ವಿಟ್ಲ ಪೊಲೀಸರ ಯಶಸ್ವೀ ಕಾರ್ಯಾಚರಣೆ.! -ಮೂವರು ಅಂತರ್‌ ರಾಜ್ಯ ಡ್ರಗ್ಸ್ ಪೆಡ್ಲರುಗಳ ಬಂಧನ

0
  • ಎಂಡಿಎಂಎ, ಗಾಂಜಾ, ಆಟೋರಿಕ್ಷಾ ವಶಕ್ಕೆ


ಪುತ್ತೂರು:ಮಾದಕ ವಸ್ತುಗಳಾದ ಎಂಡಿಎಂಎ, ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ವಿಟ್ಲ ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ಅಂತರ್‌ರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿರುವ ಘಟನೆ ಜು.2ರಂದು ವಿಟ್ಲದಲ್ಲಿ ನಡೆದಿದೆ.


ನೆಲ್ಲಿಗುಡ್ಡೆ ರಹೀಂ ಯಾನೆ ರಹಿಮಾನ್, ಕಟ್ಟತ್ತಿಲ ಜಲಾಲುದ್ಧೀನ್ ಮತ್ತು ಒಕ್ಕೆತ್ತೂರು ಫೈಝಲ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಮಾದಕ ವಸ್ತುಗಳಾದ ಎಂಡಿಎಂಎ, ಗಾಂಜಾ, ತಲವಾರು ಹಾಗೂ ಸಾಗಾಟಕ್ಕೆ ಬಳಸಿದ್ದ ಆಟೋರಿಕ್ಷಾ ವಶಕ್ಕೆ ಪಡೆದುಕೊಂಡಿರುತ್ತಾರೆ. ವಿಟ್ಲ ಠಾಣಾ ಎಸ್‌ಐ ಸಂದೀಪ್, ಮಂಜುನಾಥ್, ಸಿಬಂದಿಗಳಾದ ಹೇಮರಾಜ್, ಅಶೋಕ್, ವಿಠಲ್ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.

LEAVE A REPLY

Please enter your comment!
Please enter your name here