ದೇಶದಲ್ಲಿ ಅತ್ಯಂತ ಹೆಚ್ಚು ಭ್ರಷ್ಟಾಚಾರ ನಡೆಸಿದ್ದು ಇಂದಿರಾ ಗಾಂಧಿ – ತುರ್ತು ಪರಿಸ್ಥಿತಿಯ ಕರಾಳ ದಿನ ಕಾರ್ಯಗಾರದಲ್ಲಿ ಬಂಗಾರಡ್ಕ ವಿಶ್ವೇಶ್ವರ ಭಟ್

0

ಪುತ್ತೂರು: 1975, ಜೂನ್ 25 ಭಾರತದ ಇತಿಹಾಸದಲ್ಲಿ ಮರೆಯಲಾಗದ ದಿನ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದು ಈ ಅವಧಿಯನ್ನು ಬಹಳ ವಿವಾದಾತ್ಮಕ ವರ್ಷಗಳೆಂದು ವಿಶ್ಲೇಷಿಸಲಾಗುತ್ತಿದೆ. ಯಾಕೆಂದರೆ ಆಡಳಿತದಲ್ಲಿ ಹಿಡಿತವಿಲ್ಲದ ಇಂದಿರಾ ಗಾಂಧಿಯವರು ದೇಶದಲ್ಲೇ ಅತ್ಯಂತ ಹೆಚ್ಚು ಭ್ರಷ್ಟಾಚಾರ ನಡೆಸಿದ್ದರು ಎಂದು ಬಿಜೆಪಿ ಹಿರಿಯ ಮುಖಂಡ ಬಂಗಾರಡ್ಕ ವಿಶ್ವೇಶ್ವರ ಭಟ್ ಅವರು ಹೇಳಿದರು.

 


ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಗೆ ತಂದಿರುವ ದಿನವನ್ನು ಕರಾಳ ದಿನವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಜೂ. 25ರಂದು ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಶಾಸ್ತ್ರೀಯವರ ನಂತರ ಹಲವು ಹಿರಿಯ ನಾಯಕರ ಪ್ರತಿರೋಧದ ನಡುವೆಯೂ ಇಂದಿರಾ ಗಾಂಧಿಯವರು ಈ ದೇಶದ ಪ್ರಧಾನಿಯಾದರು. ಅವರ ಕುರಿತು ಭಾರಿ ತಿಳುವಳಿಕೆ ಇದ್ದವರು ಎಂಬ ಮನೋಭಾವ ತುಂಬಾ ಜನರ ಮನಸ್ಸಿನಲ್ಲಿತ್ತು. ಆದರೆ ಅವರಿಗೆ ರಾಜಕೀಯ ತಿಳುವಳಿಕೆ ಇರಲಿಲ್ಲ. ಅವರು ನೆಹರು ಕುಟುಂಬದಲ್ಲಿ ಇದ್ದರಿಂದ ಅವರಿಗೆ ಪ್ರಧಾನಿ ಸ್ಥಾನ ಸಿಕ್ಕಿತ್ತು ಹೊರತು ಅವರು ಅರ್ಹತೆಯ ಮೇರೆಗೆ ಭಾರಿ ದೊಡ್ಡ ವ್ಯಕ್ತಿಯಾಗಿರಲಿಲ್ಲ. ಅವರು ತನಗೆ ವಿರೋಧ ಮಾಡಿದ ಕಾಮರಾಜ್ ನಾಡರ್, ಮೊರಾರ್ಜಿ ದೇಸಾಯಿ ಸೇರಿದಂತೆ ಹಲವು ನಾಯಕರನ್ನು ಮೂಲೆ ಪಾಲು ಮಾಡಿದರು. ಅದೇ ಬಡವರಿಗೆ ಸುಲಭ ಸಾಲ ಸಿಗುವಂತಾಗಲು 16 ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದರು. ಅದೆ ರೀತಿ ಅವರು ತೀರ ಕೆಟ್ಟ ಪ್ರಧಾನಿಯಾಗಿದ್ದರು. ಈ ಸತ್ಯವನ್ನು ಕಾಂಗ್ರೆಸ್‌ನವರು ಒಪ್ಪಿಕೊಳ್ಳುವುದಿಲ್ಲ. ಅದೇ ರೀತಿ ಬಿಜೆಪಿಯವರು ಹೇಳುವುದು ಇಲ್ಲ. ದೇಶದ ಆಡಳಿತದ ಮೇಲೆ ಇಂದಿರಾ ಗಾಂಧಿಗೆ ಹಿಡಿತ ಇರಲಿಲ್ಲ. ಯಾಕೆಂದರೆ ಅವರು ದೇಶದ ಅತ್ಯಂತ ಹೆಚ್ಚು ಭ್ರಷ್ಟಾಚಾರ ಮಾಡಿದ್ದರು. ಹಣ ಕಡಿಮೆ ಆದಾಗ ತೆರಿಗೆ ಕಡಿಮೆ ಬಂದಾಗ ನೋಟ್ ಪ್ರಿಂಟ್ ಮಾಡಿಸುತ್ತಿದ್ದರು ಎಂದು ಅವರು ಆರೋಪಿಸಿದರು. ಅದೇ ರೀತಿ ಸರ್ಕಾರದ ಜಯಪ್ರಕಾಶ ನಾರಾಯಣ ಅವರ ಕರೆಗೆ ಓಗೊಟ್ಟು ದೇಶದ ಜನರು ತಿರುಗಿ ಬೀಳುತ್ತಾರೆ ಎಂದು ಭಾವಿಸಿದ ಪ್ರಧಾನಿ ಇಂದಿರಾ ಗಾಂಧಿ ರಾಷ್ಟ್ರಪತಿಗಳ ಜೊತೆ ಚರ್ಚೆ ನಡೆಸಿ ಅವರಿಂದ ಅಧಿಕೃತ ಒಪ್ಪಿಗೆ ಪಡೆದು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಿದ್ದರು. ಈ ಸಮಯದಲ್ಲಿ ಅನೇಕ ನಾಗರಿಕ ಹಕ್ಕುಗಳನ್ನು ನಿಷೇಧಿಸಲಾಯಿತು. ಗಾಂಧಿವಾದಿಗಳು ಜೈಲುಶಿಕ್ಷೆ ಅನುಭವಿಸಿದರು. ಮಾಧ್ಯಮದ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು. ಇದೊಂದು ದೇಶದ ಕರಾಳ ದಿನವಾಗಿತ್ತು ಎಂದರು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಕಾರ್ಯಕ್ರಮ ನಿರ್ವಹಿಸಿದರು. ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಜಯಶ್ರೀ ಎಸ್ ಶೆಟ್ಟಿ, ಯುವರಾಜ್ ಪೆರಿಯತ್ತೋಡಿ, ನಿತೀಶ್ ಶಾಂತಿವನ ಸೇರಿದಂತೆ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here