ವೈದ್ಯರ ದಿನ ವಿಶೇಷ- ಇನ್ನರ್ ವೀಲ್ ಕ್ಲಬ್‌ನಿಂದ ಸ್ರ್ತೀ ರೋಗ ತಜ್ಞೆ ಡಾ.ಪ್ರತಿಭಾ ಎಸ್ ಭಟ್ ಅವರಿಗೆ ಸನ್ಮಾನ

0

ಪುತ್ತೂರು: ವೈದ್ಯರ ದಿನದ ಅಂಗವಾಗಿ ಪುತ್ತೂರು ಇನ್ನರ್ ವೀಲ್ ಕ್ಲಬ್ ವತಿಯಿಂದ ಜು.1 ರಂದು ಹಿರಿಯ ಸ್ರ್ತೀರೋಗ ತಜ್ಞೆ ಡಾ.ಪ್ರತಿಭಾ ಎಸ್ ಭಟ್ ಅವರನ್ನು ಸನ್ಮಾನಿಸಲಾಯಿತು.


ವೈದ್ಯರ ದಿನಾಚರಣೆ ಅಂಗವಾಗಿ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅವರನ್ನು ಕ್ಲಬ್ ವತಿಯಿಂದ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಭಾಸ್ಕರ್ ಎಸ್, ಸ್ತ್ರೀರೋಗ ತಜ್ಞೆ ಡಾ.ಶೃತಿ ಅಲೆವೂರು ಅವರನ್ನು ಗೌರವಿಸಲಾಯಿತು. ಇನ್ನರ್ ವೀಲ್ ಕ್ಲಬ್ ನ ನಿಯೋಜಿತ ಟೈನಿ ದೀಪಕ್, ಕಾರ್ಯದರ್ಶಿ ಮನೋರಮ ಹೆಜಮಾಡಿ, ನಿರ್ಗಮನ ಅಧ್ಯಕ್ಷೆ ವೀಣಾ ಬಿ ಕೆ, ನಿಯೋಜಿತ ಎಡಿಟರ್ ಮಂಜುಳಾ ಭಾಸ್ಕರ್, ಐಎಸ್‌ಒ ರೂಪಲೇಖ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here