ಪುತ್ತೂರು : ಇತ್ತೀಚಿಗೆ ನಿಧನರಾದ ಚಿಕ್ಕಮುಡ್ನೂರು ಗ್ರಾಮದ ಬಡಾವು ದಿ.ಸೇಸಪ್ಪ ಗೌಡರ ಪತ್ನಿ, ಬಡಾವು ಕುಟುಂಬದ ಹಿರಿಯರಾಗಿದ್ದ ಚೆನ್ನಮ್ಮ ರವರ ವೈಕುಂಠ ಸಮಾರಾಧನೆ ಸ್ವಗೃಹದಲ್ಲಿ ಜು.3ರಂದು ನಡೆಯಿತು. ಕಾರ್ಕಳ ಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿಳಿಮಲೆ ಪದ್ಮನಾಭ ಗೌಡ ಅವರು ನುಡಿನಮನ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದೆರು. ಈ ಸಂದರ್ಭದಲ್ಲಿ ಮೃತರ ಪುತ್ರರಾದ ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿ ಸೋಮಪ್ಪ ಗೌಡ ಬಡಾವು, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಲೆಕ್ಕಪರಿಶೋಧಕ ಶೀನಪ್ಪ ಗೌಡ ಬಡಾವು, ದರ್ಬೆ ಪ್ರಶಾಂತ್ ಮಹಲ್ನ ಮ್ಯಾನೇಜರ್ ರಾಮಣ್ಣ ಗೌಡ ಬಡಾವು, ಪುತ್ರಿ ಕಮಲ ಮೈಸೂರು, ಅಳಿಯ ನಿವೃತ್ತ ಪೊಲೀಸ್ ಅಧಿಕಾರಿ ಕಮಲಾಕ್ಷ ಮೈಸೂರು , ಸೊಸೆಯಂದಿರಾದ ಲಲಿತಾ, ಲೀಲಾವತಿ , ಲೀಲಾವತಿ, ಮೊಮ್ಮಕ್ಕಳು, ಮರಿಮೊಮ್ಮಕ್ಕಳು, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷರು ಹಾಗೂ ಸದಸ್ಯರು, ವಿಜಯ್ ಬ್ಯಾಂಕ್ ನಿವೃತ್ತ ಅಧಿಕಾರಿಗಳು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರು ಉಪಸ್ಥಿತರಿದ್ದರು.