 ಗಂಟೆ ಕೆಲಸ ಮಾಡಬಹುದು.
  • ಮರಗಳ ಕೊಂಬೆ ಸವರಲು ಇದನ್ನು ಬಳಸಬಹುದು.
  • ಅಡಿಕೆ, ತೆಂಗಿನಕಾಯಿ, ಕಾಳುಮೆಣಸು, ಇನ್ನಾವುದೇ ಮರವನ್ನೇರಬೇಕಾದ ಸಂದರ್ಭ ಇದ್ದಾಗ ಈ ದೋಟಿಯನ್ನು ಬಳಸಿದರಾಯಿತು.

ಹೆಚ್ಚಿನ ಮಾಹಿತಿಗೆ +9606142520, +917259350487 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here