ಡಾ.ಎಂ.ಕೆ.ಪ್ರಸಾದ್‌ರವರಿಗೆ ಆದರ್ಶ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳಿಂದ ಗೌರವ ಸನ್ಮಾನ

0

  •  ಡಾ. ಬಿ.ಸಿ.ರಾಯ್‌ಗೆ ಸಮಾನರಾದ ವೈದ್ಯರು-ಡಾ. ಎಸ್.ಎಸ್ ಜ್ಯೋಶಿ
  • ವೈದ್ಯರು, ಸಿಬ್ಬಂದಿಗಳ ಸಹಕಾರ ಎಂದಿಗೂ ಮರೆಯಲಾರೆ-ಡಾ.ಎಂ.ಕೆ.ಪ್ರಸಾದ್

 

 

ಪುತ್ತೂರು: ಕರ್ನಾಟಕ ಭಾರತೀಯ ವೈದ್ಯಕೀಯ ಸಂಘದ ಡಾ. ಬಿ.ಸಿ.ರಾಯ್ ವೈದ್ಯರ ದಿನದ ಪ್ರಶಸ್ತಿ ಪುರಸ್ಕೃತರಾದ ಡಾ.ಎಂ.ಕೆ.ಪ್ರಸಾದ್‌ರವರಿಗೆ ಪುತ್ತೂರು ಆದರ್ಶ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳಿಂದ ಸನ್ಮಾನ ಕಾರ್ಯಕ್ರಮ ಜು.2ರಂದು ಆದರ್ಶ ಆಸ್ಪತ್ರೆಯಲ್ಲಿ ನಡೆಯಿತು.

ಆಸ್ಪತ್ರೆಯ ವೈದ್ಯರಾದ ಡಾ. ಸುಬ್ರಾಯ ಭಟ್, ಡಾ.ಎಂ.ಎನ್.ಭಟ್, ಡಾ. ಎಸ್.ಎಸ್.ಜ್ಯೋಶಿ, ಡಾ. ಬಿ.ಶ್ಯಾಮ ಅವರು ಡಾ. ಎಂ.ಕೆ.ಪ್ರಸಾದ್ ಹಾಗೂ ಅವರ ಪತ್ನಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರಿಗೆ ಹೂವಿನ ಹಾರ, ಬೆಳ್ಳಿಯ ಸ್ಮರಣಿಕೆ, ಶಾಲು ಹೊದಿಸಿ ಸನ್ಮಾನಿಸಿದರು. ಇದಾದ ಬಳಿಕ ಆಸ್ಪತ್ರೆಯ ಸಂದರ್ಶಕ ವೈದ್ಯರು, ಸಿಬ್ಬಂದಿಗಳು ಸನ್ಮಾನಿಸಿದರು.

ಡಾ. ಬಿ.ಸಿ.ರಾಯ್‌ಗೆ ಸಮಾನರಾದ ವೈದ್ಯರು: ಆಸ್ಪತ್ರೆಯ ವೈದ್ಯರಾದ ಡಾ. ಎಸ್.ಎಸ್.ಜ್ಯೋಶಿ ಅವರು ಮಾತನಾಡಿ, ಪ್ರತಿ ವರ್ಷ ಜು.೧ರಂದು ವೈದ್ಯರು ಸೇವಾ ದಿನವಾಗಿ ಆಚರಿಸುತ್ತಾರೆ. ಇದು ಭಾರತದ ವೈದ್ಯರೆಲ್ಲರೂ ಗೌರವಿಸುವ ಡಾ.ಬಿದನ್ ಚಂದ್ರ ರಾಯ್ ಅವರ ಜನ್ಮ ದಿನ. ಇವರ ಸ್ಮರಣಾರ್ಥ ಈ ದಿನವನ್ನು ವೈದ್ಯರ ದಿನವೆಂದು ಆಚರಿಸಲಾಗುತ್ತಿದೆ. ಡಾ.ಬಿ.ಸಿ.ರಾಯ್ ಅವರು ಕೊಲ್ಕತ್ತಾದ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರು. ಜನರ ಕಲ್ಯಾಣಕ್ಕಾಗಿ ಬಹುವಾಗಿ ಶ್ರಮಿಸಿದ ಅವರು ವೈದ್ಯರಿಗೆ ಮಾರ್ಗದರ್ಶನ ನೀಡಲು ಭಾರತೀಯ ಆರೋಗ್ಯ ಮಂಡಳಿಯನ್ನು ಆರಂಭಿಸಿದರು. ಅದಾದ ಬಳಿಕ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಅದೇ ರೀತಿ ಡಾ. ಎಂ.ಕೆ.ಪ್ರಸಾದ್ ಅವರು ಕೂಡಾ ಡಾ.ಬಿ.ಸಿ.ರಾಯ್ ಅವರ ಸಮಾನರಾಗಿ ಸೇವೆ ನೀಡಿದ್ದಾರೆ. ಆದರೆ ಅವರು ಮುಖ್ಯಮಂತ್ರಿಯಾಗಿಲ್ಲ. ಮನಸ್ಸು ಮಾಡುತ್ತಿದ್ದರೆ ಮುಖ್ಯಮಂತ್ರಿಯ ಸ್ಥಾನ ಯಾವತ್ತೋ ಪಡೆಯಬಹುದಿತ್ತು. ಆದರೆ ಅದಕ್ಕೆ ಮನಸ್ಸು ಮಾಡದೆ ವೈದ್ಯಕೀಯ ಕ್ಷೇತ್ರದಲ್ಲೇ ಇದ್ದಾರೆ ಎಂದರು.

ವೈದ್ಯರು, ಸಿಬ್ಬಂದಿಗಳ ಸಹಕಾರ ಎಂದಿಗೂ ಮರೆಯಲಾರೆ: ಸನ್ಮಾನ ಸ್ವೀಕರಿಸಿದ ಡಾ. ಎಂ.ಕೆ.ಪ್ರಸಾದ್ ಅವರು ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗಳನ್ನು ನೆನಪಿಸಿಕೊಂಡು ಅವರ ಸಹಕಾರವನ್ನು ಸ್ಮರಿಸಿದರು. ಸಿಬ್ಬಂದಿಗಳ ಕೆಲಸ ಕಾರ್ಯಗಳ ಕುರಿತು ಉಲ್ಲೇಖಿಸಿದ ಅವರು ಬಾವುಕರಾಗಿ ನಮ್ಮ ಆಸ್ಪತ್ರೆಯ ಸಿಬ್ಬಂದಿಗಳು ಬಹಳ ಉತ್ತಮ ಕೆಲಸ ಮಾಡುತ್ತಾರೆ. ಅವರಿಗೆ ನನ್ನ ಆಶೀರ್ವಾದ ಸದಾ ಇದೆ ಎಂದರು. ಈ ಸಂದರ್ಭದಲ್ಲಿ ಡಾ. ಅನಿಲ್ ಎಸ್ ಬೈಪಡಿತ್ತಾಯ, ಡಾ.ಮಂಜುನಾಥ್ ರೈ, ಡಾ. ಭಾಸ್ಕರ್ ಎಮ್, ಡಾ. ಮಧುರಾ ಭಟ್, ಡಾ. ರಾಧಿಕಾ, ಡಾ. ವಿಷ್ಣುಪ್ರಸಾದ್, ಡಾ. ಅರ್ಚನಾ ಕಾವೇರಿ, ಡಾ. ಅರವಿಂದ, ನಗರಸಭೆ ಮಾಜಿ ಸದಸ್ಯ ಸುಜೀಂದ್ರ ಪ್ರಭು, ಡಾ, ಎಂ.ಕೆ. ಪ್ರಸಾದ್‌ರವರ ಪುತ್ರಿ ಅಶ್ವಿನಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಆಸ್ಪತ್ರೆಯ ದಯಾನಂದ, ತಾರಾನಾಥ್, ಉದಯ, ನಾರಾಯಣ, ಸುಂದರ, ಆನಂದ, ಜಾನಕಿ, ತಾರಾ, ಜಯಶೀಲ, ಇಂಧುಶೇಖರ್, ಕರುಣಾಕರ್ ಶೆಣೈ, ಕರುಣಾಕರ ರೈ, ಕೃಷ್ಣಪ್ಪ ಹಾಗೂ ಇತರೇ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here