ಎಎಸ್‌ಐ, ಹೆಡ್‌ಕಾನ್‌ಸ್ಟೇಬಲ್, ಕಾನ್‌ಸ್ಟೇಬಲ್‌ಗಳ ವರ್ಗಾವಣೆ

0

ಪುತ್ತೂರು:ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಎಸ್‌ಐ, ಹೆಡ್‌ಕಾನ್‌ಸ್ಟೇಬಲ್‌ಗಳು ಮತ್ತು ಕಾನ್‌ಸ್ಟೇಬಲ್ ಹುದ್ದೆಗಳನ್ನು ಪುನರ್ ಸಂಘಟಿಸಿ, ಮರು ಹಂಚಿಕೆಯಾಗಿರುವ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಹಂಚಿಕೆ ಮಾಡಿ ವರ್ಗಾವಣೆಗೊಳಿಸಿ ಸ್ಥಳ ನಿಯುಕ್ತಿಗೊಳಿಸಲಾಗಿದೆ.

ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಎಎಸ್‌ಐ ಆಗಿರುವ ನಾರಾಯಣ ಸಿ.ಎಚ್. (ಜೂ.30ರಂದು ನಿವೃತ್ತಿ ಹೊಂದಿಲಿದ್ದಾರೆ) ಅವರನ್ನು ಬೆಳ್ತಂಗಡಿ ಸಂಚಾರ ಠಾಣೆಗೆ, ಬೆಳ್ಳಾರೆ ಠಾಣೆಯ ಎಎಸ್‌ಐ ಭಾಸ್ಕರ ಎ.ಅವರನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ,ಬೆಳ್ಳಾರೆ ಠಾಣೆಯ ಎಎಸ್‌ಐ ನಾರಾಯಣ ಪಿ.ಅವರನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ,ಬೆಳ್ಳಾರೆ ಠಾಣೆಯ ಎಎಸ್‌ಐ ಸುಧಾಕರ್ ಅವರನ್ನು ಬಂಟ್ವಾಳ ಸಂಚಾರ ಠಾಣೆಗೆ, ಸುಳ್ಯ ಠಾಣೆಯ ಎಎಸ್‌ಐ ರವೀಂದ್ರ ಅವರನ್ನು ಬೆಳ್ಳಾರೆ ಠಾಣೆಗೆ,ಸುಳ್ಯ ಠಾಣೆಯ ಎಎಸ್‌ಐ ಶಿವರಾಮ ಅವರನ್ನು ವಿಟ್ಲ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.

ಹೆಡ್‌ಕಾನ್‌ಸ್ಟೇಬಲ್‌ಗಳು: ಬಂಟ್ವಾಳ ಗ್ರಾಮಾಂತರ ಠಾಣೆಯ ಸುರೇಶ್ ಗೌಡರನ್ನು ವಿಟ್ಲ ಠಾಣೆಗೆ,ಬಂಟ್ವಾಳ ಸಂಚಾರ ಠಾಣೆಯ ಸೋಮನಾಥ ರೈಯವರನ್ನು ಉಪ್ಪಿನಂಗಡಿ ಠಾಣೆಗೆ, ಬಂಟ್ವಾಳ ಸಂಚಾರ ಠಾಣೆಯ ಕೆ.ಉದಯ ರೈ ಅವರನ್ನು ವಿಟ್ಲ ಪೊಲೀಸ್ ಠಾಣೆಗೆ, ಸುಳ್ಯ ಪೊಲೀಸ್ ಠಾಣೆಯ ಕರುಣಾಕರ ಅವರನ್ನು ವಿಟ್ಲ ಪೊಲೀಸ್ ಠಾಣೆಗೆ, ಸುಳ್ಯ ಪೊಲೀಸ್ ಠಾಣೆಯ ಚಾಮಯ್ಯ ಅವರನ್ನು ಕಡಬ ಪೊಲೀಸ್ ಠಾಣೆಗೆ, ಬೆಳ್ಳಾರೆ ಠಾಣೆಯ ಮೋಹನ ಟಿ.ಅವರನ್ನು ವಿಟ್ಲ ಠಾಣೆಗೆ, ಡಿಎಸ್‌ಎ ಲಕ್ಷ್ಮೀಶ ಗೌಡರನ್ನು ಪುತ್ತೂರು ನಗರ ಠಾಣೆಗೆ, ಪುತ್ತೂರು ನಗರ ಠಾಣೆಯ ಶ್ರೀಧರ ಅವರನ್ನು ವಿಟ್ಲ ಠಾಣೆಗೆ, ಮಹಿಳಾ ಪೊಲೀಸ್ ಠಾಣೆಯ ನವೀನ್ ಕುಮಾರ್ ಧರ್ಮಸ್ಥಳ ಠಾಣೆಗೆ, ಮಹಿಳಾ ಪೊಲೀಸ್ ಠಾಣೆಯ ಚಿತ್ರಲೇಖ ವಿಟ್ಲ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.ಮಹಿಳಾ ಪೊಲೀಸ್ ಠಾಣೆ ಹೆಡ್‌ಕಾನ್‌ಸ್ಟೇಬಲ್ ಶ್ರೀಮತಿ ಚಿನ್ನಮ್ಮ ಎನ್.ಅವರನ್ನು ಡಿಎಸ್‌ಬಿ ಮಂಗಳೂರಿಗೆ ಮತ್ತು ಡಿಎಸ್‌ಬಿ ಮಂಗಳೂರಿನಿಂದ ಹೆಡ್‌ಕಾನ್‌ಸ್ಟೇಬಲ್ ಧರ್ಮಪಾಲ ಕೆ.ಅವರನ್ನು ಮಹಿಳಾ ಪೊಲೀಸ್ ಠಾಣೆಗೆ ಪರಸ್ಪರ ಸ್ಥಳ ಬದಲಾವಣೆ ಮಾಡಲಾಗಿದೆ.

ಕಾನ್‌ಸ್ಟೇಬಲ್‌ಗಳು: ಪುತ್ತೂರು ನಗರ ಠಾಣೆಯ ಸತೀಶ್ ಅಹೇರಿ ಕಡಬ ಠಾಣೆಗೆ, ಪುತ್ತೂರು ಸಂಚಾರಿ ಠಾಣೆಯ ಮುರಿಗಪ್ಪ ಎಸ್.ದಂಗಿ,ಮಂಜುನಾಥ್ ಕೆ.ಕಡಬ ಠಾಣೆಗೆ, ಮಹಿಳಾ ಠಾಣೆಯ ಪವನ್ ಎಂ.ಕೆ.ಪುಂಜಾಲಕಟ್ಟೆ ಠಾಣೆಗೆ, ಮಹಿಳಾ ಪೊಲೀಸ್ ಠಾಣೆಯ ಗಜೇಂದ್ರ ಸಿದಗೊಂಡ ಮೆಂಡಿಗೇರಿ, ರಜಿತ್ ಕೆ.ಆರ್,ಸಂಗಪ್ಪ ಡಿ.ಕುಂಬಳಿ, ಇಸಾಕ್ ಬಿಜಾಪುರ, ಸಂತೋಷ್ ಕರಿಗಾರ್,ಪರಶುರಾಮ ಲಮಾಣಿ ವಿಟ್ಲ ಪೊಲೀಸ್ ಠಾಣೆಗೆ, ಬಂಟ್ವಾಳ ಗ್ರಾಮಾಂತರ ಠಾಣೆಯ ಸತೀಶ್ ವಿಟ್ಲ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

ಸಂಬಂಧಪಟ್ಟ ಪಿಎಸ್‌ಐರವರುಗಳು ಸ್ಥಳ ನಿಯುಕ್ತಿಗೊಂಡ ಸಿಬ್ಬಂದಿಗಳನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here