ಉಪ್ಪಿನಂಗಡಿ ಸಹಕಾರಿ ಸಂಘದ ಅಮೃತ ಮಹೋತ್ಸವ-ಯೋಗ ತರಬೇತಿ ಕಾರ್ಯಗಾರ

0

ಆರೋಗ್ಯ ಕಾಪಾಡುವಲ್ಲಿ ಯೋಗ ಅಭ್ಯಾಸದ ಪಾತ್ರ ಹಿರಿದು-ಡಾ. ಕೆ.ಜಿ. ಭಟ್

ಉಪ್ಪಿನಂಗಡಿ: ಆರೋಗ್ಯ ಕಾಪಾಡುವಲ್ಲಿ ಯೋಗ ಅಭ್ಯಾಸದ ಪಾತ್ರ ಹಿರಿದಾಗಿದ್ದು, ಮನುಷ್ಯ ತನ್ನ ದಿನ ನಿತ್ಯದ ಬದುಕಿನಲ್ಲಿ ಯೋಗ ಅಭ್ಯಾಸ ಮಾಡಿದರೆ ಆರೋಗ್ಯವನ್ನು ಕಾಪಾಡಲು ಸಾಧ್ಯ ಎಂದು ಉಪ್ಪಿನಂಗಡಿಯ ಹಿರಿಯ ವೈದ್ಯ ಡಾ. ಕೆ.ಜಿ. ಭಟ್ ಹೇಳಿದರು.

ಅವರು ಜೂ. 30ರಂದು ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಮೃತ ಮಹೋತ್ಸವ 2022ರ ಅಂಗವಾಗಿ ಆಯೋಜಿಸಿದ ಯೋಗ ತರಬೇತಿ ಕಾರ್ಯಗಾರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪ್ರಾಣಾಯಾಮ ಹಾಗೂ ಯೋಗವು ದೃಢ ಉಲ್ಲಾಸದಿಂದ ಆಯುಷ್ಯವೃದ್ಧಿಗೆ ಔಷಧ ಇಲ್ಲದ ಚಿಕಿತ್ಸೆಯಾಗಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂದರು.

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಮಾತನಾಡಿ ಆಧುನಿಕ ಯುಗದಲ್ಲಿ ಯುವಕರು ಯೋಗಕ್ಕೆ ಪರ‍್ಯಾಯವಾಗಿ ಜಿಮ್, ಮುಂಜಾನೆ ನಡಿಗೆ ಮೂಲಕ ಆರೋಗ್ಯ ಕಾಪಾಡುತ್ತಾರೆ. ಈ ರೀತಿಯೂ ಆರೋಗ್ಯ ಕಾಪಾಡಬಹುದಾಗಿದೆ ಎಂದರು.

ಸಂಘದ ಮಾಜಿ ಉಪಾಧ್ಯಕ್ಷೆ ಸುಭಧ್ರಾ ಭಟ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ನಾಟಿ ವೈದ್ಯರಾದ ಕೆ.ಪಿ. ವಿಷ್ಣು ಭಟ್ ಹಾಗೂ ಪ್ರಸೂತಿ ಪರಿಣಿತೆ ಬಾರಿಕೆ ನಾಗಮ್ಮ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮಾಜಿ ನಿರ್ದೇಶಕರಾದ ವಾಸುದೇವ ನೆಡ್ಚಿಲ್, ಯೋಗ ತರಬೇತುದಾರ ಪ್ರಸಾದ ಪಾಣಾಜೆ, ನ್ಯಾಯವಾದಿ ಶ್ರೀಗಿರೀಶ ಮಳಿ, ಸಂಘದ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಕ್ಲೇರಿ ವೇಗಸ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಉಪ್ಪಿನಂಗಡಿ ಸಹಕಾರಿ ಸಂಘದ ನಿರ್ದೇಶಕರಾದ ಜಗದೀಶ ರಾವ್, ಯತೀಶ್ ಶೆಟ್ಟಿ, ಕುಂಞ ಎಸ್, ಸಚಿನ್ ಎಂ, ರಾಮ ನಾಯ್ಕ, ಮಾಜಿ ಅಧ್ಯಕ್ಷ ಪೆಲಪ್ಪಾರು ವೆಂಕಟರಮಣ ಭಟ್, ಮಾಜಿ ನಿರ್ದೇಶಕ ರಾಮಚಂದ್ರ ಮಣಿಯಾಣಿ, ನಿವೃತ್ತ ಮುಖ್ಯ ಕಾರ‍್ಯನಿರ್ವಹಣಾಽಕಾರಿ ಗೋಪಾಲ ಹೆಗ್ಡೆ, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಂತ ಪೊರೋಳಿ, ಡಾ. ಸುಪ್ರೀತ್ ಲೋಬೋ ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ಸ್ವಾಗತಿಸಿ, ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು ವಂದಿಸಿದರು. ಪುಷ್ಪರಾಜ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here