ಜೂ.30 ರಂದು ಗಲ್ಫ್ ಟೂರ್ಸ್ & ಟ್ರಾವೆಲ್ಸ್ – ಹಜ್ ಯಾತ್ರಿಕರ ತಂಡದ ಪಯಣ

0

ಪುತ್ತೂರು: ಹಜ್ ಉಮ್ರಾ ಯಾತ್ರಾ ಸೇವೆಯಲ್ಲಿ ಕಳೆದ ಹದಿನಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪುತ್ತೂರಿನ ಪ್ರತಿಷ್ಠಿತ ಟ್ರಾವೆಲ್ ಏಜೆನ್ಸಿ ಯಾದ ಗಲ್ಫ್ ಟೂರ್ಸ್ & ಟ್ರಾವೆಲ್ಸ್ ಸಂಸ್ಥೆಯ ಈ ವರ್ಷದ ಹಜ್ ಯಾತ್ರಿಕರ ತಂಡವು ಜೂನ್ 30 ರಂದು ಯಾತ್ರೆ ಹೊರಡಿಲಿದೆ.ಆ ಪ್ರಯುಕ್ತ ಯಾತ್ರೆ ಕೈಗೊಳ್ಳಲಿರುವ ಹಜ್ ಯಾತ್ರಿಕರಿಗೆ ಪ್ರಾಯೋಗಿಕ ಹಜ್ ತರಬೇತಿಯು ಪುತ್ತೂರು ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣ ದಲ್ಲಿರುವ ಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಜರಗಿತು.ಸಂಸ್ಥೆಯ ಮಾಲಕರಾದ ಸುಲೈಮಾನ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.

ಉಸ್ತಾದ್ ವಾಲೆಮುಂಡೇವು ಮಹ್ಮೂದ್ ಫೈಝಿ ಉದ್ಘಾಟಿಸಿ ಮಾತನಾಡಿ,ಇಸ್ಲಾಮಿನ ಆರಾಧನಾ ಕರ್ಮಗಳ ಪೈಕಿ ಹಜ್ ಕರ್ಮದಲ್ಲಿ ದೈಹಿಕ ಶ್ರಮ, ಧನ ವ್ಯಯ, ಏಕಾಗ್ರತೆ ವಿನಿಯೋಗಿಸಲ್ಪಡುತ್ತಿದ್ದು, ಮತ್ಯಾವುದೇ ಆರಾಧನೆಗಳಿಗೆ ಲಭಿಸದ ಅತ್ಯುನ್ನತ ಪ್ರತಿಫಲಗಳು ಹಜ್ ಕರ್ಮಕ್ಕಿದೆ.ಜೀವನದಲ್ಲಿ ಲಭಿಸುವ ಅಪೂರ್ವ ಅವಕಾಶಗಳನ್ನು ಹಜ್ ಯಾತ್ರಿಕರು ಸದುಪಯೋಗಪಡಿಸಿ ಧನ್ಯರಾಗಬೇಕೆಂದರು.

ಹಜ್ ಉಮ್ರಾ ಯಾತ್ರೆಯ ಅನುಭವಿ ಅಮೀರ್ ಮಾಡನ್ನೂರು ಖತೀಬರಾದ ಸಿರಾಜುದ್ದೀನ್ ಫೈಝಿ ತರಬೇತಿ ನೀಡಿದರು.ಕೂರ್ನಡ್ಕ ಮಹಿಳಾ ಶರೀಅತ್ ಕಾಲೇಜಿನ ಪ್ರಮುಖರಾದ ಹಾಜಿ ಮುಹಮ್ಮದ್ ಸಾಬ್ ಉಪಸ್ಥಿತರಿದ್ದು ಶುಭ ಹಾರೈಸಿದರು.

ಜೂ. ೩೦ ಹಜ್ ಯಾತ್ರೆ :ಹಜ್ ಯಾತ್ರಾ ತಂಡವು ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರ ವಿಮಾನ ಮೂಲಕ ಜಿದ್ದಾ ತಲುಪಲಿದೆ.
ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಯು.ಎ.ಇ.ಸಮಿತಿಯ ಕೋಶಾಧಿಕಾರಿಯಾದ ಅಶ್ರಫ್ ಯಾಕೂತ್, ಸಮಸ್ತ ವಿದ್ಯಾರ್ಥಿ ಸಂಘಟನೆಯ ಪುತ್ತೂರು ವಲಯ ಅಧ್ಯಕ್ಷರೂ ಖ್ಯಾತ ಸಂಘಟಕರೂ ಆದ ಉದ್ಯಮಿ ಇಬ್ರಾಹೀಂ ಬಾತಿಶಾ ಪಾಟ್ರಕೋಡಿ ಸೇರಿದಂತೆ ಇರುವ ಹಜ್ ಯಾತ್ರಾರ್ಥಿಗಳ ಯಾತ್ರಾ ತಂಡದಲ್ಲಿ ವಿದ್ವಾಂಸ ಸಿರಾಜುದ್ದೀನ್ ಫೈಝಿ ಮಾಡನ್ನೂರು ಆರಾಧನಾ ಕರ್ಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.ಜುಲೈ ತಿಂಗಳ ೯ ರಿಂದ ಆರಂಭಗೊಂಡು ೧೪ರವರೆಗೆ ಹಜ್ ನ ಆರಾಧನಾ ಕರ್ಮಗಳು ನಡೆದು ಬಳಿಕ ಮದೀನಾ ಝಿಯಾರತ್ ನಡೆಸಿ,ಮರಳಲಿದ್ದಾರೆ.

ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಅರೆಕಾಲಿಕ ಹಾಗೂ ಪೂರ್ಣಕಾಲಿಕ ಹಜ್ ಪ್ಯಾಕೇಜನ್ನು ಸಂಸ್ಥೆಯು ಈ ವರ್ಷ ವ್ಯವಸ್ಥೆ ಗೊಳಿಸಿದ್ದು,ಅದರಂತೆ ಕೆಲವು ಮಂದಿ ಯಾತ್ರಾರ್ಥಿಗಳು ಹಜ್ ಮುಗಿದ ಕೂಡಲೇ ಮದೀನಾ ಝಿಯಾರತ್ ನಡೆಸಿ ತಾಯ್ನಾಡಿಗೆ ಮರಳಿದರೆ, ಪೂರ್ಣಕಾಲಿಕ ಪ್ಯಾಕೇಜ್ ನವರು ಸಂಪೂರ್ಣ ಹಜ್ ಋತು ಮುಗಿಸಿ, ಮದೀನಾ ಸಂದರ್ಶನ ನಿರ್ವಹಿಸಿ ಊರಿಗೆ ಮರಳಲಿದ್ದಾರೆ ಎಂದು ಸಂಸ್ಥೆಯ ಮಾಲಕ ಸುಲೈಮಾನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here