ಮೈಸೂರಿನ ಹಿಂದೂ ಯುವತಿಯನ್ನು ಮದುವೆಯಾದ ವಿಟ್ಲದ ಮುಸ್ಲಿಂ ಯುವಕ; ವೆಬ್ ಸಹಿತ ಸಾಮಾಜಿಕ‌ ಜಾಲತಾಣಗಳಲ್ಲಿ ವೈರಲ್

0

ವಿಟ್ಲ: ವಿಟ್ಲ ಮುಸ್ಲಿಂ ಯುವಕನೋರ್ವ ಮೈಸೂರಿನ ಹಿಂದೂ ಯುವತಿಯನ್ನು ವಿವಾಹವಾಗಿರುವ ವಿಚಾರ ವಿವಿಧ ವೆಬ್ಸೈಟ್ ಸಹಿತ ಸಾಮಾಜಿಕ‌ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ವಿಟ್ಲ ನೀರಕಣಿ ಮಾರ್ನೆಮಿಗುಡ್ಡೆ ನಿವಾಸಿ ಉಬೈದ್(27 ವ‌.) ಎಂಬವರು ಮೈಸೂರು ಲೋಕನಾಯಕನ ನಗರದ ಸೌಂದರ್ಯ(24 ವ.) ಎಂಬವರನ್ನು ಮದುವೆಯಾಗಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗುತ್ತಿದೆ.

ಉಬೈದ್ ಮತ್ತು ಸೌಂದರ್ಯ ಮೈಸೂರಿನಲ್ಲಿ ರಿಜಿಸ್ಟ್ರರ್ ವಿವಾಹವಾಗಿದ್ದು, ಅವರ ಮದುವೆಯ ರಿಜಿಸ್ಟ್ರರ್ ಪತ್ರ ಇದೀಗ ವೆಬ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೇರಳದಲ್ಲಿ ನಿಶ್ಚಿತಾರ್ಥವಾದ ಈ ಜೋಡಿ ಮೈಸೂರಿನ ರಿಜಿಸ್ಟ್ರರ್ ಕಛೇರಿಯಲ್ಲಿ ವಿವಾಹವಾಗಿದೆ ಎಂದು ತಿಳಿದು ಬಂದಿದೆ. ಇದೇ ತಿಂಗಳು ಔತಣ ಕೂಟ ಆಯೋಜಿಸಲು ತಯಾರಿ ನಡೆಯುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.

ಘಟನೆ ಬಗ್ಗೆ ಹಿಂದೂ ಸಂಘಟನೆಗಳ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಇದೊಂದು ವ್ಯವಸ್ಥಿತ ಲವ್ ಜಿಹಾದ್ ಎಂದು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here