ನಾಳೆ(ಜು.3) ಪ್ರೌಢಶಾಲಾ ಸಹಶಿಕ್ಷಕರ ಸಂಘದ ಚುನಾವಣೆ

0
  •  7 ಸ್ಥಾನಗಳಿಗೆ 14 ಮಂದಿ ಕಣದಲ್ಲಿ
  •  171 ಮತದಾರರು
  •  ನೆಲ್ಲಿಕಟ್ಟೆ ಶಿವರಾಮ ಕಾರಂತ ಪ್ರೌಢಶಾಲೆಯಲ್ಲಿ ಮತದಾನ

ಪುತ್ತೂರು:ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪುತ್ತೂರು ಘಟಕದ ಮುಂದಿನ ಐದು ವರ್ಷಗಳ ಅವಧಿಗೆ ನಿರ್ದೇಶಕರ ಆಯ್ಕೆಗೆ ಜು.3ರಂದು ಚುನಾವಣೆ ನಡೆಯಲಿದೆ. ಒಟ್ಟು 7 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ 14 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ತಾಲೂಕಿನಲ್ಲಿ 171 ಮಂದಿ ಮತದಾರರು ಮತಚಲಾಯಿಸಲಿದ್ದಾರೆ.

ನೆಲ್ಲಿಕಟ್ಟೆ ಶಿವರಾಮ ಕಾರಂತ ಸರಕಾರಿ ಪ್ರೌಢಶಾಲಾ ಹಿಂದಿ ಶಿಕ್ಷಕ ಅಬ್ರಹಾಂ ಎಸ್.ಎ., ಕೆಯ್ಯೂರು ಕೆಪಿಎಸ್‌ನ ವಿಜ್ಞಾನ ಶಿಕ್ಷ ಕೆ.ಎಸ್ ವಿನೋದರ ಕುಮಾರ್, ಉಪ್ಪಿನಂಗಡಿ ಸ.ಪ.ಪೂ ಕಾಲೇಜಿನ ಆಂಗ್ಲ ಭಾಷಾ ಶಿಕ್ಷಕ ವಿಜಯ ಕುಮಾರ್ ನಾಯ್ಕ್, ಕುಂಬ್ರ ಕೆಪಿಎಸ್‌ನ ಗಣಿತ ಶಿಕ್ಷಕಿ ಮಮತಾ ಕೆ.ಎಸ್., ಇರ್ದೆ-ಉಪ್ಪಳಿಗೆ ಸರಕಾರಿ ಪ್ರೌಢಶಾಲಾ ಸಮಾಜ ವಿಜ್ಞಾನ ಶಿಕ್ಷಕಿ ಶ್ಯಾಮಲಾ, ಶಿವರಾಮ ಕಾರಂತ ಸರಕಾರಿ ಪ್ರೌಢಶಾಲಾ ಕನ್ನಡ ಶಿಕ್ಷಕ ನಾರಾಯಣ ನಾಯ್ಕ, ಹಿರೇಬಂಡಾಡಿ ಸರಕಾರಿ ಪ್ರೌಢ ಶಾಲಾ ಸಮಾಜ ವಿಜ್ಞಾನ ಶಿಕ್ಷಕಿ ಲಲಿತಾ, ಹಿರೇಬಂಡಾಡಿ ಸರಕಾರಿ ಪ್ರೌಢ ಶಾಲಾ ಹರಿಕಿರಣ, ಕಬಕ ಸ.ಪ.ಪೂ ಕಾಲೇಜಿನ ಪ್ರೌಢಶಾಲಾ ವಿಭಾದ ಸತ್ಯಶಂಕರ ಎಂ., ಸರ್ವೆ ಸರಕಾರಿ ಪ್ರೌಢ ಶಾಲಾ ಉದಯ ಕುಮಾರ್, ಕೆಯ್ಯೂರು ಕೆ.ಪಿ.ಎಸ್‌ನ ಗಂಗಾಧರ ರೈ, ಮುಕ್ವೆ ಸರಕಾರಿ ಹಿ.ಪ್ರಾ ಶಾಲೆ ವಿಜಯಾ ಎಚ್.ಆರ್., ಪಟ್ಟೆ ಪ್ರತಿಭಾ ಪ್ರೌಢಶಾಲಾ ವಿಶ್ವನಾಥ, ಸುಳ್ಯಪದವು ಸರ್ವೋದಯ ಪ್ರೌಢಶಾಲಾ ಕರುಣಾಕರ ಕಣದಲ್ಲಿದ್ದಾರೆ.

ತಾಲೂಕಿನ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಸಹ ಶಿಕ್ಷಕರು ಈ ಚುನಾವಣೆಯ ಮತದಾರರಾಗಿರುತ್ತಾರೆ. ಮತದಾನ ಪ್ರಕ್ರಿಯೆಗಳು ನೆಲ್ಲಿಕಟ್ಟೆ ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ತನಕ ನಡೆಯಲಿದೆ. 4.30ಕ್ಕೆ ಮತ ಎಣಿಕ ಕಾರ್ಯ ನಡೆದು ಫಲಿತಾಂಶ ಘೋಷಣೆಯಾಗಲಿದೆ. ಉಪ್ಪಳಿಗೆ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ನಾರಾಯಣ ಕೆ.ಯವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಕಡಬದಲ್ಲಿ ಅವಿರೋಧ ಆಯ್ಕೆ:

ಈ ಹಿಂದೆ ಪುತ್ತೂರು ಹಾಗೂ ಕಡಬ ಸೇರಿದಂತೆ ಪುತ್ತೂರು ತಾಲೂಕು ಸಂಘ ಕಾರ್ಯನಿರ್ವಹಿಸುತ್ತಿತ್ತು. ಇದರಲ್ಲಿ ಒಟ್ಟು 11 ನಿರ್ದೇಶಕ ಸ್ಥಾನಗಳಿದ್ದವು. ಇದೀಗ ಕಡಬ ತಾಲೂಕು ಪ್ರತ್ಯೇಕಗೊಂಡಿದ್ದು 4 ಸ್ಥಾನ ಕಡಬ ತಾಲೂಕು ಹಾಗೂ 7 ಸ್ಥಾನ ಪುತ್ತೂರು ತಾಲೂಕಿಗೆ ಸೀಮಿತವಾಗಿದೆ. ಕಡಬ ತಾಲೂಕಿನಲ್ಲಿ ನಾಲ್ಕು ಸ್ಥಾನಗಳಿಗೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು ಶಾಂತಾರಾಮ ಓಡ್ಲ, ದೇವಿಪ್ರಸಾದ್, ಸತ್ಯನಾರಾಯಣ ಹಾಗೂ ಶ್ರೀಲತಾರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here