ಈಶ್ವರಮಂಗಲ: ಧಾರಕಾರ ಮಳೆಗೆ ರಸ್ತೆಗೆ ಬಿದ್ದ ಮರ- ಎಸ್‌ಡಿಪಿಐ ಕಾರ್ಯಕರ್ತರಿಂದ ತೆರವು ಕಾರ್ಯಾಚರಣೆ

0

ಪುತ್ತೂರು: ಜೂ.30ರಂದು ಸುರಿದ ಧಾರಾಕಾರ ಮಳೆಗೆ ಈಶ್ವರಮಂಗಲದಲ್ಲಿ ರಸ್ತೆಗೆ ಮರಗಳು ಬಿದ್ದು ವಾಹನ ಪ್ರಯಾಣಕ್ಕೆ ಅಡಚಣೆ ಉಂಟಾಗಿತ್ತು. ಕೂಡಲೇ ಎಸ್‌ಡಿಪಿಐ ರೆಸ್ಕ್ಯೂ ತಂಡ ಸ್ಥಳಕ್ಕೆ ಧಾವಿಸಿ ಮರಗಳನ್ನು ತೆರವುಗೊಳಿಸಿ ಸುಗಮ ಪ್ರಯಾಣಕ್ಕೆ ಅನುವು ಮಾಡಿ ಕೊಡಲಾಯಿತು. ಎಸ್‌ಡಿಪಿಐ ನೆ.ಮುಡ್ನೂರು ಗ್ರಾಮ ಸಮಿತಿ ಅಧ್ಯಕ್ಷ ಸಾದಿಕ್.ಪಿ, ಗ್ರಾಮ ಸಮಿತಿ ಸದಸ್ಯ ರಶೀದ್, ಪಾಳ್ಯತ್ತಡ್ಕ ಬೂತ್ ಕಾರ್ಯದರ್ಶಿ ನಿಝಾರ್, ಕಾರ್ಯಕರ್ತರಾದ ಅಬೂಸಾಲಿ ಮತ್ತು ಶಫೀಕ್ ಮೇನಾಲ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here