ಐತ್ತೂರು: ಮರ ಅಕ್ರಮ ಸಾಗಾಟ ಆರೋಪ; ಅರಣ್ಯಾಧಿಕಾರಿಗಳಿಂದ ಲಾರಿ ವಶಕ್ಕೆ

0

ಕಡಬ: ಮಾವು ಹಾಗೂ ಹಲಸಿನ ಮರ ಕಡಿದು ಅಕ್ರಮ ಸಾಗಾಟ ಮಾಡಿರುವ ಆರೋಪದಲ್ಲಿ ವಾಹನ ಹಾಗೂ ವ್ಯಕ್ತಿಯನ್ನು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಶನಿವಾರ ನಡೆದಿದೆ.

ಐತ್ತೂರು ಗ್ರಾಮದ ನೆಟ್ಟಣಬೈಲು ನಿತಿನ್ ಆರೋಪಿ. ಅವರು ಅನುಮತಿ ರಹಿತವಾಗಿ ಅಕ್ರಮವಾಗಿ ಮರ ಕಡಿದು ಲಾರಿಯಲ್ಲಿ ಸಾಗಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅರಣ್ಯಾಧಿಕಾರಿಗಳು ಆರೋಪಿ ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಯನ್ನು ಬಿಡುಗಡೆ ಮಾಡಿದ್ದಾರೆ. ಮರ ಸರಕಾರಿ ಜಾಗದಿಂದ ಕಡಿಯಲಾಗಿದೆ ಎಂದು ತಿಳಿದುಬಂದಿದ್ದು, ಆರೋಪಿ ಅಕ್ರಮ-ಸಕ್ರಮ ಭೂಮಿಯಿಂದ ಕಡಿದಿರುವುದಾಗಿ ತಿಳಿಸಿದ್ದು, ಈ ಬಗ್ಗೆ ದಾಖಲೆ ಸಲ್ಲಿಸಲು ಅಧಿಕಾರಿಗಳು ತಿಳಿಸಿದ್ದು, ಆ ಬಳಿಕ ಮುಂದಿಮ ಕ್ರಮ ಕೈಗೊಳ್ಳುವುದಾಗಿ ತಿಳಿದುಬಂದಿದೆ.

LEAVE A REPLY

Please enter your comment!
Please enter your name here