ಹಲವು ಪ್ರಕರಣಗಳಲ್ಲಿ ಸರಕಾರದ ಪರವಾಗಿ ಸಮರ್ಪಕ ವಾದ ಮಂಡನೆ-ಸಹಾಯಕ ಅಭಿಯೋಜಕ ಪುತ್ತೂರಿನ ದಿವ್ಯರಾಜ್ ಹೆಗ್ಡೆಗೆ ಪ್ರಶಂಸನಾ ಪತ್ರ

0

ಪುತ್ತೂರು: ಹಲವು ಪ್ರಕರಣಗಳಲ್ಲಿ ಸರಕಾರದ ಪರವಾಗಿ ಸಮರ್ಪಕ ವಾದ ಮಂಡಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ ಬೆಳ್ತಂಗಡಿ ಹಿರಿಯ ಸಿವಿಲ್ ಮತ್ತು ಜೆಎಮ್‌ಎಫ್‌ಸಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ಪುತ್ತೂರಿನ ಉರ್ಲಾಂಡಿಯ ದಿವ್ಯರಾಜ್ ಹೆಗ್ಡೆಯವರಿಗೆ ಪೊಲೀಸ್ ಇಲಾಖೆ ಮತ್ತು ಅಭಿಯೋಜನ ಇಲಾಖೆಯಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಜೂ.24ರಂದು ನಡೆದ ಪೊಲೀಸ್ ಇಲಾಖೆ ಮತ್ತು ಅಭಿಯೋಜನ ಇಲಾಖೆ ಸಮನ್ವಯ ಮತ್ತು ಅಭಿನಂದನ ಸಭೆಯಲ್ಲಿ ದಿವ್ಯರಾಜ್ ಹೆಗ್ಡೆಯವರಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಭಗವಾನ್ ಸೋನಾವಣೆರವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಅಭಿಯೋಜನ ಇಲಾಖೆ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕ ರಾಜು ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ಉಪಸ್ಥಿತರಿದ್ದರು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸರಕಾರಿ ಅಭಿಯೋಜಕರು ಮತ್ತು ಸಹಾಯಕ ಸರಕಾರಿ ಅಭಿಯೋಜಕರುಗಳು ಉಪಸ್ಥಿತರಿದ್ದರು. ದಿವ್ಯರಾಜ್ ಹೆಗ್ಡೆಯವರು ಪುತ್ತೂರಿನ ಉರ್ಲಾಂಡಿ ದಿ.ನಾರಾಯಣ ಹೆಗ್ಡೆ ಹಾಗೂ ಸಾವಿತ್ರಿ ದಂಪತಿ ಪುತ್ರ.

LEAVE A REPLY

Please enter your comment!
Please enter your name here