ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಸವಣೂರಿನಲ್ಲಿ ಹಿಂ.ಜಾ.ವೇ.ಯಿಂದ ಪ್ರತಿಭಟನೆ, ಶ್ರದ್ದಾಂಜಲಿ

0

  • ಕನ್ಹಯ್ಯ ಲಾಲ್ ಹತ್ಯೆ ಮಾಡಿದ ಇಬ್ಬರೂ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು-ಅರುಣ್‌ಪುತ್ತಿಲ
  • ಒಂದು ವರ್ಗದ ತುಷ್ಟೀಕರಣ ನೀತಿಯ ಮುಂದುವರಿದ ಭಾಗವೇ ಅಮಾಯಕರ ಹತ್ಯೆ-ರಾಕೇಶ್‌ರೈ ಕೆಡೆಂಜಿ

ಸವಣೂರು : ರಾಜಸ್ಥಾನದಲ್ಲಿ ಕನ್ಹಯ್ಯ ಲಾಲ್ ಅವರನ್ನು ಹತ್ಯೆ ಮಾಡಿದ ಇಬ್ಬರೂ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು.

ರಾಜಸ್ಥಾನದ ಉದಯಪುರದಲ್ಲಿ ಅಮಾಯಕ ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಸವಣೂರು ಹಿಂದು ಜಾಗರಣ ವೇದಿಕೆಯ ವತಿಯಿಂದ ಜು. 1ರಂದು ಸಂಜೆ ಸವಣೂರು ಜಂಕ್ಷನ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ನೂಪುರ್‌ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ ಕಾರಣಕ್ಕೆ ಅಮಾಯಕ ಟೈಲರ್‌ ಕನ್ಹಯ್ಯ ಲಾಲ್‌ಅವರನ್ನು ಹತ್ಯೆ ಮಾಡಿದ ಆರೋಪಿಗಳು ಹತ್ಯೆ ಮಾಡಿದ ಮುಸಲ್ಮಾನ ಮೂಲಭೂತವಾದಿಗಳು ಹತ್ಯೆ ಕೃತ್ಯ ಎಸಗಲು ಪಾಕಿಸ್ತಾನಕ್ಕೆ ತೆರಳಿ ತರಬೇತಿ ಪಡೆದಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ದೇಶದಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸುವ ಹುನ್ನಾರ ಇದರ ಹಿಂದೆ ಅಡಗಿದೆ. ಹಿಂದೂಗಳಲ್ಲಿ ಭಯ ಉಂಟು ಮಾಡುವ ತಂತ್ರ ಇದು ಎಂದ ಅವರು,ಹಿಂದೂ ಸಮಾಜ ಇಂತಹ ಘಟನೆಗಳಿಗೆ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದರು. ದೇಶದ ಸಂವಿಧಾನವನ್ನು ಗೌರವಿಸುವ ಬಹುಸಂಖ್ಯಾತ ಹಿಂದೂಗಳ ಭಾವನೆಗಳ ವಿರುದ್ದ ,ಧಾರ್ಮಿಕ ಕೇಂದ್ರಗಳ ವಿರುದ್ದ,ಸಂವಿಧಾನದ ವಿರುದ್ದ ವ್ಯವಸ್ಥಿತ ಕೆಲಸ ಮಾಡುತ್ತಿದ್ದಾರೆ.ಇವುಗಳ ವಿರುದ್ದ ತಕ್ಕ ಉತ್ತರ ನೀಡಲು ಹಿಂದೂ ಸಮಾಜ ಸಿದ್ದವಾಗಿದೆ. ಕನ್ಹಯ್ಯ ಲಾಲ್ ರಕ್ಷಣೆ ಕೋರಿದರೂ ರಕ್ಷಣೆ ನೀಡದ ರಾಜಸ್ಥಾನದ ಕಾಂಗ್ರೆಸ್ ನೇತೃತ್ವದ ಸರಕಾರ ಅಮಾಯಕನ ಹತ್ಯೆ ಹಿಂದೆ ಕೈಜೋಡಿಸಿದೆ ಎಂದು ಆರೋಪಿಸಿದರು.

ಬಿಜೆಪಿ ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ರಾಕೇಶ್‌ರೈ ಕೆಡೆಂಜಿ ಮಾತನಾಡಿ, ರಾಜಕೀಯ ಲಾಭಗೋಸ್ಕರ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡಿ, ಒಂದು ವರ್ಗದ ತುಷ್ಟೀಕರಣ ನೀತಿ ಮುಂದುವರಿದ ಪರಿಣಾಮವೇ ಮುಸ್ಲಿಂರಿಂದ ಅಮಾಯಕ ಹಿಂದೂಗಳ ಹತ್ಯೆಗಳು ನಡೆಯುತ್ತಿದೆ. ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನ,ಐಸಿಸ್,ಪಾಕಿಸ್ಥಾನ ಸೇನೆ ಈ ಕನ್ಹಯ್ಯ ಲಾಲ್‌ಹತ್ಯೆ ಹಿಂದೆ ಇದೆ ಎಂದರಲ್ಲದೆ ಪಾಕಿಸ್ಥಾನ ಪ್ರೇರಿತ ಮತಾಂಧ ಶಕ್ತಿಗಳ ವಿರುದ್ದ ಭಾರತದ ಮುಸ್ಲಿಮರು ಧ್ವನಿಯೆತ್ತಬೇಕು.ಆ ಮೂಲಕ ದೇಶದ ಸೌಹಾರ್ದತೆಗೆ ತಾವು ಕೂಡ ಕೊಡುಗೆಯಾಗಬೇಕು.ನಮ್ಮ ದೇಶದಲ್ಲಿ ವಿಶಾಲತೆಯಿಂದ ಜೀವಿಸುತ್ತಿರುವ ನಾವು ಪಾಕಿಸ್ಥಾನದ ಪ್ರೇರಿತ ಶಕ್ತಿಗಳ ವಿರುದ್ದ ಧ್ವನಿಯಾಗಬೇಕು ಎಂದರು.

ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಪುತ್ತೂರು ನಗರ ಘಟಕದ ಗೌರವಾಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್‌ಮೆದು, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಮಿತಿ ಪ್ರಮುಖರಾದ ಅಶೋಕ್‌ ತ್ಯಾಗರಾಜನಗರ, ಪುತ್ತೂರು ನಗರ ಸಂಯೋಜಕ್ ಸ್ವಸ್ತಿಕ್ ರೈ ಮೇಗಿನಗುತ್ತು, ಹಿಂ.ಜಾ.ವೇ.ಯ ತಾಲೂಕು ಸಹಸಂಯೋಜಕ್ ಪುಷ್ಪರಾಜ ಸವಣೂರು, ಅವಿನಾಶ್ ಪುರುಷರಕಟ್ಟೆ, ತಾಲೂಕು ಹಿಂದೂ ವಾಹಿನಿ ಪ್ರಮುಖ್ ಗೀತೇಶ್ ಅಜ್ಜಿಕಲ್ಲು, ಸವಣೂರು ವಲಯ ಸಂಯೋಜಕ್‌ ಶ್ರೀಧರ ಇಡ್ಯಾಡಿ, ಸಹ ಸಂಯೋಜಕ್ ನಿಶಾಂತ್ ಪರಣೆ , ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ, ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ, ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ,ಗ್ರಾ.ಪಂ.ಸದಸ್ಯರಾದ ಸತೀಶ್ ಅಂಗಡಿಮೂಲೆ, ತೀರ್ಥರಾಮ ಕೆಡೆಂಜಿ, ಚಂದ್ರಾವತಿ ಸುಣ್ಣಾಜೆ, ಮಾಜಿ ಸದಸ್ಯರಾದ ಪ್ರಕಾಶ್ ಕುದ್ಮನಮಜಲು, ಸತೀಶ್‌ಬಲ್ಯಾಯ, ದೈಪಿಲ ಕ್ರೀಡೆ ಹಾಗೂ ಸೇವಾ ಸಂಘದ ಗೌರವಾಧ್ಯಕ್ಷ ಪ್ರವೀಣ್ ಕುಂಟ್ಯಾನ, ತಿರಂಗಾ ವಾರಿಯರ್ಸ್‌ನ ಲೋಕೇಶ್‌ಬಿ.ಎನ್, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸುಪ್ರಿತ್ ರೈ ಖಂಡಿಗ ಮೊದಲಾದವರು ಪಾಲ್ಗೊಂಡಿದ್ದರು.

ಹಿಂದೂ ಜಾಗರಣ ವೇದಿಕೆಯ ಸವಣೂರು ಘಟಕದ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ಅವರು ಸ್ವಾಗತಿಸಿ ವಂದಿಸಿದರು.

ಹಿಂದೂಗಳ ಅಂಗಡಿ ಸ್ವಯಂ ಪ್ರೇರಿತ ಬಂದ್:

ಪ್ರತಿಭಟನೆ ವೇಳೆಯಲ್ಲಿ ಸವಣೂರಿನ ಪೇಟೆಯಲ್ಲಿರುವ ಹಿಂದೂಗಳ ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್‌ಮಾಡಿದ್ದರು. ಮಳೆಯನ್ನೂ ಲೆಕ್ಕಿಸದೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕುದ್ಮಾರು, ಬೆಳಂದೂರು,ಕಾಣಿಯೂರು, ಆಲಂಕಾರು, ಸರ್ವೆ, ಪಾಲ್ತಾಡಿ, ಅಂಕತ್ತಡ್ಕ ಮೊದಲಾದ ಕಡೆಗಳಿಂದ ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರತಿಭಟನೆಯ ಬಳಿಕ ಒಂದು ನಿಮಿಷದ ಮೌನ ಪ್ರಾರ್ಥನೆಯ ಮೂಲಕ ಕನ್ಹಯ್ಯ ಲಾಲ್‌ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.ಶಾಂತಿ ಮಂತ್ರದೊಂದಿಗೆ ಪ್ರತಿಭಟನೆ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here