ಬೆಟ್ಟಂಪಾಡಿ ಗ್ರಾಮ ಪಂಚಾಯತಿನಲ್ಲಿ ಒಣ ತ್ಯಾಜ್ಯ ನಿರ್ವಹಣೆ ಬಗ್ಗೆ ಸಮಾಲೋಚನಾ ಸಭೆ- ಮಾಹಿತಿ ಕಾರ್ಯಾಗಾರ

0

 

ನಿಡ್ಪಳ್ಳಿ; ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ವಸಹಾಯ ಸಂಘದ ಒಕ್ಕೂಟದ ಸಹಭಾಗಿತ್ವದಲ್ಲಿ ವ್ಯವಸ್ಥಿತ ಒಣ ತ್ಯಾಜ್ಯ ಸಂಗ್ರಹಣೆ, ಬೇರ್ಪಡಿಸುವಿಕೆ ಮತ್ತು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಬಗ್ಗೆ ಜು.2 ರಂದು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಯಿತು.

 ಸ್ವಚ್ಛ ಭಾರತ್ ಮಿಷನ್ ಯೋಜನೆಯ ಅಧಿಕಾರಿ ಡೊಂಬಯ್ಯ ಸಾಕ್ಷ ಚಿತ್ರದೊಂದಿಗೆ ಮಾಹಿತಿ ನೀಡಿದರು.  ಗ್ರಾಮ ಪಂಚಾಯತ್ ಅಧ್ಯಕ್ಷೆ ಪವಿತ್ರ .ಡಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವಿನೋದ್ ಕುಮಾರ್ ರೈ ಗುತ್ತು , ಪಿಡಿಒ ಸಂದೇಶ್.ಎನ್, ಕಾರ್ಯದರ್ಶಿ ಬಾಬು ನಾಯ್ಕ, ಸಂಜೀವಿನಿ ಒಕ್ಕೂಟದ ಸಮೂಹ ಸಂಪನ್ಮೂಲ ವ್ಯಕ್ತಿ ಶಕುಂತಲಾ, ಸಿಬ್ಬಂದಿಗಳು, ಗ್ರಾಮ  ಪಂಚಾಯತ್   ಸದಸ್ಯರು, ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗಡಿ ಮಾಲೀಕರು ಹಾಗೂ ವರ್ತಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಒಕ್ಕೂಟದ ಪ್ರತಿನಿಧಿಗಳು, ಶಾಲಾ ಅಧ್ಯಾಪಕರುಗಳು, ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.


ಸ್ವಚ್ಚತಾ ಕರಪತ್ರ ಬಿಡುಗಡೆ ಮಾಡಲಾಯಿತು. ಪಂಚಾಯತ್ ವ್ಯಾಪ್ತಿಯ  ಅಂಗಡಿಗಳಿಗೆ ಮತ್ತು ಶಾಲೆಗಳಿಗೆ ಒಣ ಕಸ ಸಂಗ್ರಹಣಾ ಚೀಲಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

LEAVE A REPLY

Please enter your comment!
Please enter your name here