ಕೋಡಿಂಬಾಳ: ವಿದ್ಯುತ್ ಶಾಕ್ ವ್ಯಕ್ತಿ ಸಾವು

0

ಕಡಬ: ಕೋಡಿಂಬಾಳದಲ್ಲಿ ವ್ಯಕ್ತಿಯೊಬ್ಬರಿಗೆ ವಿದ್ಯುತ್ ಶಾಕ್ ಹೊಡೆದು ಅವರು ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ. ಕೋಡಿಂಬಾಳ ಗ್ರಾಮದ ಕೊಡೆಂಕಿರಿ ನಿವಾಸಿ ತೋಮಸ್(63ವ.) ಮೃತಪಟ್ಟವರು. ಇವರು ತನ್ನ ಮನೆಯ ಪಕ್ಕದ ತೆಂಗಿನ ಮರದಿಂದ ಅಲ್ಯುಮೀನಿಯಂ ಕೊಕ್ಕೆಯಿಂದ ತೆಂಗಿನಕಾಯಿ ಕೀಳುತ್ತಿದ್ದಾಗ ಕೊಕ್ಕೆ ಪಕ್ಕದಲ್ಲಿದ್ದ ವಿದ್ಯುತ್ ಲೈನ್ ಆಕಸ್ಮಿಕವಾಗಿ ಸ್ಪರ್ಶವಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕಡಬ ಠಾಣಾ ಎಸ್.ಐ. ಆಂಜನೇಯ ರೆಡ್ಡಿ , ಕಡಬ ಮೆಸ್ಕಾಂ ಎಇಇ ಸಜಿಕುಮಾರ್ ಜೆ.ಇ ಸತ್ಯನಾರಾಯಣ ಭೇಟಿ ನೀಡಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

LEAVE A REPLY

Please enter your comment!
Please enter your name here