ವರ್ಗಾವಣೆಗೊಂಡ ಬ್ಯಾಂಕ್ ಅಫ್ ಬರೋಡ ಕಾವು ಶಾಖೆಯ ಮೆನೇಜರ್ ಅತಿಥ್ ರೈಗೆ ಗೌರವಾರ್ಪಣೆ

0

ಕಾವು:ಭಾರತ ಸರಕಾರದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ತುಡರ್ ಯುವಕ ಮಂಡಲ ನನ್ಯ ಕಾವು ಮತ್ತು ಸ್ವಸ್ತಿಕ್ ಗ್ರೂಪ್ ನ ಮಾಲಕ ಹರೀಶ್ ಕಾವು ಇವರಿಂದ ಕಾವು ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಮೂರು ವರ್ಷಗಳಿಂದ ಮೆನೇಜರ್ ಆಗಿ ಸೇವೆ ಸಲ್ಲಿಸಿ ಕಾಣಿಯೂರು ಬ್ಯಾಂಕ್ ಆಫ್ ಬರೋಡ ಶಾಖೆಗೆ ವರ್ಗಾವಣೆಗೊಂಡ ಅತಿಥ್ ರೈ ರವರಿಗೆ ಗೌರವಾರ್ಪಣೆ ಕಾರ್ಯಕ್ರಮ ಜು.24ರಂದು ನಡೆಯಿತು.‌

ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ ಅತಿಥ್ ರೈಯವರಿಗೆ ಪೇಟ ತೊಡಿಸಿ, ಶಾಲು, ಹಾರ ಹಾಕಿ, ಹಣ್ಣುಹಂಪಲು ಹಾಗೂ ಗೌರವ ಸ್ಮರಣಿಕೆ ನೀಡಿ ಗೌರವಿಸಿದರು.

ದಕ್ಷ ಹಾಗೂ ಪ್ರಾಮಾಣಿಕ ,ಜನಸ್ನೇಹಿ ಅಧಿಕಾರಿ-ಸುಬ್ರಾಯ ಬಲ್ಯಾಯ

ಗೌರವಾರ್ಪಣೆ ನೆರವೇರಿಸಿ ಮಾತನಾಡಿದ ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾದ ಸುಬ್ರಾಯ ಬಲ್ಯಾಯ ಮಾತನಾಡಿ ಅತಿಥ್ ರೈ ರವರು ದಕ್ಷ ಪ್ರಾಮಾಣಿಕ ಸೇವೆ ಸಲ್ಲಿಸುವ ಜೊತೆಗೆ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಒಬ್ಬ ಜನಸ್ನೇಹಿ ಅಧಿಕಾರಿ ಆಗಿದ್ದರು. ಇವರ ಮುಂದಿನ ಉದ್ಯೋಗ ಜೀವನದಲ್ಲಿ ಉನ್ನತ ಹುದ್ದೆಗಳು ಒಲಿದು ಬರಲಿ ಎಂದು ಶುಭಹಾರೈಸಿದರು.

ಬ್ಯಾಂಕ್ ಆಫ್ ಬರೋಡ ಕಾವು ಶಾಖೆಯ ಸಿಬ್ಬಂದಿ ಜೊತೆ ಅತಿಥ್ ರೈ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬ್ಯಾಂಕಿಗ್ ಯೋಜನೆಗಳನ್ನು ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಿದ ಜನಸೇವಕ

ಕಾವು ಸ್ವಸ್ತಿಕ್ ಗ್ರೂಪ್ಸ್ ನ ಮಾಲಕರು, ಬ್ಯಾಂಕ್ ನ ಗ್ರಾಹಕರು ಆಗಿರುವ ಹರೀಶ್ ಕುಂಜತ್ತಾಯ ಕಾವು ಮಾತನಾಡಿ ಪ್ರಾಮಾಣಿಕ ಸೇವೆಯಿಂದ ಗ್ರಾಹಕರ ಮನಗೆದ್ದಿರುವ ಅತಿಥ್ ರೈ ರವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬ್ಯಾಂಕಿಂಗ್ ಯೋಜನೆಗಳನ್ನು ಪ್ರತೀ ಖಾತೆದಾರನಿಗೂ ತಲುಪಿಸಿದ್ದು ಇವರಿಗೆ ಜನಸೇವಕ ಎಂಬ ಕೀರ್ತಿ ಸಲ್ಲಬೇಕು ಎಂದರು.

ಗ್ರಾಮೀಣ ಭಾಗದ ನಿಷ್ಠಾವಂತ ಅಧಿಕಾರಿಯಾಗಿ, ಶ್ರೀಮಂತ- ಬಡವ ಎಂಬ ಭೇದಭಾವ ಮಾಡದೇ ಸರ್ಕಾರದ ಯೋಜನೆಗಳನ್ನು ಸಮಪರ್ಕವಾಗಿ ಜನಸಾಮಾನ್ಯರಿಗೂ ಮುಟ್ಟಿಸುವುದರ ಜೊತೆಗೆ ಸಾರ್ವಜನಿಕ ಜನಪರ ಕಾರ್ಯಕ್ರಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಗ್ರಾಹಕರಿಗೆ ನಗುಮೊಗದ ಸೇವೆ ನೀಡಿದ ಅತಿಥ್ ರೈ ಎಲ್ಲರ ಪ್ರಸಂಶೆಗೆ ಪಾತ್ರರಾಗಿದ್ದರು.

ಭಾಸ್ಕರ ಬಲ್ಯಾಯ ಕಾವು, ಮಾಜಿ ಅಧ್ಯಕ್ಷರು, ತುಡರ್ ಯುವಕ ಮಂಡಲ ನನ್ಯ ಕಾವು

ಗ್ರಾಹಕ ಬಂಧುಗಳ ಸಹಕಾರ, ತುಡರ್ ಯುವಕ ಮಂಡಲದ ಪ್ರೀತಿಗೆ ಸದಾ ಚಿರಋಣಿಯಾಗಿದ್ದೇನೆ- ಅತಿಥ್ ರೈ

ಗೌರವ ಸ್ವಿಕರಿಸಿ ಮಾತನಾಡಿದ ಮೆನೇಜರ್ ಅತಿಥ್ ರೈ ವ್ಯವಹಾರಲ್ಲಿ ಸಹಕರಿಸಿದ ಗ್ರಾಹಕ ಬಂಧುಗಳಿಗೆ ಹಾಗೂ ಗೌರವಿಸಿದ ತುಡರ್ ಯುವಕ ಮಂಡಲಕ್ಕೆ ಕ್ರತಜ್ಞತೆ ಸಲ್ಲಿಸಿ ಯುವಕ ಮಂಡಲವು ತನ್ನ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ರಾಜ್ಯ ರಾಷ್ಟ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದರು.

ಯುವಕ ಮಂಡಲದ ಅಧ್ಯಕ್ಷ ನವೀನ್ ನನ್ಯ ಪಟ್ಟಾಜೆ ಪ್ರಸ್ತಾವಿಕದೊಂದಿಗೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷ ಶೇಷಪ್ಪ ಗೌಡ ಪರನೀರು, ಮಾಜಿ ಅಧ್ಯಕ್ಷ ಚಂದ್ರಶೇಖರ ಬಲ್ಯಾಯ, ಉಪಾಧ್ಯಕ್ಷ ಸಂದೇಶ್ ಚಾಕೋಟೆ, ಬ್ಯಾಂಕ್ ನ ನೂತನ ಮೆನೇಜರ್ ಪರಿತೋಶ್ ಮಂಡಲ್, ಉಪ ಶಾಖಾಧಿಕಾರಿ ಶ್ರೀಷ್ಮಾ, ಸಿಬ್ಬಂದಿಗಳಾದ ಲಿಂಗಪ್ಪ ಗೌಡ, ಆಶ್ವಿನ್ ಜಯರಾಮ ಆಚಾರ್ಯ, ನಾಗಪ್ಪ, ಸುನಂದಾ, ಯುವಕ ಮಂಡಲದ ಸದಸ್ಯರಾದ ನಿರಂಜನ್ ಕಮಲಡ್ಕ, ರಾಮಣ್ಣ ನಾಯ್ಕ ಅಚಾರಿಮೂಲೆ, ಸಂಕಪ್ಪ ಪೂಜಾರಿ ಚಾಕೋಟೆ, ದಿವ್ಯಪ್ರಸಾದ್ ಎ ಎಂ, ರಾಜೇಶ್ ಕಾವು, ಹರ್ಷಿತ್ ಎ ಆರ್ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here