ರಾಷ್ಟ್ರ ಮಟ್ಟದ ಸ್ವಚ್ಛ ವಿದ್ಯಾಲಯ ಪುರಸ್ಕಾರ ಮೂಡಂಬೈಲು ಹಿ.ಪ್ರಾ.ಶಾಲೆ ರಾಜ್ಯ ಹಂತಕ್ಕೆ ಆಯ್ಕೆ

0

ಪುತ್ತೂರು: ಭಾರತ ಸರಕಾರದ ಸ್ವಚ್ಛಭಾರತ ಮಿಶನ್ ನಡೆಸುವ ರಾಷ್ಟ್ರಮಟ್ಟದ ಸ್ಪರ್ಧೆ ಸ್ವಚ್ಛವಿದ್ಯಾಲಯ ಪುರಸ್ಕಾರದಲ್ಲಿ ಬಂಟ್ವಾಳ ತಾಲೂಕಿನ ಮೂಡಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಮಟ್ಟದ ಸ್ವಚ್ಛ ವಿದ್ಯಾಲಯ ಪುರಸ್ಕಾರ ಲಭಿಸಿದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಜಿಲ್ಲಾಹಂತ, ರಾಜ್ಯಹಂತ, ಮತ್ತು ರಾಷ್ಟ್ರ ಹಂತದಲ್ಲಿ ಈ ಸ್ಪರ್ಧೆ ನಡೆಯುತ್ತದೆ. ಜಿಲ್ಲಾ ಹಂತದಲ್ಲಿ ಒಟ್ಟು 38 ಶಾಲೆಗಳನ್ನು 2021-22 ನೇ ಸಾಲಿಗೆ ಆಯ್ಕೆ ಮಾಡಲಾಗಿತ್ತು. ಅವುಗಳಲ್ಲಿ ೮ ಶಾಲೆಗಳನ್ನು ರಾಜ್ಯ ಹಂತಕ್ಕೆ ಆಯ್ಕೆ ಮಾಡಲಾಗಿದ್ದು ಇದರಲ್ಲಿ ರಾಜ್ಯ ಹಂತಕ್ಕೆ ಬಂಟ್ವಾಳ ತಾಲೂಕಿನಿಂದ ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ ಎಂದು ಶಾಲಾ ಮುಖ್ಯಶಿಕ್ಷಕ ಅರವಿಂದ್ ಕುಡ್ಲ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here