ಮರಳುಗಾರಿಕೆ ಸರಳಿಕರಣಕ್ಕೆ ಹಸಿರು ನಿಶಾನೆ – ಪುತ್ತೂರು ಸೇರಿದಂತೆ ಜಿಲ್ಲೆಯ ಮರಳುಗಾರಿಕೆ ಸಂಘದ ಸಭೆಯಲ್ಲಿ ಗಣಿಗಾರಿಕೆ ಸಚಿವರ ಭರವಸೆ

0

  • ಮಾನವ ಶ್ರಮದ ಮರಳುಗಾರಿಕೆಯನ್ನು ಮಾಡಲು ಅವಕಾಶ
  •  ತಾಲೂಕು ಮಟ್ಟದ ವ್ಯಾಪ್ತಿಯಲ್ಲಿ ಹರಾಜು ಮಾಡಲು ಅವಕಾಶ
  •  ವೇ ಬ್ರಿಡ್ಜ್ ಅಳವಡಿಸಲು ನೋಟಿಸ್‌ ಹಿಂಪಡೆಯುವಿಕೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಸಿ ಆರ್ ಝೆಡ್ ಮತ್ತು ನೋನ್ ಸಿಆರ್ ಝೆಡ್ ಮರಳುಗಾರಿಕೆಯ ಪ್ರಮುಖ ಸಮಸ್ಯೆಗಳ ನೀತಿಯನ್ನು ಸರಳಿಕರಣಗೊಳಿಸು ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಹಾಲಪ್ಪ ಆಚಾರ್ ಅವರು ಭರವಸೆ ನೀಡಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮುತುವರ್ಜಿಯಂತೆ ಜೂ.29 ರಂದು ಬೆಂಗಳೂರಿನ ವಿಧಾನಸೌಧದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಿ ಆರ್ ಝೆಡ್ ಮತ್ತು ನೋನ್ ಸಿಆರ್ ಝೆಡ್ ಪ್ರಮುಖ ಸಮಸ್ಯೆ ಬಗ್ಗೆ ಸಚಿವ ಹಾಲಪ್ಪ ಆಚಾರ್ ಅವರು ಸಭೆ ನಡೆಸಿದರು.

ಮರಳುಗಾರಿಕೆಯ ಕುರಿತು ಬೇಡಿಕೆಯಂತೆ ನಾನ್ ಸಿ.ಆರ್. ಝಡ್, ಪ್ರದೇಶದಲ್ಲಿ ಹಿನ್ನೀರಿನಲ್ಲಿ ಮಾನವ ಶ್ರಮದ ಮರಳುಗಾರಿಕೆಯನ್ನು ಮಾಡಲು ಅವಕಾಶ ಕಲ್ಪಿಸುವುದು, ಮರಳುಗಾರಿಕೆಗೆ ಈ ಹಿಂದಿನಂತೆ ತಾಲೂಕು ಮಟ್ಟದಲ್ಲೇ ಟೆಂಡರ್ ಹಾರಜು ಪ್ರಕ್ರಿಯೆ ನಡೆಸುವುದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೌಗೋಳಿಕವಾಗಿ ವೇ ಬ್ರಿಡ್ಜ್ ಅಳವಡಿಸಲು ಅಡಚಣೆ ಆಗುವುದರಿಂದ ಅದನ್ನು ಕೈ ಬಿಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಚಿವರು ಈ ಸಮಸ್ಯೆಗಳಿಗೆ ಪರಿಹಾರ ನೀಡಿ ಮರಳು ನೀತಿಯನ್ನು ಸಡಿಲೀಕರಣಗೊಳಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್ ಅಂಗಾರ, ಶಾಸಕರಾದ ಉಮಾನಾಥ ಕೋಟ್ಯಾನ್ ರಾಜೇಶ್ ನಾಯಕ್, ಮರಳುಗಾರರ  ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಮೆದು, ಕೋಶಾಧಿಕಾರಿ ಸುರೇಶ ಕು‌ಮಾರ್ ಕುಂಡಡ್ಕ, ಉಪಾಧ್ಯಕ್ಷ ವಿ ಪಿ ಜೋಯಿ, ಗೌರವಧ್ಯಕ್ಷ ಬಾಲಕೃಷ್ಣ ಬಾಣಜಾಲು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here