ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ವಿದ್ಯಾರ್ಥಿ ಸಂಘದ ಉದ್ಘಾಟನೆ

0

 

ನೆಲ್ಯಾಡಿ: ಶ್ರೀರಾಮ ವಿದ್ಯಾಲಯ ನೆಲ್ಯಾಡಿಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಜೂ.23ರಂದು ನಡೆಯಿತು. ಮುಖ್ಯ ಅತಿಥಿಯಾಗಿದ್ದ ಮುರಳಿಕೃಷ್ಣ ಹಸಂತಡ್ಕರವರು ಮಾತನಾಡಿ, ಭಾರತೀಯ ಸಂಸ್ಕೃತಿ, ಸಂಸ್ಕಾರ ಉಳಿಯಬೇಕಾದರೆ ಸದೃಢ ನಾಯಕತ್ವದ ಅವಶ್ಯಕತೆ ಇದೆ, ಅದು ಯಶಸ್ಸು ಆಗಬೇಕಾದರೆ ವಿದ್ಯಾರ್ಥಿಗಳು ಸಮಾಜಮುಖಿ ಯೋಚನೆಗಳನ್ನು ಮಾಡುತ್ತಾ, ಸಮಾಜಕೋಸ್ಕರ ಬದುಕಲು ಕಲಿಯಬೇಕು ಎಂದು ಹೇಳಿ ಶುಭ ಹಾರೈಸಿದರು. ವಿದ್ಯಾಲಯದ ಆಡಳಿತ ಸಮಿತಿ ಕಾರ್ಯದರ್ಶಿ ಮೂಲಚಂದ್ರ ಕಾಂಚನ, ಮುಖ್ಯಗುರು ಗಣೇಶ್ ವಾಗ್ಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಹಿಣಿ ಮಾತಾಜಿ ಸ್ವಾಗತಿಸಿ, ಸುಜನಾ ಮಾತಾಜಿ ವಂದಿಸಿದರು. ಭಾಗೀರಥಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಸದಸ್ಯರು ಹಿರಿಯರ ಆಶೀರ್ವಾದ ಪಡೆದು ಭಾರತಮಾತೆಗೆ ದೀಪ ಬೆಳಗುವ ಮೂಲಕ ತಮ್ಮ ಜವಾಬ್ದಾರಿಯುತ ಹುದ್ದೆಗಳನ್ನು ಪ್ರಾರಂಭಿಸಿದರು.

LEAVE A REPLY

Please enter your comment!
Please enter your name here