ವೈದ್ಯರ, ಪತ್ರಕರ್ತರ ದಿನ-ಇವೆರಡಕ್ಕೂ ಸಮಾನರಾದ ಡಾ. ಯು.ಪಿ.ಶಿವಾನಂದ ಅವರಿಗೆ ರೋಟರ್‍ಯಾಕ್ಟ್ ಕ್ಲಬ್‌ನಿಂದ ಸನ್ಮಾನ

0

  • ಆರೋಗ್ಯ ನೀಡುವಲ್ಲಿ, ಸಮಾಜ ತಿದ್ದುವಲ್ಲಿ ಮಹತ್ವ ಪಾತ್ರ – ಶ್ರೀಧರ್ ಕೆ

 

ಪುತ್ತೂರು: ವೈದ್ಯರಾಗಿ ಮತ್ತು ಪತ್ರಕರ್ತರಾಗಿ ಎರಡೂ ಕ್ಷೇತ್ರದಲ್ಲೂ ಸಮಾನರಾಗಿರುವ ಪುತ್ತೂರು ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಗಳ ಆಡಳಿತ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಪಿ.ಶಿವಾನಂದ ಅವರನ್ನು ಪುತ್ತೂರು ರೋಟರ್‍ಯಾಕ್ಟ್ ಕ್ಲಬ್‌ವತಿಯಿಂದ ಸನ್ಮಾನಿಸುವ ಮೂಲಕ ವೈದ್ಯರ ಮತ್ತು ಪತ್ರಕರ್ತರ ದಿನವನ್ನು ಆಚರಣೆ ಮಾಡಲಾಯಿತು.


2022-23ನೇ ಸಾಲಿನ ರೋಟರ್‍ಯಾಕ್ಟ್ ಸಭಾಪತಿ ಶ್ರೀಧರ್ ಕೆ, ಅಧ್ಯಕ್ಷ ಗಣೇಶ್ ಎನ್. ಕಲ್ಲರ್ಪೆ, ಕಾರ್ಯದರ್ಶಿ ಮಹೇಶ್ಚಂದ್ರ, ಸಮುದಾಯ ಸೇವಾ ನಿರ್ದೇಶಕ ಶಶಿಧರ್ ಕೆ. ಮಾವಿನಕಟ್ಟೆ, ಸುದ್ದಿ ಪತ್ರಿಕೆ ಹಾಗೂ ಚಾನೆಲ್ ಮುಖ್ಯ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ, ವರದಿಗಾರ ಲೊಕೇಶ್ ಬನ್ನೂರು, ಕುಶಾಲಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆರೋಗ್ಯ ನೀಡುವಲ್ಲಿ, ಸಮಾಜ ತಿದ್ದುವಲ್ಲಿ ಮಹತ್ವ ಪಾತ್ರ:
ರೋಟರ್‍ಯಾಕ್ಟ್ ಸಭಾಪತಿ ಶ್ರೀಧರ್ ಕೆ ಅವರು ಮಾತನಾಡಿ ರೋಟರ್‍ಯಾಕ್ಟ್ ಕ್ಲಬ್‌ನಿಂದ ಈ ಭಾರಿ ವೈದ್ಯರ ದಿನ ಮತ್ತು ಪತ್ರಕರ್ತರ ದಿನದ ಅಂಗವಾಗಿ ಡಾ.ಯು.ಪಿ.ಶಿವಾನಂದ ಅವರನ್ನು ಸನ್ಮಾನಿಸುವ ಕುರಿತು ಆಯ್ಕೆ ಮಾಡಲಾಗಿದೆ. ಯಾಕೆಂದರೆ ಡಾ. ಯು.ಪಿ.ಶಿವಾನಂದ ಅವರು ಚುಚ್ಚು ಮದ್ದಿನ ಮೂಲಕ ಆರೋಗ್ಯ ನೀಡುವ ವೈದ್ಯರಾಗಿ ಮತ್ತು ಹರಿತವಾದ ಲೇಖನಿ ಮೂಲಕ ಸಮಾಜ ತಿದ್ದುವ ಕೆಲಸವನ್ನು ಪತ್ರಕರ್ತರಾಗಿ ಮಾಡಿರುವುದು ವಿಶೇಷ. ಎರಡೂ ಕ್ಷೇತ್ರದಲ್ಲೂ ಯಶಸ್ವಿಯಾಗಿರುವ ಅವರನ್ನು ಗುರುತಿಸುವುದು, ಸನ್ಮಾನಿಸುವುದು ಅಗತ್ಯ ಎಂದರು.

LEAVE A REPLY

Please enter your comment!
Please enter your name here