ಕುರಿಯ ಏಳ್ನಾಡುಗುತ್ತು ತರವಾಡು ಮನೆಯಲ್ಲಿ ಸನ್ಮಾನ ಕಾರ್ಯಕ್ರಮ

0

ಪುತ್ತೂರು: ಕುರಿಯ ಏಳ್ನಾಡುಗುತ್ತಿನ ತರವಾಡು ಮನೆಗೆ ಪಾರಿವಾಳಗಳ ಹಾವಳಿಯನ್ನು ತಡೆಯಲು ಅಂತರ ಮಾಡಿನ ಮೇಲೆ ಸುತ್ತಲೂ ಮರದ ಪ್ರೇಮ್ ನೊಂದಿಗೆ ನೆಟ್ ಅಳವಡಿಕೆ ಕೆಲಸವನ್ನು ಸಮರ್ಪಕವಾಗಿ ಬಹಳ ಶ್ರಮಪಟ್ಟು ಸುಂದರವಾಗಿ ಮಾಡಿ ಕೊಟ್ಟಿರುವ ಕುರಿಯ ಗ್ರಾಮದ ಪೊಯ್ಯೇ ನಿವಾಸಿ ಭಾಸ್ಕರ ಪೂಜಾರಿ ಮತ್ತು ಕೆದಂಬಾಡಿ ಗ್ರಾಮದ ಮಾರುತಿಪುರ ನಿವಾಸಿ ಉಮೇಶ್ ಆಮೀನ್ ಇವರಿಗೆ ಸನ್ಮಾನ ಕಾರ್ಯಕ್ರಮವು ಕುರಿಯ ಏಳ್ನಾಡುಗುತ್ತಿನ ತರವಾಡು ಮನೆಯಲ್ಲಿ ನಡೆಯಿತು. ಗುತ್ತಿನ ಯಜಮಾನ ವಿಶ್ವನಾಥ ರೈ ಕುರಿಯ ಮಾಡಾವು ಮತ್ತು ಕೆ ಸೀತಾರಾಮ ರೈ ಕುರಿಯ ರವರು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೈ ಕುರಿಯರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚೆನ್ನಪ್ಪ ರೈ ಬಳಜ್ಜ ರವರು ಸನ್ಮಾನಿತರಿಗೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ವಿನೋದ್ ಕುಮಾರ್ ರೈ ಕುರಿಯ, ದಿವಾಕರ ಆಚಾರ್ಯ ಕೈಕಾರ, ಗುಣಾಶ್ರಿ ಆರ್ ರೈ ಕುರಿಯ, ಜಯಶೀಲ ರೈ ಕುರಿಯ, ಪೂರ್ಣಿಮಾ ಬಿ ಬಲ್ಲಾಳ್ ಕುರಿಯ, ಶರಣಾಕ್ಷಿ ಆಳ್ವ ಕುರಿಯ, ವಾಣಿಶ್ರೀ ರೈ ಕುರಿಯ , ಸನ್ನುತ ಎಸ್ ರೈ ಕುರಿಯ,ವಿಶಾಲಾಕ್ಷಿ ವಿ ರೈ ಕುರಿಯ, ವಸಂತ ಗೌಡ ಪಾಪಿನ ಮಂಡೆ ಕುರಿಯ, ವರ್ಷಿತ್ ರೈ ಕುರಿಯ, ಹಾಗೂ ಸನ್ಮಾನಿತರ ಮನೆಯವರು ಉಪಸ್ಥಿತರಿದ್ದರು. ಅಶಾ ಮಾಧವ ರೈ ಪ್ರಾರ್ಥಿಸಿದರು. ಎಸ್ ಮಾಧವ ರೈ ಕುಂಬ್ರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here