ಎಎಸ್‌ಐ ನಾರಾಯಣ ಗೌಡ ಸೇವಾ ನಿವೃತ್ತಿ

0

ಪುತ್ತೂರು:ಸಂಪ್ಯ ಪೊಲೀಸ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾರಾಯಣ ಗೌಡ ಸಿ.ಎಚ್.ರವರು ಜೂ.30ರಂದು ವಯೋ ನಿವೃತ್ತಿ ಹೊಂದಿದ್ದಾರೆ.

 


ಪೊಲೀಸ್ ಇಲಾಖೆಯಲ್ಲಿ ಸುದೀರ್ಘ 33 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಚಿದ್ಗಲ್ ಮನೆಯ ದಿ.ಸುಬ್ಬಪ್ಪ ಮತ್ತು ದಿ.ಅಕ್ಕಮ್ಮ ದಂಪತಿಯ ಪುತ್ರ.

ಇವರು ಪ್ರಾಥಮಿಕ ಶಿಕ್ಷಣವನ್ನು 1 ರಿಂದ ೭ನೇ ತರಗತಿಯವರೆಗೆ ಮಡಪ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ೮ರಿಂದ ೧೦ನೇ ತರಗತಿವರೆಗೆ ಗುತ್ತಿಗಾರು ಸರಕಾರಿ ಪ್ರೌಢ ಶಾಲೆಯಲ್ಲಿ ಪೂರ್ಣಗೊಳಿಸಿ ಪಿಯುಸಿ ವಿದ್ಯಾಭ್ಯಾಸವನ್ನು ಸರಕಾರಿ ಜೂನಿಯರ್ ಕಾಲೇಜು ಕೊಂಬೆಟ್ಟು, ಪುತ್ತೂರು ಇಲ್ಲಿ ಪೂರ್ಣಗೊಳಿಸಿರುತ್ತಾರೆ.06/11/1989ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಆಯ್ಕೆಯಾಗಿ ನಂತರ ಪೊಲೀಸ್ ತರಬೇತಿ ಶಾಲೆ ಚೆನ್ನಪಟ್ಟಣದಲ್ಲಿ ತರಬೇತಿಯನ್ನು ಪಡೆದು ಕಾರ್ಕಳ ಪೊಲೀಸ್ ಠಾಣೆಯಲ್ಲಿ 1991ರಿಂದ 1994ರವರೆಗೆ ಸೇವೆ ಸಲ್ಲಿಸಿರುತ್ತಾರೆ.ಅಲ್ಲಿಂದ ವರ್ಗಾವಣೆ ಹೊಂದಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ 1995 ರಿಂದ 2000 ರವರೆಗೆ ಸೇವೆ ಸಲ್ಲಿಸಿದ್ದು,ಬಳಿಕ ಕಡಬ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.2005ರಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿ ಪದೋನ್ನತಿ ಹೊಂದಿ ಅದೇ ಠಾಣೆಯಲ್ಲಿ 2010ರವರೆಗೆ ಕರ್ತವ್ಯ ನಿರ್ವಹಿಸಿದ್ದರು. 2010ರಿಂದ 2015ರವರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆಯಲ್ಲಿ ವಾರಂಟ್ ಅಪರಾಧಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿ ರಜನೀಶ್ ಗೋಯೆಲ್ ಅವರಿಂದ ಉತ್ತಮ ಹೆಡ್ ಕಾನ್‌ಸ್ಟೇಬಲ್ ಸನ್ಮಾನ ಸ್ವೀಕರಿಸಿದ್ದರು.2015ರಲ್ಲಿ ಪುತ್ತೂರು ಸಂಚಾರಿ ಪೊಲೀಸ್ ಠಾಣೆಗೆ ವರ್ಗಾವಣೆ ಹೊಂದಿ 2017ರ ವರೆಗೆ ಸೇವೆ ಸಲ್ಲಿಸಿದ್ದು ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಪದೋನ್ನತಿ ಹೊಂದಿ ಸಂಪ್ಯ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದರು.

ಕೊರೋನಾ ಸಂದರ್ಭದಲ್ಲಿ ಇವರ ಅವಿರತ ಸಮಾಜಮುಖಿ ಸೇವೆಗೆ ಅತ್ಯುತ್ತಮ ಕೊರೋನಾ ವಾರಿಯರ್ ಎಂದು ಪುತ್ತೂರು ಸಹಾಯಕ ಕಮಿಷನರ್‌ರಿಂದ ಪ್ರಶಂಸೆಗೆ ಪಾತ್ರರಾಗಿರುತ್ತಾರೆ. ಸವಣೂರು ಗ್ರಾಮದ ಸೀತಾರಾಮ ಹಾಗೂ ಗಿರಿಜ ದಂಪತಿಯ ಪುತ್ರಿ ಶಶಿಪ್ರಭಾ ಇವರನ್ನು ವಿವಾಹವಾಗಿದ್ದು ಪುತ್ರ ಕೃಷ್ಣೇಶ್ ಎಲಿಮಲೆ ಜ್ಞಾನದೀಪ ಶಾಲೆಯಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.ಪುತ್ರಿ ಕಾವ್ಯಶ್ರೀರವರು ಮಡಿಕೇರಿಯಲ್ಲಿ ವಕೀಲರಾಗಿರುವ ಕಪಿಲ್ ಕುಮಾರ್ ದುಗ್ಗಳರವರನ್ನು ವಿವಾಹವಾಗಿದ್ದು,ಮಗ ಲೋಖ್ಯಾತ್ ಕೆ.ಗೌಡರೊಂದಿಗೆ ಮಡಿಕೇರಿಯಲ್ಲಿ ನೆಲೆಸಿದ್ದಾರೆ.

LEAVE A REPLY

Please enter your comment!
Please enter your name here