ರಾಮಕುಂಜ ಪ.ಪೂ.ಕಾಲೇಜಿನಲ್ಲಿ ಪೋಷಕರ ಸಭೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪೋಷಕರ ಸಭೆಯು ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿದ್ದ ನಿವೃತ್ತ ಪ್ರಾಂಶುಪಾಲ ಮತ್ತು ಶಿಕ್ಷಣ ತಜ್ಞ ಬಿ.ವಿ.ಸೂರ್ಯನಾರಾಯಣ ಅವರು ಮಾತನಾಡಿ, ವಿದ್ಯಾರ್ಥಿಗಳು ಗಾಳಿಪಟವಿದ್ದಂತೆ. ಗಾಳಿಪಟವು ಆಕಾಶದಲ್ಲಿ ಹಾರುವಂತೆ ಸಮಾಜದಲ್ಲಿ ಅವರು ಮೇಲೆ ಮೇಲೆ ಏರಬೇಕು. ಸಮಾಜಕ್ಕೆ ಉಪಕಾರಿಯಾಗಬೇಕು. ಗಾಳಿಪಟಕ್ಕೆ ದಾರವು ಸಹಕಾರಿಯಾಗುವಂತೆ ಮಕ್ಕಳೊಂದಿಗೆ ಉತ್ತಮ ಸಂಬಂಧವೆಂಬ ದಾರದಿಂದ ಅವರು ಸಮಾಜಕ್ಕೆ ಮತ್ತು ಮನೆಗೆ ಪೂರಕವಾಗಿರುವಂತೆ ನೋಡಿಕೊಳ್ಳಬೇಕು. ನಾವು ಹೇಗೆ ಇದ್ದೇವೆಯೋ ಹಾಗೆಯೇ ಮಕ್ಕಳು ಇರುತ್ತಾರೆ. ನಾವು ಸ್ವಲ್ಪ ಟಿವಿ, ಮೊಬೈಲ್‌ಗಳನ್ನು ತ್ಯಾಗ ಮಾಡಬೇಕು ಅದೂ ನಮ್ಮ ಮಕ್ಕಳ ಭವಿಷ್ಯಕ್ಕಾಗಿ. ಗಾಳಿಪಟಕ್ಕೆ ಆಕಾಶದಲ್ಲಿ ಹಾರಲು ಗಾಳಿ ಬೇಕು. ಅಂತೆಯೇ ಮಕ್ಕಳಿಗೆ ಪ್ರೊತ್ಸಾಹದ ಗಾಳಿ ಬೀಸಿದರೆ, ಅವರು ಸಮಾಜದ ಉನ್ನತ ಪದವಿಗಳನ್ನು ಏರಲು ಸಾಧ್ಯ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್.ರವರು ಸಂಸ್ಥೆಯ ಸಾಧನೆಗಳನ್ನು ವಿವರಿಸಿದರು. ಪ್ರಾಂಶುಪಾಲರಾದ ಚಂದ್ರಶೇಖರ್ ಸ್ವಾಗತಿಸಿ, ಕಾಲೇಜಿನ ನಿಯಮಗಳನ್ನು ತಿಳಿಸಿದರು. ಹಿರಿಯ ಉಪನ್ಯಾಸಕ ಗುಡ್ಡಪ್ಪ ಬಲ್ಯರವರು ಕಾಲೇಜಿನ ಉಪನ್ಯಾಸಕರ ಪರಿಚಯ ಮಾಡಿದರು. ಇನ್ನೋರ್ವ ಹಿರಿಯ ಉಪನ್ಯಾಸಕ ಹರಿನಾರಾಯಣ ಆಚಾರ್ಯ ವಂದಿಸಿದರು. ಕಾಲೇಜಿನ ಕನ್ನಡ ಉಪನ್ಯಾಸಕಿ ಮಲ್ಲಿಕಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here