ರಸ್ತೆಗೆ ವಾಲಿದ ಮರ: ಅನಾಹುತ ತಪ್ಪಿಸಿದ ಅರಣ್ಯ ಇಲಾಖೆ

0

ಪುತ್ತೂರು: ಮಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರದಲ್ಲಿ ರಸ್ತೆ ಬದಿಯಲ್ಲಿದ್ದ ಭಾರೀ ಗಾತ್ರದ ಮರವೊಂದು ಗಾಳಿ , ಮಳೆಗೆ ರಸ್ತೆಗೆ ವಾಲಿಕೊಂಡಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು ಮಾತ್ರವಲ್ಲದೆ ವಾಹನದ ಮೇಲೆ ಬೀಳುವ ಹಂತದಲ್ಲಿದ್ದ ಅಪಾಯಕಾರಿ ಮರದ ಗೆಲ್ಲನ್ನು ಅರಣ್ಯ ಇಲಾಖೆ ತೆರವುಗೊಳಿಸುವ ಮೂಲಕ ಸಂಭಾವ್ಯ ಅನಾಹುತವನ್ನು ತಪ್ಪಿಸಿದೆ.

ರಸ್ತೆ ಬದಿಯಲ್ಲಿದ್ದ ಮರವನ್ನು ಆವರಿಸಿಕೊಂಡಿದ್ದ ಭಾರೀ ಗಾತ್ರದ ಬಳ್ಳಿಗಳು ಮರವನ್ನು ವಾಲುವಂತೆ ಮಾಡಿತ್ತು. ದೊಡ್ಡ ವಾಹನಗಳು ಸಂಚರಿಸುವಾಗ ಮರದ ಗೆಲ್ಲುಗಳು ತಾಗುತ್ತಿತ್ತು. ಈ ಬಗ್ಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪಾಣಾಜೆ ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್ ರೈ ಮರದ ಗೆಲ್ಲನ್ನು ತಕ್ಷಣ ತೆರವು ಮಾಡಿಸಿದ್ದಾರೆ. ಕುಂಬ್ರ ಸಮಾಜ ಸೇವಕರಾದ ಸಲಾಮುದ್ದೀನ್ ಕುಂಬ್ರ, ಲತೀಫ್ ಕುಂಬ್ರ, ಸಮೀರ್ ಕುಂಬ್ರ, ಚೇತನ್ ಕುಂಬ್ರ, ಅರಣ್ಯ ರಕ್ಷಕ ಲಿಂಗರಾಜು, ಅಬ್ಬಾಸ್ ಕುಂಬ್ರ, ಮೆಸ್ಕಾಂ ಇಲಾಖೆಯ ಚಂದ್ರ, ಹಾರಿಸ್ ಕೋಳಿಗದ್ದೆ, ಲಾರಿ ಚಾಲಕ ಅಬ್ಬಾಸ್ ಪರ್ಪುಂಜ ಮೊದಲಾದವರು ಅಪಾಯಕಾರಿ ತೆರವುಗೊಳಿಸಿದ್ದಾರೆ. ಮರ ತೆರವು ಕಾರ್ಯಾಚರಣೆಯಿಂದ ಸುಮಾರು ಒಂದು ಗಂಟೆಗಳ ಕಾಲ ಹೆದ್ದಾರಿ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು.

LEAVE A REPLY

Please enter your comment!
Please enter your name here