ಮಿಸೆಸ್ ಯುಎಇ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಪುತ್ತೂರಿನ ಪವಿತ್ರಾ ಶೆಟ್ಟಿ 1ನೇ ರನ್ನರ್ ಅಪ್

0

ಪುತ್ತೂರು : ದುಬೈ ಸಿಲಿಕಾನ್ ಓಯಸಿಸ್‌ನ ರಾಡಿಸನ್ ರೆಡ್‌ನಲ್ಲಿ ನಡೆದ ಮಿಸೆಸ್ U.A.E ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಪುತ್ತೂರಿನ ಪವಿತ್ರಾ ಶೆಟ್ಟಿರವರು 1ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಹೆಚ್ಚುವರಿಯಾಗಿ ಸ್ಪರ್ಧೆಯ ಭಾಗವಾಗಿ ಶ್ರೀಮತಿ ಫಿಟ್ನೆಸ್ ಕ್ವೀನ್ ಕಿರೀಟವನ್ನು ಪಡೆದಿದ್ದಾರೆ. ಯು.ಎ.ಇಯಲ್ಲಿ ವಾಸಿಸುವ ಎಲ್ಲಾ ರಾಷ್ಟ್ರೀಯತೆಗಳಿಗೆ ಮುಕ್ತವಾಗಿರುವ ಈ ಸ್ಪರ್ಧೆಯು ಮಧ್ಯಪ್ರಾಚ್ಯದಲ್ಲಿ ಅತಿದೊಡ್ಡ ಮತ್ತು ಅತ್ಯಂತ ಪಾರದರ್ಶಕ ಸ್ಪರ್ಧೆಗಳಲ್ಲಿ ಒಂದಾಗಿದ್ದು ಅತ್ಯಂತ ಪ್ರತಿಷ್ಠಿತ ಮತ್ತು ಗಣ್ಯ ಶೀರ್ಷಿಕೆಗಳಲ್ಲಿ ಒಂದಾಗಿದೆ.


ಯುಎಇ ಮೂಲದ ಅಂತಾರಾಷ್ಟ್ರೀಯ ಮಾಡೆಲ್ ಆಗಿರುವ ಮೀನಾ ಅಸ್ರಾನಿರವರ ಪ್ರಮುಖ ಬ್ರ್ಯಾಂಡ್ ಬೀಯಿಂಗ್ ಮುಸ್ಕಾನ್ ಈ ಈವೆಂಟ್‌ನ್ನು ಪ್ರಸ್ತುತಪಡಿಸಿದೆ. ಮೀನಾ ಅಸ್ರಾನಿರವರು ಮಿಸೆಸ್ ಇಂಡಿಯಾ ಯೂನಿವರ್ಸ್UAE, ಮಿಸೆಸ್ ಇಂಡಿಯಾ ಯೂನಿವರ್ಸ್ ಪಾಪ್ಯುಲರ್, ಯುನಿಟಿ ಅವಾರ್ಡ್ಸ್ UAE ಮುಂತಾದ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.


ಪುತ್ತೂರು ಪರ್ಲಡ್ಕ ನಿವಾಸಿಯಾದ ಪವಿತ್ರಾರವರು ಪುತ್ತೂರಿನ ಸಂತ ವಿಕ್ಟರ್ಸ್ ಮತ್ತು ಸಂತ ಫಿಲೋಮಿನಾ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿ ಬಳಿಕ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಜೈವಿಕ ತಂತ್ರಜ್ಞಾನದಲ್ಲಿ ಪದವಿ ಪಡೆದರು. ತನ್ನ ಬಾಲ್ಯದಿಂದಲೇ ವಿವಿಧ ಕಲೆಗಳನ್ನು ಕಲಿಯಲು ಉತ್ಸಾಹ ಹೊಂದಿದ್ದ ಇವರು ಅಥ್ಲೆಟಿಕ್ಸ್, ಸಂಗೀತ, ನೃತ್ಯ, ಮಾರ್ಷಲ್ ಆರ್ಟ್ಸ್ ಇತ್ಯಾದಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬುಡೋಕನ್ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ. ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಕರಾಟೆ ಕಲಿಸುತ್ತಿದ್ದು ವಿಶ್ವಾದ್ಯಂತ ವಿವಿಧ ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ದುಬೈನಲ್ಲಿ ನಡೆದ ಕರಾಟೆ ಬುಡೋಕನ್ ಕಪ್-2022ರಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ೨೫ ವರ್ಷಗಳ ಮಾರ್ಷಲ್ ಆರ್ಟ್ಸ್‌ನ ಅನುಭವ ಮತ್ತು 4ನೇ ಡಾನ್ ಬ್ಲ್ಯಾಕ್ ಬೆಲ್ಟ್ ಹೊಂದಿರುವ ಇವರು ಪ್ರಸ್ತುತ ದುಬೈನಲ್ಲಿ ಕರಾಟೆ ಕಲಿಸುತ್ತಾರೆ. ದುಬೈನಲ್ಲಿ ಪ್ರೊಕ್ಯೂರ್‌ಮೆಂಟ್ ಅಧಿಕಾರಿ ಆಗಿರುವ ಇವರು ಪತಿ ರಾಹುಲ್ ಶೆಟ್ಟಿ ಹಾಗೂ ಪುತ್ರ ನಿಮಿರ್ ಶೆಟ್ಟಿಯವರೊಂದಿಗೆ ದುಬೈನಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here