ಅಗ್ನಿಪತ್ ಅಗ್ನಿವೀರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ವಿದ್ಯಾಮಾತಾ ಅಕಾಡೆಮಿಯಿಂದ ತರಬೇತಿ ಪ್ರವೇಶಾತಿ ಪ್ರಾರಂಭ, ಜು.9ರಿಂದ ದೈಹಿಕ ಕ್ಷಮತೆ, ಲಿಖಿತ ಪರೀಕ್ಷೆ ಆರಂಭ

0

ಪುತ್ತೂರು : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಅಗ್ನಿಪತ್ ಯೋಜನೆಯಡಿ 8ನೇ ತರಗತಿಯಿಂದ ಪಿಯುಸಿ ಓದಿರುವ ಯುವ ಸಮುದಾಯಕ್ಕೆ ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಲು ಅರ್ಜಿಸಲ್ಲಿಸುವವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ‘ವಿದ್ಯಾಮಾತಾ ಅಕಾಡೆಮಿ’ಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು ಇವರ ಸಹಯೋಗದೊಂದಿಗೆ ಜು.9 ಭಾನುವಾರದಿಂದ ದೈಹಿಕ ಕ್ಷಮತೆ (physical fitness) ಮತ್ತು ಲಿಖಿತ ಪರೀಕ್ಷೆಗಳಿಗೆ (written test) ತರಬೇತಿ ಪ್ರಾರಂಭವಾಗಲಿದ್ದು ಪ್ರವೇಶಾತಿ ಜು.1 ರಿಂದ ಪ್ರಾರಂಭವಾಗಲಿದೆ.

ದೈಹಿಕ ಕ್ಷಮತೆಯ ತರಬೇತಿಯು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 7.30 ರಿಂದ 9 ರವರೆಗೆ (1.30 ಗಂಟೆ) ನಡೆಯುತ್ತದೆ. ಲಿಖಿತ ಪರೀಕ್ಷಾ ತರಬೇತಿಯ ನೇರ ತರಗತಿಗಳು (oಜಿಜಿಟiಟಿe) ದಿನನಿತ್ಯ ಬೆಳಿಗ್ಗೆ 9.30 ಯಿಂದ ಮಧ್ಯಾಹ್ನ 1ರ ವರೆಗೆ ಲಭ್ಯವಿರುತ್ತದೆ. ಪ್ರಸ್ತುತ ಓದುತ್ತಿರುವ ವಿದ್ಯಾರ್ಥಿಗಳಿಗೆ/ ಉದ್ಯೋಗದಲ್ಲಿರುವವರಿಗೆ ವಾರದ 4 ದಿನ ರಾತ್ರಿ 7 ರಿಂದ 8 ಅಂದರೆ 1 ಗಂಟೆಗಳ ಆನ್ಲೆöÊನ್ ತರಗತಿ ಮತ್ತು ವಾರಾಂತ್ಯದ ತರಗತಿಗಳು ಲಭ್ಯವಿರುತ್ತದೆ.

ವಿದ್ಯಾಮಾತಾ ಅಕಾಡೆಮಿಗೆ ತರಬೇತುದಾರರ ಗೌರವಧನವಷ್ಟೇ ಪಾವತಿಸಿ ಈ ತರಗತಿಯ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ. ಪ್ರವೇಶಾತಿ ಪಡೆದುಕೊಳ್ಳಬಯಸುವವರು ವಿದ್ಯಾಮಾತಾ ಅಕಾಡೆಮಿ, ಹಿಂದುಸ್ತಾನ್ ಕಾಂಪ್ಲೆಕ್ಸ್, ಎಪಿಎಂಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು. ದ.ಕ. ಇಲ್ಲಿಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ – 9620468869 / 8590773486/ 9148935808. ನಂಬರ್‌ಗೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here