ಪುತ್ತೂರು : 2022 ಮತ್ತು 23ನೇ ಸಾಲಿನ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ಪ್ರಣವ್ ಕೆ.ಯು., ಉಪಾಧ್ಯಕ್ಷರಾಗಿ ಹತ್ತನೆ ತರಗತಿಯ ಸನಾ -ತಿಮಾ, ಕಾರ್ಯದರ್ಶಿಯಾಗಿ ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದ ಆಯಿಷತ್ ವಫಾ, ಜತೆ ಕಾರ್ಯದರ್ಶಿಯಾಗಿ ಒಂಬತ್ತನೆ ತರಗತಿಯ ಖದೀಜತ್ ಅಝೀಲಾ ಕೆ.ಎ., ಕ್ರೀಡಾ ಕಾರ್ಯದರ್ಶಿಗಳಾಗಿ ಪಿಯುಸಿ ವಿಭಾಗದಿಂದ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಹರ್ಷಿತ್ ಕೆ.ಡಿ., ಪ್ರೌಢಶಾಲಾ ವಿಭಾಗದಿಂದ 8ನೇ ತರಗತಿಯ ವಿದಿಶಾ ಬಿ.ಕೆ., ಪ್ರಾಥಮಿಕ ಶಾಲಾ ವಿಭಾಗದಿಂದ 7ನೇ ತರಗತಿಯ ಶಮ್ಮಾ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಪ್ರೌಢಶಾಲಾ ವಿಭಾಗದಿಂದ 8ನೆ ತರಗತಿಯ ಆಯಿಷತ್ ಹನ್ನಾ, ಪ್ರಾಥಮಿಕ ಶಾಲಾ ವಿಭಾಗದಿಂದ 6ನೇ ತರಗತಿಯ ಶಂತನುಕೃಷ್ಣ ಕೆ.ಎ. ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಸಂಚಾಲಕ ಕೆ. ಸೀತಾರಾಮ ರೈ ಸವಣೂರು, ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಪ್ರಾಂಶುಪಾಲ ಸೀತಾರಾಮ ಕೇವಳ ತಿಳಿಸಿದ್ದಾರೆ. ಚುನಾವಣಾಽಕಾರಿಯಾಗಿ ವಾಣಿಜ್ಯ ಶಾಸ ಉಪನ್ಯಾಸಕಿ ಅಮೃತಾ ಎಸ್. ನಾಯಕ್ ಸಹಕರಿಸಿದರು.