ವೀರಮಂಗಲ ಶಾಲೆಯಲ್ಲಿ ಯಕ್ಷಗಾನ ತರಗತಿ ಉದ್ಘಾಟನೆ

0

ಪುತ್ತೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಇಲ್ಲಿ ಶಾಲಾ ಮಕ್ಕಳಿಗಾಗಿ ಉಚಿತ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಶ್ರೀ ಮಹಾವಿಷ್ಣು ದೇವರ ಅರ್ಚಕ ರಾಧಾಕೃಷ್ಣರವರು ಉದ್ಘಾಟಿಸಿ, ಮಾತನಾಡಿ ಯಕ್ಷಗಾನ ಕಲೆ ಸಂಸ್ಕೃತಿ ಯನ್ನು ಬಿಂಬಿಸುವ ಮಾಧ್ಯಮವಾಗಿದೆ .

 

 

ಎಳವೆಯಲ್ಲಿ ಮಕ್ಕಳಿಗೆ ಕಲಾಭಿರುಚಿ ಉದ್ದೀಪನಗೊಳಿಸುವ ವೀರಮಂಗಲ ಶಾಲೆಯ ಕಾರ್ಯ ಶ್ಲಾಘನಿಯ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡೆದುಕೊಂಡು ಉತ್ತಮ ಕಲಾವಿದರಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು. ಯಕ್ಷಗಾನ ನಾಟ್ಯಗುರು ಹಾಗೂ ವೀರಮಂಗಲ ಶಾಲಾ ಮುಖ್ಯಗುರು ತಾರಾನಾಥ ಸವಣೂರುರವರು ಮಾತನಾಡಿ ವೀರಮಂಗಲ ಶಾಲೆಯಲ್ಲಿ ಸಾಂಸ್ಕೃತಿಕ ವೇದಿಕೆಯ ಮೂಲಕ ಜನಪದ ನೃತ್ಯ, ಕೋಲಾಟ,ಜನಪದ ಗೀತೆಗಳು,ಲಾವಣಿ,ಗೀಗಿ ಹಾಡುಗಳು,ಭಾವಗೀತೆ,ಲಘು ಸಂಗೀತ, ಅಭಿನಯ ಗೀತೆ ಇತ್ಯಾದಿ ಚಟುವಟಿಕೆಗಳನ್ನು ನಿರಂತರವಾಗಿ ಮಾಡಿಕೊಂಡು ಬರುವ ಯೋಜನೆ ಹಮ್ಮಿಕೊಳ್ಳಲಾಗಿದೆ ಇದರಿಂದ ನಮ್ಮ ಮನಸ್ಸು,ದೇಹ,ಉಲ್ಲಾಸಿತಗೊಂಡು ಕಲಿಕೆ ಕ್ರೀಯಾಶೀಲವಾಗುತ್ತದೆ ಎಂದರು. ಹಿರಿಯ ಶಿಕ್ಷಕಿ ಹರಿಣಾಕ್ಷಿ ಇವರು ಮಾತನಾಡಿ ಹತ್ತಾರು ವರ್ಷಗಳಿಂದ ಯಕ್ಷಗಾನ ತರಗತಿಯನ್ನು ಆರಂಭಿಸಬೇಕೆಂಬ ನಮ್ಮ ಕನಸು ಇಂದು ಸಾಕಾರ ಗೊಂಡಿದೆ , ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆಕೊಟ್ಟರು. ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷೆ ಅನುಪಮ ,ಗ್ರಾ ಪಂ ಸದಸ್ಯೆ ಪದ್ಮಾವತಿ ಶಾಲಾ ನಾಯಕಿ ದೀಕ್ಷಾ ಸೇರಿದಂತೆ ಪೋಷಕರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕ್ಲಬ್ ನ ನಿರ್ದೇಶಕಿ ಶ್ರೀಲತಾ, ಶಿಕ್ಷಕಿಯರಾದ ಕವಿತಾ,ಶೋಭಾ,ಹೇಮಾ ಗಾಯತ್ರಿ ಸಹಕರಿಸಿದರು. ಕೃತಿಕ,ನಾವಿನ್ಯ ಸಿಂಚನ ಪ್ರಾರ್ಥಿಸಿದರು. ಶಶಾಂಕ ಸ್ವಾಗತಿಸಿ, ಕವನ್ ವಂದಿಸಿದರು ತೃಪ್ತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here