ಪೆರಾಬೆ ಗ್ರಾ.ಪಂ.ಅಧ್ಯಕ್ಷರ ಸಹಿತ ಮೂವರಿಗೆ ಹಲ್ಲೆ ಪ್ರಕರಣ:ಬಂಧಿತ ಆರೋಪಿಗಳಿಗೆ ಜಾಮೀನು

0

ಪುತ್ತೂರು: ಕಾರಿನಲ್ಲಿ ಸಂಚರಿಸುತ್ತಿದ್ದ ಪೆರಾಬೆ ಗ್ರಾ.ಪಂ.ಅಧ್ಯಕ್ಷ ಮೋಹನ್‌ದಾಸ್ ರೈ ಹಾಗೂ ಇತರ ಇಬ್ಬರ ಮೇಲೆ ಜೂ.24ರಂದು ರಾತ್ರಿ ಪೆರಾಬೆಯಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ಜಾಮೀನು ದೊರೆತಿದೆ.

ಪೆರಾಬೆ ಗ್ರಾಮದ ಕೋಚಕಟ್ಟೆ ನಿವಾಸಿ ಅಬ್ದುಲ್ ಖಾದ್ರಿಯವರ ಪುತ್ರ ಮೊದು ಕುಂಞಿ(38 ವ.)ಹಾಗೂ ಪೆರಾಬೆ ಗ್ರಾಮದ ಬೇಳ್ಪಾಡಿ ನಿವಾಸಿ ಆದಂರವರ ಪುತ್ರ ಮಹಮ್ಮದ್ ಜುಬೈರ್ ಎಂಬವರನ್ನು ಕಡಬ ಪೊಲೀಸರು ಬಂಧಿಸಿದ್ದರು. ಬಂಧಿತರಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿ ಆದೇಶಿಸಿದೆ. ಆರೋಪಿಗಳ ಪರ ನ್ಯಾಯವಾದಿ ಉಪ್ಪಿನಂಗಡಿ ಸಂತೋಷ್‌ಕುಮಾರ್ ಹಾಗೂ ಹರ್ಷಿತಾಕುಮಾರಿ ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here