ಪುತ್ತೂರಿನಲ್ಲಿ ಆರ್ವಿ ಗ್ರಾಫಿಕ್‌ ಡಿಸೈನಿಂಗ್‌ ಕಾರ್ಯಾಗಾರ

0

 

ಪುತ್ತೂರು : ಗ್ರಾಫಿಕ್‌ ಡಿಸೈನಿಂಗ್‌ ಕ್ಷೇತ್ರದಲ್ಲಿ ಹೊಸತನದ ಅಲೆಯೆಬ್ಬಿಸಿದ ಪುತ್ತೂರಿನ ಆರ್ವಿ ಇಂಟರ್‌ಗ್ರಾಫಿಕ್ಸ್‌ ಇದರ ಆಶ್ರಯದಲ್ಲಿ ಅನುಭವೀ ಗ್ರಾಫಿಕ್‌ ಡಿಸೈನರ್‌ಗಳಿಂದ ಒಂದು ದಿನದ ಗ್ರಾಫಿಕ್‌ ಡಿಸೈನ್‌ ಕಾರ್ಯಾಗಾರವು ಜೂ. 26ರಂದು  ಬ್ಲಡ್‌ಬ್ಯಾಂಕ್‌ ಬಳಿಯ ರೋಟರಿ ಟ್ರಸ್ಟ್‌ ಹಾಲ್‌ನಲ್ಲಿ ನಡೆಯಿತು. ಈ ಕಾರ್ಯಾಗಾರವನ್ನು ಧನ್ವಂತರಿ ಕ್ಲಿನಿಕಲ್‌ ಲ್ಯಾಬೋರೇಟರಿಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಚೇತನ್‌ ಪ್ರಕಾಶ್‌ ಕಜೆ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು ಗ್ರಾಫಿಕ್‌ ಡಿಸೈನಿಂಗ್‌ನ ಮಹತ್ವ ಹಾಗೂ ಅದರ ಬೇಡಿಕೆ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಆರ್ವಿ ಇಂಟರ್‌ಗ್ರಾಫಿಕ್ಸ್‌ನ ಮ್ಯಾನೇಜಿಂಗ್‌ ಪಾರ್ಟನರ್‌ ಗಿರೀಶ್‌ರಾಜ್‌ ಎಂ.ವಿ ಹಾಗೂ ಕ್ರಿಯೇಟಿವ್‌ ಹೆಡ್‌ ಜ್ಞಾನೇಶ್‌ ವಿಶ್ವಕರ್ಮ ಉಪಸ್ಥಿತರಿದ್ದರು. ವಿನೋದ್‌ ಕುಮಾರ್‌ ಕಲ್ಲೇಗ ಕಾರ್ಯಕ್ರಮ ನಿರೂಪಿಸಿದರು.


ನಂತರ ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ಮಧುಸೂಧನ್‌ ರವರು ಬೇಸಿಕ್‌ ಫೋಟೋಶಾಪ್‌ ಮತ್ತು ಕೋರಲ್‌ ಡ್ರಾದ ಟೂಲ್ಸ್‌ ಉಪಯೋಗದ ಕುರಿತು ಸವಿವರವಾಗಿ ಮಾಹಿತಿಯನ್ನು ಉದಾಹರಣೆಗಳ ಮುಖೇನ ವಿವರಿಸಿದರು. ಮಧ್ಯಾಹ್ನದ ನಂತರದ ಕಾರ್ಯಾಗಾರದಲ್ಲಿ ಜ್ಞಾನೇಶ್‌ ವಿಶ್ವಕರ್ಮರವರು ಡಿಸೈನ್‌ ಹೇಗೆ ಮಾಡುವುದು, ಅದರ ವಿವರಣೆ ಹಾಗೂ ಪ್ರಿಂಟಿಂಗ್‌ಗೆ ಪೂರಕವಾದ ಮಾಹಿತಿಗಳನ್ನು ಸ್ಯಾಂಪಲ್‌ ಸಹಿತ ವಿವರಿಸಿದರು.

ಈ ಕಾರ್ಯಗಾರದಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿ ಹಾಗೂ ಕಾಸರಗೋಡಿನಿಂದ ಆಗಮಿಸಿದ ಸುಮಾರು 43 ಮಂದಿ ಭಾಗವಹಿಸಿದ್ದರು. ಆರ್ವಿಯ ಸಂಸ್ಥೆಯ ಸಿಬ್ಬಂದಿಗಳಾದ ರಾಜೇಶ್‌, ಕೀರ್ತಿರಾಜ್‌ ನಾಯಕ್‌, ಶ್ವೇತಾ, ಕುಮುದಾ, ಧನ್ಯ, ಸ್ವಾತಿ, ಚೈತ್ರಾ, ಸುಮಂತ್‌, ರಾಮ್‌ಗಣೇಶ್‌ ಸಹಕರಿಸಿದರು.

LEAVE A REPLY

Please enter your comment!
Please enter your name here