ಪುತ್ತೂರು ರೋಟರಿ ಕ್ಲಬ್ ನೂತನ ಅಧ್ಯಕ್ಷರ ಪದಸ್ವೀಕಾರ

0

  • ಜಗತ್ತಿನ ಅತ್ಯಂತ ಸುಂದರ ಸಂಘಟನೆ ರೋಟರಿ: ಆನಂದ ಮಡಿವಾಳ

 

 

ಪುತ್ತೂರು: ರೋಟರಿ ಕ್ಲಬ್‌ನಂತಹ ಸಂಸ್ಥೆಗಳು ಸಮಾಜಮುಖಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಅತ್ಯಂತ ಸ್ಪಷ್ಟ ಉದ್ದೇಶದ ಹಾಗೂ ಜಗತ್ತಿನ ಅತ್ಯಂತ ಸುಂದರವಾದ ಸಂಘಟನೆ ಎಂದು ಉಡುಪಿಯ ವಕೀಲರಾದ ಆನಂದ ಮಡಿವಾಳ ಬಣ್ಣಿಸಿದರು.

ಪುತ್ತೂರು ರೋಟರಿ ಕ್ಲಬ್‌ನ 2022-23ನೇ ಸಾಲಿನ ಪುತ್ತೂರು ರೋಟರಿ ಕ್ಲಬ್‌ನ ಪದಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧದ ಕಾರ್ಮೋಡ ಕವಿದಿದ್ದ ದಿನಗಳವು. ಯುದ್ಧ ಇನ್ನಷ್ಟೇ ಪ್ರಾರಂಭಗುತ್ತದೆ ಎಂಬ ಸುಳಿವು ಇತ್ತಷ್ಟೇ. ಅಂತಹ ದಿನದಲ್ಲಿ ಉಕ್ರೇನ್‌ನ ಕುಟುಂಬವೊಂದರಲ್ಲಿ ತುಂಬು ಗರ್ಭಿಣಿಯಿದ್ದಳು. ರಾತ್ರಿಯವರೆಗೆ ಎಂದಿನಂತೆ ದಿನಗಳಿತ್ತು. ಆದರೆ ಬೆಳಿಗ್ಗೆದ್ದು ನೋಡುವಾಗ ಏನೋ ವಿಚಿತ್ರವಾದ ಸದ್ದುಗಳು ಕೇಳಿಬರುತ್ತಿತ್ತು. ಇನ್ನೊಂದೆಡೆ ತುಂಬು ಗರ್ಭಿಣಿಗೆ ಹೆರಿಗೆ ನೋವು ಪ್ರಾರಂಭವಾಯಿತು. ಪತಿ ಹೊರಗೋಡಿ ನೋಡಿದರೆ, ರಷ್ಯಾ ಇಡೀಯ ನಗರವನ್ನು ಕೈವಶ ಮಾಡಿಯಾಗಿತ್ತು. ಹೆರಿಗೆ ನೋವಿನಿಂದ ನರಳುತ್ತಿದ್ದ ಗರ್ಭಿಣಿಯನ್ನು ಆಸ್ಪತ್ರೆಗೆ ಕೊಂಡೊಯ್ಯೋಣ ಎಂದರೆ, ಆಸ್ಪತ್ರೆಗಳ ಮೇಲೆಯೇ ಶೆಲ್ ದಾಳಿಯಾಗಿತ್ತು. ಇಂತಹ ತ್ರಿಶಂಕು ಸ್ಥಿತಿಯಲ್ಲಿ ಆ ಕುಟುಂಭಿಕರ ನೆರವಿಗೆ ಧಾವಿಸಿದ್ದು ರೋಟರಿ ಸಂಸ್ಥೆ. ಗರ್ಭಿಣಿ ಹೆಂಗಸಿಗೆ ಹೊಸ ಜೀವ ನೀಡಿದ್ದು ರೋಟರಿ ಸಂಸ್ಥೆ ಎಂದು ರೋಟರಿಯ ಕಾರ್ಯವನ್ನು ಶ್ಲಾಘಿಸಿದರು.

 

1905ರಲ್ಲಿ ಪ್ರಾರಂಭವಾದ ರೋಟರಿ ಕ್ಲಬ್, ಇಂದು ವಿಶ್ವಾದ್ಯಂತ ಅನೇಕ ಕಡೆ ಪಸರಿಸಿದೆ. ಇದರ ಕಾರ್ಯಕ್ಕೆ ಎಲ್ಲೆಡೆಯೂ ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೆ ಕಾರಣ ಇಷ್ಟೇ. ರೋಟರಿ ಪದಾಧಿಕಾರಿಗಳು ತಮ್ಮ ವೈಯಕ್ತಿಕ ಹಿತಕ್ಕಾಗಿಯೋ, ತಮ್ಮ ಕುಟುಂಬಕ್ಕಾಗಿಯೋ ಕೆಲಸ ನಿರ್ವಹಿಸುತ್ತಿಲ್ಲ. ಬದಲಾಗಿ, ಸಮಾಜಕ್ಕೆ ಒಳಿತು ಮಾಡಬೇಕು ಎಂಬ ಸಂಕಲ್ಪದೊಂದಿಗೆ ದೃಢ ಹೆಜ್ಜೆ ಇಡುತ್ತಿದೆ. ಕುವೆಂಪು ನಾಡಗೀತೆಯಲ್ಲಿ ಹೇಳಿದಂತೆ “ಸರ್ವ ಜನಾಂಗದ ಶಾಂತಿಯ ತೋಟ…” ರೋಟರಿಯಲ್ಲಿ ಪ್ರತಿಬಿಂಬಿತವಾಗಿದೆ. ಇಲ್ಲಿ ಸಮಾಜದ ಎಲ್ಲಾ ಜನರು ಒಂದಾಗಿ, ಒಂದೇ ಸಂಕಲ್ಪವನ್ನು ಈಡೇರಿಸಲಿಕ್ಕಾಗಿ ಶ್ರಮಿಸುತ್ತಿದ್ದಾರೆ. ಆದ್ದರಿಂದ ಇಂತಹ ಸಂಸ್ಥೆ ಇಡೀಯ ವಿಶ್ವದಲ್ಲಿ ಇನ್ನೊಂದು ಸಿಗಲಿಕ್ಕಿಲ್ಲ ಎಂದು ವಿಶ್ಲೇಷಿಸಿದ ಅವರು, ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು.

ಸಮರ್ಥ ನಾಯಕರ ಹುಟ್ಟು: ಎ.ಜೆ. ರೈ:

ರೋಟರಿ ವಲಯ 5ರ ಸಹಾಯಕ ಗವರ್ನರ್ ಎ.ಜೆ. ರೈ ಮಾತನಾಡಿ, ಗುರಿಯ ಜೊತೆಗೆ ಶಿಸ್ತುಬದ್ಧ ಆಲೋಚನೆ ಹೊಂದಿದಾಗ ಮಾತ್ರ ಸಮರ್ಥ ನಾಯಕತ್ವದ ಗುಣ ಹೊರಹೊಮ್ಮುತ್ತದೆ. ತಂಡ ಯಶಸ್ವಿಯಾಗಿ ಮುನ್ನಡೆಯುತ್ತದೆ. ಈ ವರ್ಷದ ಕನಸಿನ ಯೋಜನೆಯಾದ ಕಣ್ಣಿನ ಆಸ್ಪತ್ರೆ ಕಾರ್ಯಗಳು ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು.

ಯಶಸ್ವಿ ಕಾರ್ಯಕ್ರಮ: ಪುರಂದರ ರೈ

ವಲಯ ಸೇನಾನಿ ಪುರಂದರ ರೈ ಮಾತನಾಡಿ, 57 ವರ್ಷಗಳಿಂದ ಪುತ್ತೂರಿನಲ್ಲಿ ಮುನ್ನಡೆಯುತ್ತಿರುವ ಪುತ್ತೂರು ರೋಟರಿ ಕ್ಲಬ್ ಇನ್ನಷ್ಟು ಶಿಸ್ತಿನಿಂದ, ಯಶಸ್ವಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತಾಗಲಿ ಎಂದು ಶುಭಹಾರೈಸಿದರು.

ರೋಟರಿಯಿಂದ ಅತ್ಯುತ್ತಮ ಸೇವೆ: ಆರ್.ಕೆ. ಭಟ್

ಪದಪ್ರದಾನ ನೆರವೇರಿಸಿ ಮಾತನಾಡಿದ ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷ ಆರ್.ಕೆ. ಭಟ್, ರೋಟರಿಯಲ್ಲಿ ಅರ್ಥಪೂರ್ಣವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ವೈಯಕ್ತಿಕ ನೆಲೆಯಲ್ಲಿ ಬದಿಗಿಟ್ಟು, ಸಂಸ್ಥೆಯಾಗಿ ಕೆಲಸ ನಿರ್ವಹಿಸುವುದು ರೋಟರಿಯ ಧ್ಯೇಯ. ಇಲ್ಲಿ ನಾಯಕತ್ವ ಗುಣ ಇನ್ನಷ್ಟು ಸುದೃಢವಾಗುತ್ತದೆ. ಸಮಾಜಕ್ಕೆ ಹೊಸ ನಾಯಕರನ್ನು ನೀಡುವ ಜೊತೆಗೆ, ಅತ್ಯುತ್ತಮ ಸೇವೆಗಳನ್ನು ನೀಡುವಲ್ಲಿ ರೋಟರಿ ಯಶಸ್ವಿಯಾಗಿದೆ ಎಂದರು.

ನಿರೀಕ್ಷೆಗೂ ಮೀರಿ ಯಶಸ್ಸು: ಮಧು ನರಿಯೂರು

ನಿರ್ಗಮಿತ ಅಧ್ಯಕ್ಷ ಮಧು ನರಿಯೂರು ಮಾತನಾಡಿ, 20 ಸಾವಿರ ಡಾಲರ್‌ಗಿಂತಲೂ ಹೆಚ್ಚು ಹಣವನ್ನು ಅಂತಾರಾಷ್ಟ್ರೀಯ ಸಂಸ್ಥೆಗೆ ಕಳುಹಿಸಲಾಗಿದೆ. 27ಕ್ಕಿಂತಲೂ ಹೆಚ್ಚು ಪಿಎಚ್‌ಎಫ್‌ಗಳು ಪುತ್ತೂರು ರೋಟರಿಯಲ್ಲಿದ್ದಾರೆ ಎನ್ನುವುದು ಹೆಮ್ಮೆಯ ವಿಷಯ. ಇಲ್ಲಿ ಎಲ್ಲಾ ಕ್ಷೇತ್ರದ ಜನರು ಸೇರಿ, ಕೆಲಸ ನಿರ್ವಹಿಸುತ್ತಿರುವುದರಿಂದ ಪುತ್ತೂರು ರೋಟರಿ ಎಲ್ಲಾ ಕಡೆಯೂ ಯಶಸ್ವಿಯಾಗುತ್ತಿದೆ. ಕಳೆದೊಂದು ವರ್ಷದಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದು, ನಿರೀಕ್ಷೆಗೂ ಮೀರಿ ಯಶಸ್ಸು ಸಿಕ್ಕಿದೆ ಎಂದು ಹೇಳಿದರು.

ಮಧು ನರಿಯೂರು ಅವರ ಪತ್ನಿ ಸಂಧ್ಯಾ ನರಿಯೂರು, ಉಮಾನಾಥ್ ಪಿ.ಬಿ. ಅವರ ಪತ್ನಿ ಜಾಹ್ನವಿ ಉಪಸ್ಥಿತರಿದ್ದರು. ಇದೇ ಸಂದರ್ಭ ನಿರ್ಗಮನ ಅಧ್ಯಕ್ಷ ಮಧು ನರಿಯೂರು ಹಾಗೂ ನಿರ್ಗಮನ ಕಾರ್ಯದರ್ಶಿ ಶ್ರೀಧರ್ ಕಣಜಾಲು ಅವರನ್ನು ಸನ್ಮಾನಿಸಲಾಯಿತು. ಸಂಘಸೇವೆಯಡಿ ಪ್ರಸೂತಿ ತಜ್ಞೆ ಡಾ. ಪ್ರತಿಮಾ ರಾವ್ ಅವರನ್ನು ಸನ್ಮಾನಿಸಲಾಯಿತು. ವೃತ್ತಿಪರ ಸೇವೆಯಡಿ 18 ಮಂದಿ ವೈದ್ಯರಾದ ಡಾ. ಭಾಸ್ಕರ್ ಎಸ್., ಡಾ. ಐ. ಶ್ರೀಕಾಂತ್ ರಾವ್, ಡಾ. ಬಿ. ಶ್ಯಾಮ್, ಡಾ. ಜೆ.ಸಿ. ಅಡಿಗ, ಡಾ. ಶ್ರೀಪತಿ ರಾವ್, ಡಾ. ಸುಧಾ ಎಸ್. ರಾವ್, ಡಾ. ಪಿ. ಗೋಪಿನಾಥ್ ಪೈ, ಡಾ. ಅಶೋಕ್ ಪಡಿವಾಳ್, ಡಾ. ನಜೀರ್ ಅಹ್ಮದ್, ಡಾ. ಭಾಗ್ಯೇಶ್ ಕೆ., ಡಾ. ಜಯದೀಪ್ ಎನ್.ಎ., ಡಾ. ಶ್ರೀಪ್ರಕಾಶ್, ಡಾ. ನಿಖಿಲ್, ಡಾ. ರಾಮಕೃಷ್ಣ, ಡಾ. ಇಸ್ಮಾಯಿಲ್ ಸರ್ಫರಾಜ್, ಡಾ. ಚಂದ್ರಶೇಖರ್ ರಾವ್, ಡಾ. ಶ್ವೇತಾ ಅಕ್ಷಯ್, ಡಾ. ಸೀತಾರಾಮ ಭಟ್ ಅವರನ್ನು ಸನ್ಮಾನಿಸಲಾಯಿತು. ಸಮುದಾಯ ಸೇವೆಯಡಿ ಪೆರಿಯತ್ತೋಡಿಯ ಅನಿತಾ ಕುಟುಂಬಕ್ಕೆ ಮನೆ ಹಸ್ತಾಂತರಿಸಲಾಯಿತು. ಅಂತಾರಾಷ್ಟ್ರೀಯ ಸೇವೆಯಡಿ ಹೆಚ್ಚು ಕೊಡುಗೆ ನೀಡಿದ ವಾಮನ್ ಪೈ ಹಾಗೂ ಡಾ. ಶ್ರೀಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಯುವಜನಸೇವೆಯಡಿ ಎಸ್‌ಎಸ್‌ಎಲ್‌ಸಿ ಸಾಧಕರಾದ ಸಾತ್ವಿ, ವಂದನಾ ಅವರನ್ನು ಸನ್ಮಾನಿಸಿದ್ದು, ಅನುಶ್ರೀ ಆಚಾರ್ಯ ಅವರಿಗೆ ಸಹಾಯಧನದ ಚೆಕ್ ನೀಡಲಾಯಿತು.

ಪ್ರಾರ್ಥನಾ ಪ್ರಾರ್ಥಿಸಿದರು. ಜೈರಾಜ್ ಭಂಡಾರಿ ಹಾಗೂ ಸುಜಿತ್ ರೈ ಅತಿಥಿಗಳನ್ನು ಪರಿಚಯಿಸಿದರು. ನಿರ್ಗಮಿತ ಕಾರ್ಯದರ್ಶಿ ಶ್ರೀಧರ್ ಕಣಜಾಲು ವಾರ್ಷಿಕ ವರದಿ ಮಂಡಿಸಿದರು. ಇದೇ ಸಂದರ್ಭ ವಾರ್ಷಿಕ ಮುನ್ನೋಟವನ್ನು ಬಿಡುಗಡೆ ಮಾಡಿದ್ದು, ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಅನಾವರಣಗೊಳಿಸಿದರು. ಚಿದಾನಂದ ಬೈಲಾಡಿ ಈ ಕಾರ್ಯಕ್ರಮವನ್ನು ನಿರ್ವಹಿಸಿದರು. ಬಾಲಕೃಷ್ಣ ಆಚಾರ್ಯ ಅವರ ನೇತೃತ್ವದಲ್ಲಿ ರಚಿಸಿದ ವಿಶೇಷ ಕ್ಲಬ್ ಬುಲೆಟಿನ್ ಅನ್ನು ಬಿಡುಗಡೆ ಮಾಡಲಾಯಿತು. ಎಂ.ಎಸ್. ಭಟ್, ಬಾಲಕೃಷ್ಣ ಕೊಳತ್ತಾಯ, ಡಾ. ಶ್ಯಾಂ ಬಿ., ವಿ.ಜೆ. ಫೆರ್ನಾಂಡೀಸ್, ಡಾ. ರತ್ನಾಕರ ಶೆಣೈ ಮೊದಲಾದವರು ಅತಿಥಿಗಳನ್ನು ಗೌರವಿಸಿದರು. ರೋಟರಿ ಕಾರ್ಯದರ್ಶಿ ಡಾ. ಶ್ರೀಪ್ರಕಾಶ್ ವಂದಿಸಿ, ಸುಬ್ಬಪ್ಪ ಕೈಕಂಬ ಹಾಗೂ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ನೂತನ ಪದಾಧಿಕಾರಿಗಳ ಪದಸ್ವೀಕಾರ:

ಅಧ್ಯಕ್ಷರಾಗಿ ಉಮಾನಾಥ ಪಿ.ಬಿ., ಕಾರ್ಯದರ್ಶಿಯಾಗಿ ಡಾ. ಶ್ರೀಪ್ರಕಾಶ್, ಉಪಾಧ್ಯಕ್ಷರಾಗಿ ಜೈರಾಜ್ ಭಂಡಾರಿ, ಐಪಿಪಿಯಾಗಿ ಮಧು ನರಿಯೂರು, ಜತೆ ಕಾರ್ಯದರ್ಶಿಯಾಗಿ ಸುಜಿತ್ ಡಿ. ರೈ, ಖಜಾಂಚಿಯಾಗಿ ಎಂ.ಜಿ. ಅಬ್ದುಲ್ ರಫೀಕ್, ಬುಲೆಟಿನ್ ಎಡಿಟರ್ ಆಗಿ ಬಾಲಕೃಷ್ಣ ಆಚಾರ್ಯ, ಸಾರ್ಜಂಟ್ ಅಟ್ ಆರ್ಮ್ಸ್ ಆಗಿ ರಾಮಕೃಷ್ಣ, ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ ದೀಪಕ್ ಕೆ.ಪಿ., ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಪರಮೇಶ್ವರ ಗೌಡ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಕ್ಸೇವಿಯರ್ ಡಿಸೋಜಾ, ವೊಕೇಷನಲ್ ಸರ್ವಿಸ್ ನಿರ್ದೇಶಕರಾಗಿ ಗೋವಿಂದ ಪ್ರಕಾಶ್ ಸಾಯ, ಯೂತ್ ಸರ್ವಿಸ್ ನಿರ್ದೇಶಕರಾಗಿ ಪ್ರೇಮಾನಂದ ಅವರಿಗೆ ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷ ಆರ್.ಕೆ. ಭಟ್ ಪದಪ್ರದಾನ ಮಾಡಿದರು. ಸಭಾಪತಿಗಳಾಗಿ ಪೋಲಿಯೋಗೆ ಡಾ. ಶ್ರೀಪತಿ ರಾವ್ ಯು., ಟಿಆರ್‌ಎಫ್‌ಗೆ ಶ್ರೀಕಾಂತ್ ಕೊಳತ್ತಾಯ, ಮೆಂಬರ್‌ಶಿಪ್ ಡೆವಲಪ್‌ಮೆಂಟ್‌ಗೆ ಸುರೇಶ್ ಶೆಟ್ಟಿ ಕೆ., ಟೀಚ್‌ಗೆ ಕಿಶನ್ ಬಿ.ವಿ., ವಿನ್ಸ್‌ಗೆ ಲೋವಲ್ ಮೆವಡ, ವೆಬ್‌ಗೆ ಪ್ರಕಾಶ್ ಆಚಾರ್ಯ, ಡಿಸ್ಟ್ರಿಕ್ಟ್ ಪ್ರಾಜೆಕ್ಟ್‌ಗೆ ಪಿ.ಡಿ. ಕೃಷ್ಣ ಕುಮಾರ್ ರೈ, ಪ್ರೋಗ್ರಾಮ್ ಕಮಿಟಿಗೆ ಚಿದಾನಂದ ಬೈಲಾಡಿ, ಪಬ್ಲಿಕ್ ಇಮೇಜ್‌ಗೆ ವಿ.ಜೆ. ಫೆರ್ನಾಂಡೀಸ್, ಎಥಿಕ್ಸ್‌ಗೆ ಡಾ. ಶ್ಯಾಮ ಬಿ., ಎಲ್‌ಸಿಸಿಗೆ ಎಂ. ಗಂಗಾಧರ ರೈ, ವಾಟರ್ ಆಂಡ್ ಸ್ಯಾನಿಟೈಷನ್‌ಗೆ ಸತೀಶ್ ನಾಯಕ್ ಎಂ., ರೋಟರ‍್ಯಾಕ್ಟ್ ಕ್ಲಬ್ ಪುತ್ತೂರಿಗೆ ಶ್ರೀಧರ್ ಆಚಾರ್ಯ, ರೋಟರ‍್ಯಾಕ್ಟ್ ಕ್ಲಬ್ ಸ್ವರ್ಣಕ್ಕೆ ಅಶೋಕ್ ಬಲ್ನಾಡ್, ರೋಟರ‍್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜಿಗೆ ಪ್ರೀತಾ ಹೆಗ್ಡೆ ಅವರು ಪದ ಸ್ವೀಕರಿಸಿದರು.

 

[box type=”info” bg=”#” color=”#” border=”#” radius=”20″]ಜ. 14ರಂದು ಕಣ್ಣಿನ ಆಸ್ಪತ್ರೆ ಲೋಕಾರ್ಪಣೆ: ಉಮಾನಾಥ ಪಿ.ಬಿ.

ಪದ ಸ್ವೀಕಾರ ಮಾಡಿ ಮಾತನಾಡಿದ ಪುತ್ತೂರು ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ಉಮಾನಾಥ ಪಿ.ಬಿ., ಕಣ್ಣಿನ ಆಸ್ಪತ್ರೆಯನ್ನು ೨೦೨೨-೨೩ನೇ ಸಾಲಿನ ಕನಸಿನ ಯೋಜನೆಯಾಗಿ ಪುತ್ತೂರು ರೋಟರಿ ಕೈಗೆತ್ತಿಕೊಂಡಿದೆ. ಸುಮಾರು ೧.೪೦ ಕೋಟಿ ರೂ.ನ ಈ ಯೋಜನೆ, ೨೦೨೩ರ ಜನವರಿ ೧೪ರ ಮಕರ ಸಂಕ್ರಮಣದ ದಿನ ಕಣ್ಣಿನ ಆಸ್ಪತ್ರೆಯ ಪುತ್ತೂರು ಜನತೆಯ ಸೇವೆಗೆ ಲಭ್ಯವಾಗಲಿದೆ. ಇದರ ಜೊತೆಗೆ ಜಲಸಿರಿ, ವನಸಿರಿ, ಆರೋಗ್ಯಸಿರಿ ಮೊದಲಾದ ಯೋಜನೆಗಳು ಈ ವರ್ಷ ನಡೆಯಲಿದೆ ಎಂದು ತಿಳಿಸಿದರು.[/box]

 

[box type=”note” bg=”#” color=”#” border=”#” radius=”20″]ಮನೆ ಕೀ ಹಸ್ತಾಂತರ:

ಪೆರಿಯತ್ತೋಡಿಯ ಅನಿತಾ ಕುಟುಂಬಕ್ಕೆ ಪುತ್ತೂರು ರೋಟರಿ ಪದಪ್ರದಾನ ಸಮಾರಂಭದಲ್ಲಿ ಮನೆಯ ಕೀಯನ್ನು ಹಸ್ತಾಂತರಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸಿದ್ದ ಅನಿತಾ ಅವರ ಕುಟುಂಬ, ಪ್ಲಾಸ್ಟಿಕ್ ಟೆಂಟ್‌ನಲ್ಲಿ ವಾಸಿಸುತ್ತಿತ್ತು. ಗೀತಾಮಣಿ ಅವರ ಮೂಲಕ ಮಾಹಿತಿ ತಿಳಿದ ರೋಟರಿ ಕ್ಲಬ್, ಮನೆ ನಿರ್ಮಿಸಿ ಕೊಡುವ ಕಾಯಕಕ್ಕೆ ಮುಂದೆ ಬಂತು. ಸುಮಾರು ೮-೯ ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿದ್ದು, ವಿವಿಧ ಮಂದಿ ಒಂದೊಂದು ವಸ್ತುಗಳನ್ನು ದಾನವಾಗಿ ನೀಡಿದ್ದಾರೆ. ವೇದಿಕೆಯಲ್ಲಿ ಅತಿಥಿಗಳು ಅನಿತಾ, ಅವರ ತಾಯಿ ಸುನಂದಾ ಅವರಿಗೆ ಕೀಯನ್ನು ಹಸ್ತಾಂತರಿಸಿದರು. ಇದೇ ಸಂದರ್ಭ ಮನೆ ನಿರ್ಮಾಣ ಕಾರ್ಯದಲ್ಲಿ ಅವಿರತ ಶ್ರಮಿಸಿದ ಸುಜಿತ್ ಡಿ. ರೈ ಅವರನ್ನು ಗೌರವಿಸಲಾಯಿತು.[/box]

LEAVE A REPLY

Please enter your comment!
Please enter your name here