ಮಾಹಿತಿ, ಶಿಸ್ತು, ಮೌಲ್ಯ, ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿ ಫಿಲೋಮಿನಾ ಕಾಲೇಜು

0

  • ಕಲಿಕೆಗೆ ಪೂರಕವಾದ ವಾತಾವರಣ | ಪ್ರತಿಭೆಗಳ ಅನಾವರಣದ ಕೇಂದ್ರ | ಸರ್ವರಿಗೂ ಸಮಾನ ಶಿಕ್ಷಣ

ಪುತ್ತೂರು: ಮಂಗಳೂರು ಧರ್ಮಪ್ರಾಂತ್ಯದ ಕಥೋಲಿಕ್ ಶಿಕ್ಷಣ ಮಂಡಳಿಯ ಅಧೀನದಲ್ಲಿರುವ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ದರ್ಬೆ ಫಿಲೋನಗರದಲ್ಲಿನ ಸಂತ ಫಿಲೋಮಿನಾ ಕಾಲೇಜು ಒಂದು ಅಭೂತಪೂರ್ವ ಸಂಸ್ಥೆಯಾಗಿದ್ದು, 1958ರಲ್ಲಿ ಶಿಕ್ಷಣದ ಹರಿಕಾರ, ಶಿಕ್ಷಣ ಶಿಲ್ಪಿ ವಂ|ಮೊ|ಆಂಟನಿ ಪತ್ರಾವೋರವರಿಂದ ಸ್ಥಾಪಿಸಲ್ಪಟ್ಟಿತ್ತು. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿರುವ ಈ ಕಾಲೇಜು ಆರಂಭದಿಂದ ಇಲ್ಲಿವರೆಗೆ ಮಾಹಿತಿ, ಶಿಸ್ತು, ಮೌಲ್ಯಗಳು ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಬದುಕಿಗೆ ಪೂರಕವಾದ ವಾತಾವರಣ, ಮೂಲಭೂತ ಸೌಕರ್ಯ, ಕಲಿಕಾ ಸಂಪನ್ಮೂಲಗಳು ಮತ್ತು ಅದ್ಭುತ ಸಾಧನೆಗಳಿಂದಲೇ ರಾಜ್ಯದಲ್ಲಿಯೇ ಉತ್ತಮ ಹೆಸರನ್ನು ಪಡೆದ ತಾಲೂಕಿನ ಏಕೈಕ ಹಿರಿಯ ಸಂಸ್ಥೆಯಾಗಿದ್ದು ‘ನ್ಯಾಕ್’ ಸ್ವಾಯತ್ತ ಸಂಸ್ಥೆಯು ಕಾಲೇಜಿಗೆ ‘ಎ’ ಗ್ರೇಡ್ ಮಾನ್ಯತೆ ನೀಡಿ ಗೌರವಿಸಿದೆ.

ಗ್ರಾಮೀಣ ವಿದ್ಯಾರ್ಥಿಗಳ ಆಶಾಕಿರಣ:

ನಂಬಿಕೆ ಮತ್ತು ಸೇವೆ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಈ ವಿದ್ಯಾದೇಗುಲವು ಜಾತಿ, ಮತ, ಧರ್ಮ ಎಂಬ ಭೇದಭಾವವಿಲ್ಲದೆ ಎಲ್ಲರಿಗೂ ಸಮಾನವಾದ ವಿದ್ಯಾಭ್ಯಾಸದ ಅವಕಾಶವನ್ನು ಕಲ್ಪಿಸಿದೆ. ಸಮಾಜದ ಕಲ್ಯಾಣಕ್ಕಾಗಿ ನಿರಂತರವಾಗಿ ಸೇವೆಯಲ್ಲಿದ್ದು ಉನ್ನತ ಶಿಕ್ಷಣದ ದೂರದೃಷ್ಟಿತ್ವ ಹೊಂದಿದ್ದು, ಶಿಕ್ಷಣ ಮತ್ತು ತರಬೇತಿಯ ಮೂಲಕ ಯುವಕ-ಯುವತಿಯರ ಸಮಗ್ರ ಅಭಿವೃದ್ಧಿಗೆ ಕಾರಣವಾಗಿ ನಾಡಿನ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿಚಾರದಲ್ಲಿ ಈ ಸಂಸ್ಥೆಯು ಆಶಾಕಿರಣವಾಗಿದೆ. ಸುಮಾರು 27 ಎಕರೆಯಷ್ಟು ವಿಸ್ತೀರ್ಣವಿರುವ ಈ ಸಂಸ್ಥೆ ಶೈಕ್ಷಣಿಕವಾಗಿ ಮಾತ್ರವಲ್ಲದೆ ಕ್ರೀಡೆ, ರಾಜಕೀಯ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಇನ್ನಿತರ ವಿಷಯಗಳಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರತಿಭೆಗಳನ್ನು ಸಮಾಜಕ್ಕೆ ನೀಡಿದ ಹೆಗ್ಗಳಿಕೆ ಈ ಸಂಸ್ಥೆಯು ಹೊಂದಿದೆ.

ಗಮನಾರ್ಹ ಫಲಿತಾಂಶ:

ಆರಂಭದಿಂದಲೂ ಸತತವಾಗಿ ಉತ್ತಮ ಫಲಿತಾಂಶದೊಂದಿಗೆ ಮುನ್ನಡೆಯುತ್ತಿರುವ ಈ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಹೆಮ್ಮೆಯ ಫಲಿತಾಂಶವನ್ನು ದಾಖಲಿಸುತ್ತಿದೆ. 2021-22ನೇ ಸಾಲಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ 17 ರ‍್ಯಾಂಕ್‌ಗಳನ್ನು ಗಳಿಸಿದ ದಾಖಲೆಯೂ ಈ ಸಂಸ್ಥೆಗಿದೆ. ಪದವಿಯಲ್ಲಿ ಅನು ಡಿ(ಬಿಎಸ್ಸಿ) 4ನೇ ರ‍್ಯಾಂಕ್, ರಾಶಿಯಾ ರೈ(ಬಿಬಿಎಂ) 5ನೇ ರ‍್ಯಾಂಕ್, ಚೇತನಾ ಎಸ್(ಬಿಎ) 6ನೇ ರ‍್ಯಾಂಕ್, ಶ್ರೇಯಾ ಕೆ.ಎಸ್(ಬಿಬಿಎ) 7ನೇ ರ‍್ಯಾಂಕ್, ರೆನಿಲ್ಡಾ ಜೋಯ್ಸ್ ಮಾರ್ಟಿಸ್(ಬಿಎಸ್ಸಿ) 9ನೇ ರ‍್ಯಾಂಕ್, ರಮ್ಯಶ್ರೀ ರೈ(ಬಿಎಸ್ಸಿ) 10ನೇ ರ‍್ಯಾಂಕ್, ಸ್ನಾತಕೋತ್ತರ ಪದವಿಯಲ್ಲಿ ಸುಶ್ಮಿತಾ ಕೆ(ಎಂಎಸ್ಸಿ ಫಿಸಿಕ್ಸ್) 1ನೇ ರ‍್ಯಾಂಕ್, ಜೈನಾಬತ್ ರಮ್ಸೀನಾ(ಎಂಎಸ್ಸಿ ಕಂಪ್ಯೂಟರ್ ಸೈನ್ಸ್) 1ನೇ ರ‍್ಯಾಂಕ್, ಸಾರಮ್ಮ(ಎಂಎಸ್‌ಡಬ್ಲೂ) 2ನೇ ರ‍್ಯಾಂಕ್, ನಿರೀಶ್ಮಾ ಸುವರ್ಣ(ಎಂಕಾಂ) 4ನೇ ರ‍್ಯಾಂಕ್, ಯಶಸ್ವಿನಿ ಬಿ(ಎಂಕಾಂ) 5ನೇ ರ‍್ಯಾಂಕ್, ರಕ್ಷಾ ಎಸ್.ವಿ(ಎಂಕಾಂ) 5ನೇ ರ‍್ಯಾಂಕ್, ನಿವಿನ್ ಕೊರೆಯಾ(ಎಂಕಾಂ) 6ನೇ ರ‍್ಯಾಂಕ್, ಶ್ರಾವ್ಯ ಎನ್.ಎಸ್(ಎಂಕಾಂ) 7ನೇ ರ‍್ಯಾಂಕ್, ರಮ್ಯ ಎಂ(ಎಂಕಾಂ) 9ನೇ ರ‍್ಯಾಂಕ್, ಸ್ವಾತಿ ಎಂ(ಎಂಕಾಂ) 10ನೇ ರ‍್ಯಾಂಕ್‌ನ್ನು ಗಳಿಸಿರುತ್ತಾರೆ ಮಾತ್ರವಲ್ಲದೇ ಪ್ರತೀ ವರ್ಷವೂ ವಿದ್ಯಾರ್ಥಿಗಳು ಹಲವು ರ‍್ಯಾಂಕ್‌ಗಳನ್ನು ಗಳಿಸುತ್ತಾ ಸಂಸ್ಥೆಯ ಮೆರುಗನ್ನು ಹೆಚ್ಚಿಸುತ್ತಿದೆ.

ಪ್ರಜ್ವಲಿಸುತ್ತಿದೆ ಕ್ರೀಡಾಕ್ಷೇತ್ರ:

ಕಾಲೇಜು ಎಂಬುದು ಕ್ರೀಡಾಪಟುಗಳ ಸ್ವರ್ಗ ಎಂಬಂತೆ ಸ್ಥಾಪನೆಯಾದಾಗಿನಿಂದ ಇಂದಿನವರೆಗೆ ಫಿಲೋಮಿನಾ ಕಾಲೇಜು ಕ್ರೀಡಾಕ್ಷೇತ್ರದಲ್ಲಿ ತನ್ನ ಹೆಸರನ್ನು ಉಳಿಸಿಕೊಂಡು ಬಂದಿದೆ. ಇತ್ತೀಚೆಗೆ ಅಗಲಿದ ಕಾಲೇಜಿನ ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕ ಮೇಜರ್ ವೆಂಕಟ್ರಾಮಯ್ಯರವರು ಕ್ರೀಡಾಪಟುಗಳ ಆಶಾಕಿರಣವಾಗಿ ಮೂಡಿ ಬಂದಿದ್ದಾರೆ ಎನ್ನುವುದು ಸತ್ಯ. ಕಾಲೇಜಿನ ಮುಂಭಾಗದಲ್ಲಿ ಶೋಭಿಸುತ್ತಿರುವ 400ಮೀ.ಟ್ರ್ಯಾಕ್ ಕ್ರೀಡಾಂಗಣ ನಿರ್ಮಾಣದ ಹಿಂದೆ ಮೇಜರ್ ವೆಂಕಟ್ರಾಮಯ್ಯರವರ ಶಕ್ತಿ ಅಡಗಿದೆ. ಫಿಲೋಮಿನಾ ಕ್ರೀಡಾಂಗಣದಲ್ಲಿ ಪ್ರಜ್ವಲಿಸಿದ ಕ್ರೀಡಾಪಟುಗಳಾದ ಕಾಮನ್‌ವೆಲ್ತ್ ಕ್ರೀಡಾಪಟು ಪುಷ್ಪರಾಜ್ ಹೆಗ್ಡೆ, ಎಂ.ಎಂ ಗಣಪತಿ, ಸಂಜೀವ ಪುತ್ತೂರು, ಗಣಪತಿ ನಾಯಕ್, ಏಕಲವ್ಯ ಪ್ರಶಸ್ತಿ ವಿಜೇತರಾದ ಶ್ರೀಧರ ಗೌಡ, ಇತ್ತೀಚೆಗೆ ನಿಧನರಾದ ದಿ.ಉದಯ ಚೌಟ, ಪ್ರೊ ಕಬಡ್ಡಿಯ ಪ್ರಶಾಂತ್ ರೈ ಮತ್ತು ಅಂತರ್ರಾಷ್ಟ್ರೀಯ ಕಬಡ್ಡಿಪಟು ರೋಸ್ ಮೇರಿ ಪ್ರೆಸಿಲ್ಲ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪ್ರಸ್ತುತ ವರ್ಷ ರಾಷ್ಟ್ರಮಟ್ಟದಲ್ಲಿ ಪ್ರಜ್ವಲಿಸಿದ ಸಿಂಚನಾ ಗೌಡ(ಸರ್ಫಿಂಗ್), ನಾಚಪ್ಪ ಕೆ.ಡಿ(ಫುಟ್‌ಬಾಲ್, ಹಾಕಿ), ಫುಟ್‌ಬಾಲ್‌ನಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿರುವ ತನ್ವೀರ್ ಪಿ.ಎ, ಸೊಲೋಮನ್ ರೋಶನ್ ಜೋಸೆಫ್, ಧೀರಜ್ ಶ್ರೀನಿವಾಸ್, ಪ್ರೀತಂ ಶ್ರೀಕಾಂತ್ ಮುರ್ಗೋಡ್, ಮೊಹಮದ್ ಜುನೈದ್, ಪವನ್ ಟಿ.ಆರ್, ಬ್ಯಾಡ್ಮಿಂಟನ್‌ನಲ್ಲಿ ನೌಶದ್ ಅಬ್ದುಲ್ಲ, ಕ್ರಿಕೆಟ್‌ನಲ್ಲಿ ಸೂರಜ್‌ರವರು ಕಾಲೇಜಿಗೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ. 400ಮೀ.ಟ್ರ್ಯಾಕ್ ಅಲ್ಲದೆ ಪ್ರತ್ಯೇಕ ಹಾಕಿ ಹಾಗೂ ಫುಟ್‌ಬಾಲ್ ಮೈದಾನ, ಮಲ್ಟಿ ಜಿಮ್, ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾ ಸೌಲಭ್ಯಗಳು ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಗೆ ಸಂಸ್ಥೆಯು ಒತ್ತು ನೀಡುತ್ತಿದೆ. ಪ್ರಸ್ತುತ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಎಲ್ಯಾಸ್ ಪಿಂಟೋರವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಉನ್ನತ ಸ್ತರದಲ್ಲಿ ಮಿಂಚುತ್ತಿರುವ ಹಿರಿಯ ವಿದ್ಯಾರ್ಥಿಗಳು:

ಸಂಸ್ಥೆಯಿಂದ ವಿದ್ಯಾರ್ಜನೆಗೈಯ್ದಂತಹ ಅನೇಕ ಹಿರಿಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಛಾಪನ್ನು ಮೂಡಿಸುವ ಮೂಲಕ ಇಂದು ಸಮಾಜದ ಉನ್ನತ ಸ್ತರದಲ್ಲಿ ಮಿಂಚುತ್ತಿರುವುದೇ ಸಂಸ್ಥೆಯ ವೈಶಿಷ್ಟ್ಯತೆ. ರಾಜಕೀಯ ಕ್ಷೇತ್ರದಲ್ಲಿ ಮಾಜಿ ಕೇಂದ್ರ ಸಚಿವರೂ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಡಿ.ವಿ ಸದಾನಂದ ಗೌಡ, ಪ್ರಸ್ತುತ ಕೇಂದ್ರ ಸಚಿವೆ ಆಗಿರುವ ಶೋಭಾ ಕರಂದ್ಲಾಜೆ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಜೆ.ಆರ್ ಲೋಬೋ, ದೆಹಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಜಸ್ಟೀಸ್ ಬೋಪಣ್ಣ, ಬೆಂಗಳೂರು ಹೈಕೋರ್ಟ್ ಜಡ್ಜ್ ಮುಹಮ್ಮದ್ ನವಾಝ್, ಮಾಜಿ ಕುಲಪತಿ ಪ್ರೊ|ಬಿ.ಎ ವಿವೇಕ್ ರೈ ಸಹಿತ ಹಲವು ಮಂದಿ ವಿಜ್ಞಾನಿಗಳು ಅಲ್ಲದೆ ಕೃಷಿ ಕ್ಷೇತ್ರದಲ್ಲೂ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಸಾಧನೆ ಮಾಡುವ ಮೂಲಕ ಗುರುತಿಸಿಕೊಂಡಿರುತ್ತಾರೆ.

ಕ್ಯಾಂಪಸ್ ವಿಶೇಷತೆಗಳು:

ಅನುಭವಿ ಪ್ರಾಧ್ಯಾಪಕ ವೃಂದ ಹಾಗೂ ಪೂರ್ಣ ಪ್ರಮಾಣದ ಕಾಲೇಜು ಕಛೇರಿ, ಯುಜಿಸಿ ನೆಟ್‌ವರ್ಕ್ ಸಂಪನ್ಮೂಲ ಕೇಂದ್ರ, ಅತ್ತ್ಯುತ್ತಮ ಬೋಧನೆ-ಕಲಿಕಾ ಸಂಪನ್ಮೂಲಗಳು, ಜ್ಞಾನ ಹೆಚ್ಚಿಸುವ ಪುಸ್ತಕ ಭಂಡಾರಗಳ ಸುಸಜ್ಜಿತ ಗ್ರಂಥಾಲಯದೊಂದಿಗೆ ಇಂಟರ್ನೆಟ್ ಸೌಲಭ್ಯ, ಸುಸಜ್ಜಿತ ಆಧುನಿಕತೆಯ ವಿಜ್ಞಾನ ಲ್ಯಾಬೋರೇಟರಿ, ಕಂಪ್ಯೂಟರ್ ಸೆಂಟರ್, ಡಿಜಿಟಲ್ ಹಾಗೂ ಸ್ಮಾರ್ಟ್ ಕ್ಲಾಸ್ ರೂಮ್ಸ್, ಉಪಗ್ರಹ ಆಧಾರಿತ ಶಿಕ್ಷಣ ಕೇಂದ್ರ, ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಸತಿನಿಲಯ, ಚಾರ್ಟರ್ಡ್ ಎಕೌಂಟೆಂಟ್ ತರಬೇತಿ, ಕೌಶಲ್ಯ ಅಭಿವೃದ್ಧಿ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾ ಸೌಲಭ್ಯಗಳು ಹಾಗೂ ಮಲ್ಟಿ ಜಿಮ್ ವ್ಯವಸ್ಥೆ, ಕೋರ್ಪೊರೇಶನ್ ಬ್ಯಾಂಕ್ ಹಾಗೂ ಎಟಿಎಮ್ ವ್ಯವಸ್ಥೆ, ನಂದಿನಿ ಮಿಲ್ಕ್ ಪಾರ್ಲರ್ ಹಾಗೂ ಕ್ಯಾಂಟೀನ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸೆಂಟರ್, ದಿವ್ಯಚೇತನಾ ಚಾಪೆಲ್ ಪ್ರಾರ್ಥನಾ ಮಂದಿರ, ಸುಸಜ್ಜಿತ ಆಡಿಟೋರಿಯಂ, ಕಾನ್ಫರೆನ್ಸ್ ಸಭಾಂಗಣ, ಸಹ-ಪಠ್ಯೇತರ ಚಟುವಟಿಕೆಗಳು, ಎನ್‌ಸಿಸಿ, ಎನ್‌ಎಸ್‌ಎಸ್, ರೋವರ‍್ಸ್ ಮತ್ತು ರೇಂಜರ‍್ಸ್ ಘಟಕಗಳು, ರೆಡ್‌ಕ್ರಾಸ್ ಇಂಡಿಯಾ ಘಟಕ, ಲಲಿತಕಲೆ ಮತ್ತು ಪ್ರದರ್ಶನ ಕಲೆ, ವಿಷಯ ಸಂಘ ಮತ್ತು ಕ್ಲಬ್‌ಗಳು, ಗಮನಾರ್ಹ ವಿದ್ಯಾರ್ಥಿ ಬೆಂಬಲ ವ್ಯವಸ್ಥೆ, ಪರಿಹಾರ ಮತ್ತು ಪುಷ್ಟೀಕರಿಸಿದ ತರಬೇತಿ, ವೃತ್ತಿ ಮಾರ್ಗದರ್ಶನ ಹಾಗೂ ನಿಯೋಜನೆ ಸೇವೆಗಳು, ಕೌನ್ಸಿಲಿಂಗ್ ಸೇವೆ, ಸ್ಕಾಲರ್‌ಶಿಪ್ ಹಾಗೂ ಫ್ರೀಶಿಪ್ಸ್, ಮಧ್ಯಾಹ್ನದ ಊಟದ ಸ್ಕೀಮ್ ಅಲ್ಲದೆ ಇನ್ನೂ ಹಲವಾರು ಸೌಲಭ್ಯಗಳು ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ತೆರೆದುಕೊಂಡಿದೆ.

ಸ್ನಾತಕೋತ್ತರ ಕೋರ್ಸ್‌ಗಳಿಗೂ ಅವಕಾಶ:

ತಾಲೂಕಿನ ಹಿರಿಯ ಸಂಸ್ಥೆಯೆನಿಸಿದ ಈ ಶಿಕ್ಷಣ ಕೇಂದ್ರ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾರ್ಥಿ ನಿಲಯದ ಸೌಲಭ್ಯವನ್ನು ಒದಗಿಸುವುದರೊಂದಿಗೆ ಸೌಹಾರ್ದಯುತವಾದ ವಾತಾವರಣವನ್ನು ನಿರ್ಮಾಣ ಮಾಡಿದೆ. ಸುಮಾರು 61 ಮಂದಿ ಅನುಭವಿ ಪ್ರಾಧ್ಯಾಪಕರು ಹಾಗೂ ಉಪನ್ಯಾಸಕರು, 22 ಮಂದಿ ಬೋಧಕೇತರ ಸಿಬ್ಬಂದಿಗಳು, ಪ್ರಸ್ತುತ ವರ್ಷ ಸುಮಾರು 1500ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಈ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಜನೆಗೈಯುತ್ತಿದ್ದಾರೆ ಮತ್ತು ಪದವಿ ವಿದ್ಯಾರ್ಥಿಗಳ ಮುಂದಿನ ಸ್ನಾತಕೋತ್ತರ ಅಧ್ಯಯನಕ್ಕೆ ಪೂರಕವಾಗಲೆಂದು ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು ಕೂಡ ಸಂಸ್ಥೆಯು ಪರಿಚಯಿಸುವ ಮೂಲಕ ವಿದ್ಯಾರ್ಜನೆಗೆ ಅನುವು ಮಾಡಿಕೊಟ್ಟಿದೆ.

ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಶ್ರಮ ವಹಿಸುವ ಈ ಸಂಸ್ಥೆಯಲ್ಲಿ ವಂ|ಸೆರಾವೋ, ವಂ|ಹೆನ್ರಿ ಕ್ಯಾಸ್ಟಲಿನೋ, ವಂ|ಜೆ.ಬಿ ಡಿ’ಸೋಜ, ವಂ|ಲಾರೆನ್ಸ್ ಮೆಂಡೋನ್ಸಾ, ವಂ|ಫ್ರೆಡ್ರಿಕ್ ಮಸ್ಕರೇನ್ಹಸ್, ಡಾ|ಜೋನ್ ಕ್ಲಾರೆನ್ಸ್ ಮಿರಾಂದ, ವಂ|ಎಫ್.ಎಕ್ಸ್ ಗೋಮ್ಸ್, ಪ್ರೊ|ಲಿಯೋ ನೊರೋನ್ಹಾರವರು ಪ್ರಾಂಶುಪಾಲರಾಗಿ ಸಂಸ್ಥೆಯನ್ನು ಸಮರ್ಥವಾಗಿ ಮುನ್ನೆಡೆಸಿದ್ದು, ಪ್ರಸ್ತುತ ಸಂಚಾಲಕರಾಗಿ ವಂ|ಲಾರೆನ್ಸ್ ಮಸ್ಕರೇನ್ಹಸ್ ಹಾಗೂ ಪ್ರಾಂಶುಪಾಲರಾಗಿ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋ, ಕ್ಯಾಂಪಸ್ ನಿರ್ದೇಶಕರಾಗಿ ವಂ|ಸ್ಟ್ಯಾನಿ ಪಿಂಟೋರವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜು ಕಛೇರಿ ವೆಬ್‌ಸೈಟ್: WWW.spcputtur.org ಅಥವಾ ಕಾಲೇಜು ಪ್ರಾಂಶುಪಾಲರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ದಾಖಲಾತಿ ಆರಂಭಗೊಂಡಿದೆ…
-ಬಿ.ಎ: ಇತಿಹಾಸ/ಅರ್ಥಶಾಸ್ತ್ರ/ಸಮಾಜಶಾಸ್ತ್ರ(HES)
ಇತಿಹಾಸ/ಅರ್ಥಶಾಸ್ತ್ರ/ರಾಜಕೀಯ ವಿಜ್ಞಾನ(HEP)
-ಬಿ.ಎಸ್ಸಿ: ಫಿಸಿಕ್ಸ್/ಕೆಮಿಸ್ಟ್ರಿ/ಮ್ಯಾಥ್ಸ್(PCM)
ಫಿಸಿಕ್ಸ್/ಮ್ಯಾಥ್ಸ್/ಕಂಪ್ಯೂಟರ್ ಸೈನ್ಸ್(PMCs)
ಸಸ್ಯಶಾಸ್ತ್ರ/ಪ್ರಾಣಿಶಾಸ್ತ್ರ/ಕೆಮಿಸ್ಟ್ರಿ(BZC)
-ಬಿ.ಕಾಂ/ಬಿಸಿಎ/ಬಿಎಸ್‌ಡಬ್ಲ್ಯೂ:
ಮಂಗಳೂರು ವಿ.ವಿ ನಿಗದಿಪಡಿಸಿದ ಕಡ್ಡಾಯ ವಿಷಯಗಳು
-ಬಿಬಿಎ: ಫಿನಾನ್ಸಿಯಲ್ ಮ್ಯಾನೇಜ್‌ಮೆಂಟ್/ಮಾನವ ಸಂಪನ್ಮೂಲ/
ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್/ಡೇಟಾ ಅನಾಲಿಟಿಕ್ಸ್
ವಿಷಯಗಳ ವಿಶೇಷ ಅಧ್ಯಯನ

-ಜುಲೈ 15 ದಾಖಲಾತಿಗೆ ಕೊನೆಯ ದಿನಾಂಕ
-ಹೆಚ್ಚಿನ ಮಾಹಿತಿಗಾಗಿ ಕಾಲೇಜು ಕಛೇರಿ ವೆಬ್‌ಸೈಟ್: WWW.spcputtur.ac.in

LEAVE A REPLY

Please enter your comment!
Please enter your name here