ಮನೆ ದಾರಿಗಾಗಿ ಪ್ರಧಾನಿ ಮೋದಿಗೂ ಪತ್ರ ಬರೆದಿದ್ದ ವಿಕಲಚೇತನ ಬಪ್ಪಳಿಗೆ ಪ್ರಣವಿ (ತಾಯಕ್ಕ) ನಿಧನ

0

ಪುತ್ತೂರು: ವಿಕಲಚೇತನ ಬಪ್ಪಳಿಗೆ ನಿವಾಸಿ ಪ್ರಣವಿ (76ವ) ರವರು ಜೂ.30 ರ ತಡ ರಾತ್ರಿ ನಿಧನರಾದರು. ಬಪ್ಪಳಿಗೆ ದಿ. ದೇವಪ್ಪಯ್ಯ ಮಾಸ್ಟರ್ ರವರ ಪುತ್ರಿ ಪ್ರಣವಿ
ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ಹಿಂದೆ ಅವರು ತನ್ನ ಮನೆಗೆ ಹೋಗಲು ದಾರಿ ಒದಗಿಸಲು ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಿದ ಬಳಿಕ ಪ್ರಧಾನಿ ಮೋದಿಯವರಿಗೂ ಪತ್ರ ಬರೆದು ವಿನಂತಿಸಿದ್ದರು.

LEAVE A REPLY

Please enter your comment!
Please enter your name here