ಪಡೀಲ್‌: ಮೌಲಾನಾ ಆಜಾದ್ ಮಾದರಿ ಶಾಲೆಯ ಉದ್ಘಾಟನೆ

0

 

ಪುತ್ತೂರು: ಪಡೀಲ್‌ನಲ್ಲಿ ನೂತನವಾಗಿ ರೂ.2.35 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮೌಲಾನಾ ಆಜಾದ್ ಮಾದರಿ ಶಾಲೆಯ ಉದ್ಘಾಟನೆಯು ಜು.೨ರಂದು ನಡೆಯಿತು.

ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ನೂತನ ಶಾಲೆಯನ್ನು ಉದ್ಘಾಟಿಸಿದರು. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದರು. ನಗರಸಭಾ ಸದಸ್ಯ ಪದ್ಮನಾಭ ನಾಯ್ಕ್, ತಹಶೀಲ್ದಾರ್ ನಿಸರ್ಗಪ್ರಿಯ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಅಲ್ಪಸಂಖ್ಯಾತ ಇಲಾಖೆಯ ಆಂಜನಪ್ಪ, ತಾಲೂಕು ಅಲ್ಪಸಂಖ್ಯಾತ ಇಲಾಖೆ ಉಪವಿಭಾಗದ ವಿಸ್ತರಣಾಧಿಕಾರಿ ವೀರಭದ್ರಪ್ಪ , ಮುಖ್ಯೋಪದ್ಯೋಯ ಅವಿನಾಶ್, ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ, ನಿರ್ಮಿತಿ‌ ಕೇಂದ್ರದ ಹರೀಶ್, ಶಿಕ್ಷಕರಾದ ಕರುಣಾಕರ, ವೃತ್ತಿ, ತಸ್ತ್ರೀಫಾ, ಎಸ್ ಪಿ ಎಲ್ ಮಹರೂಮ್ ಅತಿಥಿಗಳನ್ನು ಗೌರವಿಸಿದರು. ಮಿನಾಝಾ ಮತ್ತು ಬಳಗದವರು ನಾಡಗೀತೆ ಹಾಡಿದರು. ಕನ್ನಡ ಭಾಷಾ ಶಿಕ್ಷಕಿ‌ ಪೂರ್ಣಿಮಾ ಸ್ವಾಗತಿಸಿದರು. ವೃದ್ಧಿ ವಂದಿಸಿದರು.

LEAVE A REPLY

Please enter your comment!
Please enter your name here