ಮಾನವೀಯ ಸಂಬಂಧಗಳನ್ನು ಉಳಿಸಿಕೊಳ್ಳುವುದು ಜವಾಬ್ದಾರಿಯ ಕೆಲಸ: ಜ್ಯೋತಿ ಎಂ ಎಂ

0

ಪುತ್ತೂರು: ನಮ್ಮ ದೈನಂದಿನ ಜೀವನದಲ್ಲಿ ಹಲವರನ್ನು ಭೇಟಿಯಾಗುತ್ತೇವೆ. ಅವರಿಂದ ಸಹಾಯವನ್ನೂ ಪಡೆದಿರುತ್ತೇವೆ. ಕೆಲಸದ ಒತ್ತಡದ ಕಾರಣದಿಂದ ಅವರಿಗೆ ಕೃತಜ್ಞತೆಯನ್ನು ಸೂಚಿಸುವುದನ್ನೇ ಮರೆಯುತ್ತೇವೆ. ಆದರೆ ಎಷ್ಟೇ ಒತ್ತಡದ ನಡುವೆಯಾದರೂ ಮಾಡಿದ ತಪ್ಪಿಗೆ ಕ್ಷಮೆಯನ್ನೂ, ಉಪಕಾರಕ್ಕೆ ಪ್ರತಿಯಾಗಿ ಕೃತಜ್ಞತೆಯನ್ನೂ ಸೂಚಿಸಿದರೆ ಅದು ತೃಪ್ತಿ ನೀಡುತ್ತದೆ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಉಪನ್ಯಾಸಕಿ ಜ್ಯೋತಿ ಎಂ ಎ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಬಿ ಎ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸಿರುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಹೇಳದೆ ಉಳಿದ ಕ್ಷಮೆ ಎಂಬ ವಿಷಯದ ಕುರಿತು ಮಾತನಾಡಿದರು.

ಇಂದಿನ ಈ ತಂತ್ರಜ್ಞಾನದ ಯುಗದಲ್ಲಿ ಪರಸ್ಪರ ಸಂಬಂಧಗಳನ್ನು ಉಳಿಸಿಕೊಳ್ಳುವುದು ಸುಲಭದ ಮಾತು‌ ಅಲ್ಲ. ಹಾಗಾಗಿ ನಮ್ಮೊಳಗೆ ಅಡಗಿರುವ ಅಹಂಕಾರಗಳನ್ನು ಬಿಟ್ಟು ಕ್ಷಮೆ ಹಾಗೂ ಉಪಕಾರಕ್ಕೆ ಸ್ಮರಣೆಯನ್ನು ಮಾಡಿಕೊಳ್ಳುವುದು ಬಹಳಷ್ಟು ಅನಿವಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಯುವ ಮಾತುಗಾರರಾದ ಮಂಜುನಾಥ್, ಧೀರಜ್, ಚೈತ್ರಾಭಟ್, ತನುಶ್ರೀ, ಪ್ರತೀಕ್ಷ, ಶ್ರೀಜೇಶ್, ಶ್ರೀರಾಮ, ರಸಿಕ ಮುರುಳ್ಯ, ನಿಶಾ ಶೆಟ್ಟಿ, ಅಂಶಿ, ಶುಭ್ರ, ಕಾರ್ತಿಕ್ ಪೈ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ವೇದಿಕೆಯಲ್ಲಿ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ.ಪಿ.ಆರ್ ನಿಡ್ಪಳ್ಳಿ, ವಿದ್ಯಾರ್ಥಿನಿ ನಮಿತಾ ಹಾಗೂ ಮಣಿಕರ್ಣಿಕ ಕಾರ್ಯಕ್ರಮದ ಕಾರ್ಯದರ್ಶಿ ಕೃತಿಕಾ ಸದಾಶಿವ ಉಪಸ್ಥಿತರಿದ್ದರು.

ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿ ಶ್ರೀರಾಮ ವಾರದ ಉತ್ತಮ ಮಾತುಗಾರ, ಹಾಗೂ ಪ್ರಥಮ ಬಿಎ ವಿದ್ಯಾರ್ಥಿಗಳು ಮಾತುಗಾರರ ತಂಡವಾಗಿ ಬಹುಮಾನವನ್ನು ಪಡೆದುಕೊಂಡರು.

ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ ಶ್ರಾವ್ಯ ಪಿ ಸ್ವಾಗತಿಸಿ, ರಸಿಕ ಮುರುಳ್ಯ ವಂದಿಸಿದರು. ನಮಿತ ನಿರೂಪಿಸಿದರು.

LEAVE A REPLY

Please enter your comment!
Please enter your name here