ಕೆಯ್ಯೂರು ಬರೆಮೇಲು ಎಂಬಲ್ಲಿ ಧರೆ ಕುಸಿತ

0

ಪುತ್ತೂರು:  ಕೆಯ್ಯೂರು ಗ್ರಾಮದ ಬರೆಮೇಲು ಹೇಮನಾಥರವರ ಜಾಗದಲ್ಲಿರುವ ತೋಡಿನ ಬರೆಯು ಮಳೆಗೆ ಕುಸಿತಗೊಂಡಿದೆ. ಇದರಿಂದಾಗಿ ಬರಮೇಲು ಹರಿಪ್ರಸಾದ್‌ರವರ ತೋಟಕ್ಕೆ ನೀರಿನ ಹರಿವು ಜಾಸ್ತಿಯಾಗಿದ್ದು ತೆಗ್ಗು ಶಾಲೆಯ ಕಡೆಗೆ ಹೋಗುವ ಕಾಲು ದಾರಿಯು ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಈ ಭಾಗದ ನಿವಾಸಿಗಳಿಗೆ ದಾರಿ ಇಲ್ಲದಾಗಿದೆ. ವಿಷಯ ತಿಳಿದ ಸಂಬಂಧಿಸಿದ ವಾರ್ಡ್ ಮೆಂಬರ್ ಅಬ್ದುಲ್ ಖಾದರ್ ಮೇರ್ಲ ಹಾಗೂ ಗ್ರಾಮ ಸಹಾಯಕ ನಾರಾಯಣರವರು ಸ್ಥಳಕ್ಕೆ ಭೇಟಿ ಕೊಟ್ಟು ವರದಿ ದಾಖಲಿಸಿರುತ್ತಾರೆ. ಸಂಬಂಧಪಟ್ಟ ಇಲಾಖೆಗೆ ತಿಳಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here