ಫಿಲೋಮಿನಾ ಗಣೇಶೋತ್ಸವದ 40ನೇ ವರ್ಷದ ಸಂಭ್ರಮಾಚರಣೆ

0

  • ಫಿಲೋಮಿನಾ ಕಾಲೇಜು ವಿದ್ಯಾರ್ಥಿಗಳಿಂದ ಪೂರ್ವಭಾವಿ ಸಭೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಮಿತ್ರರಿಂದ 1983ರಲ್ಲಿ ಶ್ರೀ ಗಣೇಶೋತ್ಸವ ಆರಂಭಿಸಲ್ಪಟ್ಟ ಪ್ರಸ್ತುತ ಫಿಲೋ ಗಣಪನಿಗೆ 40ರ ಸಂಭ್ರಮವಾಗಿದೆ. ಜೂ.25 ರಂದು ದರ್ಬೆ ವಿನಾಯಕ ನಗರದ ಸರಸ್ವತಿ ಕೋ-ಆಪರೇಟಿವ್ ಸೊಸೈಟಿಯ ಮಹಡಿಯಲ್ಲಿ ಸಂತ ಫಿಲೋಮಿನಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಶ್ರೀ ಗಣೇಶೋತ್ಸವದ ಪೂರ್ವಭಾವಿ ಸಭೆಯು ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷರಾದ ಪ್ರಕಾಶ್ ಮುಕ್ರಂಪಾಡಿರವರ ನೇತೃತ್ವದಲ್ಲಿ ಜರಗಿತು.

 

 


ಈ ಸಭೆಯಲ್ಲಿ ಪ್ರಸ್ತುತ ವರ್ಷ ಶ್ರೀ ಗಣೇಶೋತ್ಸವ ಆಚರಣೆಯ ಬಗ್ಗೆ ಚರ್ಚಿಸಲಾಯಿತು.ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1ರಂದು ವಿನಾಯಕ ನಗರದಲ್ಲಿ ಎರಡು ದಿನಗಳ ಕಾಲ ವಿಜ್ರಂಭಣೆಯಿಂದ ಶ್ರೀ ಗಣೇಶೋತ್ಸವ ನಡೆಸುವುದೆಂದು ತೀರ್ಮಾನಿಸಲಾಯಿತು. ಈ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಾರ್ವಜನಿಕ ಅನ್ನಸಂತರ್ಪಣೆ ಅಲ್ಲದೆ ಫಿಲೋಮಿನಾ ವಿದ್ಯಾಸಂಸ್ಥೆಯ ರ್ಯಾಂಕ್ ವಿಜೇತ ವಿದ್ಯಾರ್ಥಿ ಮಿತ್ರರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ 15 ರಂದು ವಿದ್ಯಾರ್ಥಿ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಬೃಹತ್ ರಕ್ತದಾನ ಶಿಬಿರ ನಡೆಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಮುಕ್ರಂಪಾಡಿ, ಸದಸ್ಯರಾದ ದುರ್ಗಾಪ್ರಸಾದ್, ವೆಂಕಟಕೃಷ್ಣ ಕೆ.ಕೆ, ವೇಣುಗೋಪಾಲ್, ಶಿವಪ್ರಸಾದ್ ಹಾಗೂ ಹಿರಿಯ ವಿದ್ಯಾರ್ಥಿಗಳಾದ ಸುಕುಮಾರ್, ಸುಖೇಶ್, ಕೀರ್ತೇಶ್, ಅಖಿಲ್, ನಿತೀಶ್, ಶಮಂತ್, ವಿದ್ಯಾರ್ಥಿಗಳಾದ ಪ್ರಖ್ಯಾತ್, ಪ್ರಜ್ವಲ್, ಅಮೃತ್, ರಶ್ಮಿ, ಹರ್ಷಿತಾ, ಮಹಾಲಸ, ಅಕ್ಷತಾ, ಪ್ರಿಯಾ, ನಿಹಾರಿಕಾ ಚೇತನ್, ಹೃದಯ್, ಯಶ್ವಂತ್, ವಿಕ್ರಂ, ಗುರುಕಿರಣ್, ಸಾಯಿಲಿ ವಿ.ಸುವರ್ಣ, ಅನುಷ್, ಚೈತನ್ಯ, ಅಭುಷೇಕ್, ಕಾರ್ತೀಕ್, ರೋಹಿತ್, ಧನುಷ್, ಪ್ರದ್ಯುಮ್ನ, ಪ್ರೀತಂ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here