ಕರೋಪಾಡಿ: ಬೃಹತಾಕಾರದ ಮರ ಬಿದ್ದು ಮನೆಗೆ ಹಾನಿ

0

ವಿಟ್ಲ: ಬೃಹತಾಕಾರದ ಮರವೊಂದು ಮನೆ ಮೇಲೆ ಬಿದ್ದ ಪರಿಣಾಮ ಮನೆ ಸಂಪೂರ್ಣವಾಗಿ ಹಾನಿಗೊಂಡ ಘಟನೆ ಕರೋಪಾಡಿ ಗ್ರಾಮದ ಆನೆಕಲ್ಲು ಎಂಬಲ್ಲಿ ನಡೆದಿದೆ.

ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕರೋಪಾಡಿ ಗ್ರಾಮದ ಆನೆಕಲ್ಲು ನಿವಾಸಿ, ಅಬ್ಬಾಸ್ ಆನೆಕಲ್ಲು ರವರ ಮನೆಯ ಮೇಲೆ ಗೋಳಿಮರ ಕುಸಿದು ಬಿದ್ದಿದೆ. ಮನೆಮಂದಿ ತಕ್ಷಣವೇ ಹೊರಗಡೆ ಬಂದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆಯಿಂದಾಗಿ ಮನೆ ಸಂಪೂರ್ಣವಾಗಿ ಹಾನಿಗೊಂಡಿದೆ.

LEAVE A REPLY

Please enter your comment!
Please enter your name here